ಲಕ್ನೋ: ಮೊದಲ ಕಾಗದ ರಹಿತ ಬಜೆಟ್ ಅನ್ನು ಇಂದು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಲಾಗುತ್ತಿದೆ. ಕಾಗದ ರಹಿತ ಬಜೆಟ್ ಮಂಡಿಸಿದ ದೇಶದ ಮೊದಲ ರಾಜ್ಯವಾಗಿ ಯುಪಿ ಹೊರಹೊಮ್ಮಲಿದೆ.
ವರದಿಗಳ ಪ್ರಕಾರ, ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ಇತಿಹಾಸದಲ್ಲೇ ಮೊದಲ ಕಾಗದ ರಹಿತ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದನ್ನು ಡಿಡಿ ಯುಪಿಯಲ್ಲಿಯೂ ನೇರ ಪ್ರಸಾರ ಮಾಡಲಾಗುತ್ತದೆ. ಬಜೆಟ್ ಮುಖ್ಯಾಂಶಗಳನ್ನು ವೀಕ್ಷಿಸಲು ರಾಜ್ಯ ವಿಧಾನಸಭೆಯ ಎಲ್ಲಾ ಸದಸ್ಯರಿಗೆ ಐಪ್ಯಾಡ್ಗಳನ್ನು ಒದಗಿಸಲಾಗಿದೆ, ಇದು ಸದನದಲ್ಲಿ ಎರಡು ದೊಡ್ಡ ಪರದೆಯಲ್ಲಿಯೂ ಲಭ್ಯವಿರುತ್ತದೆ.
ಗೂಗಲ್ ಪ್ಲೇ ಸ್ಟೋರ್ನಿಂದ ‘ಉತ್ತರ ಪ್ರದೇಶ ಸರ್ಕಾರ್ ಕಾ ಬಜೆಟ್’ ಹೆಸರಿನೊಂದಿಗೆ ಡೌನ್ಲೋಡ್ ಮಾಡಬಹುದಾದ ಆ್ಯಪ್ನಲ್ಲಿ ಸಹ 2021-2022ರ ಬಜೆಟ್ ಲಭ್ಯವಿರುತ್ತದೆ. ಹಣಕಾಸು ಸಚಿವರು ಬಜೆಟ್ ಅನ್ನು ಮಂಡನೆ ಮಾಡಿದ ನಂತರ ಬಜೆಟ್ ಸಹ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ಈ ಬಾರಿ ಬಜೆಟ್ 5.12 ಲಕ್ಷ ಕೋಟಿ ರೂ.ಗಳ ಕೊನೆಯ ಬಜೆಟ್ ಮೊತ್ತವನ್ನು ಮೀರಬಹುದು ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.