ಹುಬ್ಬಳ್ಳಿ: ನಗರದ ಪರಿವರ್ತನ ಗುರುಕುಲ ಶಾಲೆಯ ವಿದ್ಯಾರ್ಥಿನಿ, ಹತ್ತು ವರ್ಷದ ಸ್ತುತಿ ಮೋಹನ್ ಕುಲಕರ್ಣಿ ಅವರು ಸ್ಕೇಟಿಂಗ್ನ ಇನ್ಲೈನ್ ವಿಭಾಗದ ಮೂರು ಹೂಲಾಹೂಪ್ನ 100 ಮೀ. ಗುರಿಯನ್ನು 23.35 ಸೆಕೆಂಡ್ ಗಳಲ್ಲಿ ತಲುಪುವ ಮುಖೇನ ಗಿನ್ನಿಸ್ ದಾಖಲೆಯ ಸಾಧನೆ ಮಾಡಿದ್ದಾರೆ.
ಕಡಿಮೆ ಸಮಯದಲ್ಲಿ ಈ ಗುರಿಯನ್ನು ತಲುಪುವ ಮೂಲಕ ಈ ಹಿಂದೆ ಸ್ಕೇಟಿಂಗ್ ಇನ್ಲೈನ್ ವಿಭಾಗದ ಹೂಲಾ ಹೂಪ್ನಲ್ಲಿ ಆಸ್ಟ್ರೇಲಿಯಾದ ಮರ್ವಾ ಇಬ್ರಾಹಿಂ ಅವರ 27 ಸೆಕೆಂಡುಗಳ ದಾಖಲೆಯನ್ನು ಮುರಿದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ತುತಿ, ಈ ಗುರಿಯನ್ನು ಸಾಧಿಸುವುದಕ್ಕಾಗಿ ಅವಿರತ ಶ್ರಮ ಪಟ್ಟಿದ್ದೇನೆ. ಈ ಪರಿಶ್ರಮದಿಂದಲೇ ಇಂದು ತಾನು ಅಂತರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ ಮತ್ತು ಹೂಪ್ ಗಳ ಚಾಂಪಿಯನ್ ಆಗಿದ್ದೇನೆ. ವಿದ್ಯಾಭ್ಯಾಸದ ಜೊತೆಗೆ, ಕ್ರೀಡೆಯಲ್ಲಿಯೂ ಸಾಧನೆ ಮಾಡಬೇಕು ಎನ್ನುವ ಬಯಕೆಯನ್ನಿರಿಸಿಕೊಂಡು ಪ್ರತಿನಿತ್ಯ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮಗಳ ಸಾಧನೆಯ ಬಗ್ಗೆ ಮಾತನಾಡಿರುವ ಸ್ತುತಿ ಅವರ ತಾಯಿ ರಶ್ಮಿ ಕುಲಕರ್ಣಿ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ಎಲ್ಲಾ ನಿಯಮಗಳನ್ನು ಅನುಸರಿಸಿಕೊಂಡು ಫೆ. 8 ರಂದು ಸ್ತುತಿ ಈ ದಾಖಲೆಯ ಪ್ರಯತ್ನ ಮಾಡಿದ್ದಾರೆ. ಅವರ ಈ ಪ್ರಯತ್ನದ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಕಳುಹಿಸಿಕೊಡಲಾಗಿದೆ. ಈ ವಿಡಿಯೋದ ಟೆಕ್ನಿಕಲ್ ವಿಚಾರಗಳನ್ನು ಪರೀಕ್ಷಿಸಿದ ಬಳಿಕ ಈ ಸಾಧನೆಯನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಅನುಮೋದಿಸುತ್ತಾರೆ ಎಂದು ತಿಳಿಸಿದ್ದಾರೆ.
Stuti Kishor Kulkarni, a 10 y.o. from Karnataka's Hubballi made a Guinness World Record for fastest inline skating while spinning hula hoops.https://t.co/8KaHKehOfr
— Pralhad Joshi (@JoshiPralhad) February 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.