ಮಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಬಿಳಿ ಅಡಿಕೆಗೆ ರೂ 505 ರಿಂದ 520 ರ ವರೆಗೆ ಧಾರಣೆ ಕಂಡುಬಂದಿದ್ದು, ಕರಾವಳಿ ಭಾಗ ಮತ್ತು ಕೇರಳದ ಗಡಿ ಭಾಗಗಳ ಅಡಿಕೆ ಬೆಳೆಗಾರರು ಸಂತಸ ಪಡುವಂತಾಗಿದೆ.
ಹೊಸ ಅಡಿಕೆಗೆ ಕೆಜಿಗೆ 425 ರಿಂದ 440 ರೂ. ವರೆಗೆ ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಬಿಳಿ ಅಡಿಕೆಗೆ ಕೆಜಿಗೆ 260 ರೂ. ಮತ್ತು ಹೊಸ ಅಡಿಕೆ ಕೆಜಿಗೆ 220 ರೂ. ಗಳಿಗೆ ಮಾರಾಟ ಮೌಲ್ಯವನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿ ಅಡಿಕೆ ಬೆಳೆಯ ಪ್ರಮಾಣ ಕುಸಿತ ಕಂಡಿದ್ದು, ಈ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಬೆಲೆ ಏರಿಕೆಗೂ ಕಾರಣವಾಗಿದ್ದು, ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಈ ಹಿಂದೆಲ್ಲಾ ಇಂಡೋನೇಷ್ಯಾ, ಮಯನ್ಮಾರ್ ಮೊದಲಾದೆಡೆಗಳಿಂದ ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಬರುತ್ತಿತ್ತು. ಆದರೆ ಈ ಬಾರಿ ಅದಕ್ಕೂ ತಡೆ ಬಿದ್ದಿದ್ದು, ಈ ಕಾರಣದಿಂದಲೇ ಕರಾವಳಿಯಲ್ಲಿ ಅಡಿಕೆಯ ಬೆಲೆ ಏರಿಕೆ ಕಾಣುತ್ತಿದೆ. ಹಾಗೆಯೇ, ಕೊಳೆರೋಗ ಸೇರಿದಂತೆ ಇನ್ನಿತರ ಸಮಸ್ಯೆಗಳೂ ಈ ಬಾರಿಯ ಅಡಿಕೆ ಕೃಷಿಯ ಮೇಲೆ ಪರಿಣಾಮ ಬೀರಿದ್ದು, ಉತ್ತರ ಭಾರತದಿಂದ ಅಡಿಕೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳು ಇರುವುದಾಗಿಯೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.