ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಶಿಕ್ಷಣ ಸಚಿವಾಲಯ, ಮೈಗೌವ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ವಿಜ್ಞಾನ ಕ್ಷೇತ್ರದಲ್ಲಿನ ಮಹಿಳೆಯರನ್ನು ಗೌರವಿಸಲು ಆನ್ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ.
ಈ ಅಭಿಯಾನವು ವಿಜ್ಞಾನ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್ಟಿಇಎಂ) ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಹಿಳೆಯರಿಗೆ ಗೌರವ ನೀಡುವ ಉದ್ದೇಶವನ್ನು ಹೊಂದಿದೆ. ಇದು STEMನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಯುವತಿಯರನ್ನು ಪ್ರೋತ್ಸಾಹಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಅಭಿಯಾನವು ಗಣಿತ ಮತ್ತು ವಿಜ್ಞಾನದಲ್ಲಿ ಉತ್ತಮ ಸಾಧನೆ ಮಾಡಿದ ದೇಶಾದ್ಯಂತದ ಯುವತಿಯರನ್ನು ಗೌರವಿಸುತ್ತದೆ.
ಅಭಿಯಾನದ ಭಾಗವಾಗಿ, ನಾಗರಿಕರು ತಮ್ಮ ರಾಜ್ಯ / ಜಿಲ್ಲೆಯ ಯುವ STEM ಸಾಧಕರನ್ನು ಪರ್ಸನಲೈಸ್ಡ್ ಕಾರ್ಡ್ ಮೂಲಕ ಅಭಿನಂದಿಸಬಹುದು ಮತ್ತು ಇದರಲ್ಲಿ ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಬಹುದು. ಮೈಗೌವ್ ಪ್ಲಾಟ್ಫಾರ್ಮ್ನಲ್ಲಿ ಇಂತಹ 700 ಕ್ಕೂ ಹೆಚ್ಚು STEM ಸಾಧಕರು ಕಾಣಿಸಿಕೊಂಡಿದ್ದಾರೆ.
ಈ ಅಭಿಯಾನವನ್ನು ಫೆಬ್ರವರಿ 11 ರಂದು ಪ್ರಾರಂಭಿಸಲಾಯಿತು, ಯಾಕೆಂದರೆ ಈ ದಿನವನ್ನು ವಿಜ್ಞಾನದಲ್ಲಿ ಅಂತರರಾಷ್ಟ್ರೀಯ ಮಹಿಳಾ ಮತ್ತು ಬಾಲಕಿಯರ ದಿನವೆಂದು ಆಚರಿಸಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರು ವಹಿಸುವ ನಿರ್ಣಾಯಕ ಪಾತ್ರವನ್ನು ದಿನ ಗುರುತಿಸುತ್ತದೆ.
ಮಹಿಳೆಯರು ಮತ್ತು ಬಾಲಕಿಯರಿಗೆ ವಿಜ್ಞಾನದಲ್ಲಿ ಭಾಗವಹಿಸಲು ಪೂರ್ಣ ಮತ್ತು ಸಮಾನ ಪ್ರವೇಶವನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಫೆಬ್ರವರಿ 11 ಅನ್ನು 2015 ರಲ್ಲಿ ವಿಜ್ಞಾನದಲ್ಲಿ ಮಹಿಳಾ ಮತ್ತು ಬಾಲಕಿಯರ ಅಂತರರಾಷ್ಟ್ರೀಯ ದಿನವೆಂದು ಗುರುತಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.