ವಿಟ್ಲ್ಲ: ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಷ್ಷಷ್ಠಿಯಾಬ್ದ ಸ್ಮರಣಾರ್ಥ ಭವಾನಿ ಫೌಂಡೇಶನ್ (ರಿ.) ಮುಂಬಯಿ, ಸಂಸ್ಥೆಯು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಧರ್ಮಾರ್ಥ ಆರೋಗ್ಯ ತಪಾಸಣಾ ಶಿಬಿರವನ್ನು ಆ.22.ರಂದು ಬೆಳಿಗ್ಗೆ 9.00 ಗಂಟೆಯಿಂದ ಬಂಟ್ವಾಳ ತಾಲೂಕು ವಿಟ್ಲದ ಕೇಪು-ಅಡ್ಯನಡ್ಕದ ಕುದ್ದುಪದವು ಉದಯಗಿರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದೆ.
ದಿವ್ಯಶಕ್ತಿ ಯುವಕ ಮಂಡಲ (ರಿ.) ಕುದ್ದುಪದವು, ದುರ್ಗಾಮಿತ್ರವೃಂದ, ಮೈರಾ-ಕೇಪು, ಉಳ್ಳಾಲ್ತಿ ಭಜನಾ ಮಂಡಳಿ ಅಮೈ ಹಾಗೂ ಗುರೂಜಿ ಯುವಕ ಮಂಡಲ ಅಡ್ಯನಡ್ಕ ಸಂಸ್ಥೆಗಳ ಸಹಯೋಗದಲ್ಲಿ ಜರಗುವ ಶಿಬಿರವನ್ನು ಎ.ಜೆ. ಹಾಸ್ಪಿಟಲ್ ಎಂಡ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮಂಗಳೂರು ಸಂಸ್ಥೆಯು ನಡೆಸಲಿದೆ. ಶಿಬಿರದಲ್ಲಿ ವಿವಿಧ ತರದ ಆರೋಗ್ಯ ತಪಾಸಣೆಗಳು ಉಚಿತವಾಗಿ ನಡೆಸಲಾಗುವುದು. ಅಂತೆಯೇ ಶಿಬಿರದಲ್ಲಿ ಕಣ್ಣಿನ ಪರೀಕ್ಷೆ ನಡೆಸಿ ಅಗತ್ಯವುಳ್ಳವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗುವುದು. ಹಲ್ಲುಗಳ (ದಂತ) ಪರೀಕ್ಷೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿ ಅರ್ಹರಿಗೆ ಧರ್ಮಾರ್ಥ ಔಷಧಿಗಳನ್ನು ನೀಡಲಾಗುವುದು.
ಅದೇ ದಿನ ಬೆಳಿಗ್ಗೆ ತನ್ನ ತವರೂರಲ್ಲೂ ಎ.ಜೆ. ಹಾಸ್ಪಿಟಲ್ ಎಂಡ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮಂಗಳೂರು ಇದರ ಸಂಸ್ಥಾಪಕ ಎ.ಜೆ. ಶೆಟ್ಟಿ ಅವರು ಭವಾನಿ ಫೌಂಡೇಶನ್ (ರಿ.) ಸಂಸ್ಥೆಯನ್ನು ಲೋಕಾರ್ಪಣೆ ನಡೆಸಲಿದ್ದಾರೆ. ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ-ಕಾರ್ಯಾಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಲಲಿದ್ದು, ದ.ಕ ಜಿಲ್ಲಾ ಪಂಚಾಯತ್ ಪ್ರಾಥಮಿಕ ಆರೋಗ್ಯ ಕೇಂದ್ರ, ಅಡ್ಯನಡ್ಕ-ವಿಟ್ಲ ಇದರ ಆರೋಗ್ಯಾಧಿಕಾರಿ ಡಾ. ಸುಬೋಧ್ ಕುಮಾರ್ ರೈ ಶಿಬಿರದ ಉದ್ಘಾಟನೆ ನಡೆಸಲಿದ್ದಾರೆ. ಕೇಪು-ವಿಟ್ಲ ಗ್ರಾಮ ಪಂಚಾಯತ್ ಅಧ್ಯಕ್ಷ ತಾರನಾಥ ಆಳ್ವ, ದ.ಕ ಜಿಲ್ಲಾ ಪಂಚಾಯತ್ (ಮಾಣಿ) ಸದಸ್ಯ ಚೆನ್ನಪ್ಪ ಆರ್.ಕೋಟ್ಯಾನ್, ಬಂಟ್ವಾಳ ತಾಲೂಕು ಪಂಚಾಯತ್ (ಕೇಪು) ಸದಸ್ಯೆ ಲಲಿತಾ ಶಿವಪ್ಪ ನಾಯ್ಕ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಭವಾನಿ ಫೌಂಡೇಶನ್ನಲ್ಲಿ ಶ್ರೀಮತಿ ಸರಿತಾ ಕುಸುಮೋದರ ಶೆಟ್ಟಿ, ಜೀಕ್ಷಿತ್ ಕುಸುಮೋದರ ಶೆಟ್ಟಿ, ಚೆಲ್ಲಡ್ಕ, ಕು| ಶೀಖಾ ಕೆ.ಶೆಟ್ಟಿ, ರಾಧಾಕೃಷ್ಣ ಡಿ.ಶೆಟ್ಟಿ, ಚೆಲ್ಲಡ್ಕ ಪದ್ಮನಾಭ ಡಿ.ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ, ರೋನ್ಸ್ ಬಂಟ್ವಾಳ್, ನ್ಯಾ| ಬಿ.ಮೊಯಿದ್ದೀನ್ ಮುಂಡ್ಕೂರು, ಧರ್ಮಪಾಲ ಯು.ದೇವಾಡಿಗ, ಪಂ| ನವೀನ್ಚಂದ್ರ ಆರ್. ಸನೀಲ್, ಮುನ್ನಾಲಾಯಿಗುತ್ತು ಸಚ್ಚಿದಾನಂದ ಪಿ.ಶೆಟ್ಟಿ, ಪ್ರೇಮನಾಥ ಶೆಟ್ಟಿ ಮುಂಡ್ಕೂರು, ಗೋಪಾಲಕೃಷ್ಣ ಕುಂದರ್ ವಿಶ್ವಸ್ಥ ಸದಸ್ಯರುಗಳಾಗಿ ಸೇವೆ ಸಲ್ಲಿಸಿಸುತ್ತಿದ್ದಾರೆ.
ನಾಡಿನ ಸರ್ವ ಬಾಂಧವರು, ಶಾಲೆ-ಕಾಲೇಜು ವಿದ್ಯಾಥಿಗಳು ಮಾತ್ರವಲ್ಲದೆ ವಿಟ್ಲ ಆಸುಪಾಸಿನ ಮುಂಬಯಿ ನಿವಾಸಿಗರೂ ಪಾಲ್ಗೊಂಡು ಈ ಶಿಬಿರದ ಫಲಾನುಭವ ಪಡೆಯುವಂತೆ ಉಭಯ ಸಂಸ್ಥೆಗಳ ಸಂಘಟಕರು ವಿನಂತಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷ ಮೌನೇಶ್ ವಿಶ್ವಕರ್ಮ (9481017606), ಫೌಂಡೇಶನ್ನ ರಾಧಾಕೃಷ್ಣ ಡಿ.ಶೆಟ್ಟಿ (9731529131) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.