ನವದೆಹಲಿ: ಯೋಗ ಗುರು ರಾಮದೇವ್ ಬಾಬಾ ಅವರು ಶುಕ್ರವಾರ ಕೋವಿಡ್-19 ಗಾಗಿನ ಪತಂಜಲಿ ಔಷಧದ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಬಿಡುಗಡೆ ಮಾಡಿದ್ದಾರೆ.
ಪತಾಂಜಲಿಯ ಕೊರೋನಿಲ್ ಔಷಧವು ಡಬ್ಲ್ಯುಎಚ್ಒ ಪ್ರಮಾಣೀಕರಣದ ಅನ್ವಯ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ನ ಆಯುಷ್ ವಿಭಾಗದಿಂದ ಸರ್ಟಿಫಿಕೇಟ್ ಆಫ್ ಫಾರ್ಮಾಸ್ಯುಟಿಕಲ್ ಪ್ರೊಡಕ್ಟ್ (ಕೋಪಿಪಿ) ಪಡೆದಿದೆ ಎಂದು ಪತಂಜಲಿ ಹೇಳಿಕೆಯಲ್ಲಿ ತಿಳಿಸಿದೆ.
CoPP ಅಡಿಯಲ್ಲಿ, ಕೊರೊನಿಲ್ ಅನ್ನು ಈಗ 158 ದೇಶಗಳಿಗೆ ರಫ್ತು ಮಾಡಬಹುದಾಗಿದೆ.
ಈ ಬಗ್ಗೆ ರಾಮದೇವ್ ಮಾತನಾಡಿ, “ಪ್ರಕೃತಿಚಿಕಿತ್ಸೆಯ ಆಧಾರದ ಮೇಲೆ ಕೈಗೆಟುಕುವ ಚಿಕಿತ್ಸೆಯನ್ನು ಒದಗಿಸುವಾಗ ಕೊರೊನಿಲ್ ಮಾನವೀಯತೆಗೆ ಸಹಾಯ ಮಾಡುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.