ಬೆಂಗಳೂರು: ನಿನ್ನೆಯಷ್ಟೇ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದ ಮೂರು ದಿನಗಳ ಏರೋ ಇಂಡಿಯಾ ಏರ್ ಶೋ-2021 ಸಮಾರಂಭ ಸಮಾರೋಪಗೊಂಡಿದೆ. ಇದರಲ್ಲಿ ಸ್ವದೇಶಿ ನಿರ್ಮಿತ ಹಲವು ಯುದ್ಧ ವಿಮಾನಗಳ ಜೊತೆಗೆ ಪ್ರಮುಖ ಆಕರ್ಷಣೆಯಾಗಿದ್ದ ಮತ್ತೊಂದು ವಿಮಾನವೆಂದರೆ ಅಮೆರಿಕ ವಾಯುಪಡೆಯ ಬಾಂಬರ್ ಬಿ-1ಬಿ ಲ್ಯಾನ್ಸರ್ ವಿಮಾನ.
ಸತತ 26 ಗಂಟೆಗಳ ಹಾರಾಟ ನಡೆಸಿ ಈ ವಿಮಾನ ಭಾರತಕ್ಕೆ ಬಂದಿದ್ದು,ವಾಯುಯಾನದ ಸಂದರ್ಭದಲ್ಲಿಯೇ ನಾಲ್ಕು ಬಾರಿ ಇಂಧನಗಳನ್ನು ಈ ವಿಮಾನಕ್ಕೆ ತುಂಬಲಾಗಿದೆ. ಇದಕ್ಕೂ ಮುನ್ನ 1945 ರ ಸಂದರ್ಭದಲ್ಲಿ ಅಮೆರಿಕ ಬಾಂಬರ್ ವಿಮಾನ ಭಾರತಕ್ಕೆ ಬಂದಿತ್ತು. ಈ ಬಾರಿ ಏರ್ ಶೋ ನಲ್ಲಿಯೂ ಈ ವಿಮಾನ ಪ್ರೇಕ್ಷಕರ ಪ್ರಮುಖ ಆಕರ್ಷಣೆಯಾಗಿತ್ತು.
ಈ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿರುವ ಬಗ್ಗೆ ಮಾತನಾಡಿರುವ ಅಮೆರಿಕ ವಾಯುಪಡೆಯ ಪೈಲಟ್ ಲೆ. ಕರ್ನಲ್ ಮೈಕೆಲ್ ಫೆಸ್ಲರ್, ಈ ಏರ್ ಶೋ ನಮಗೆ ಬಹಳ ಮುಖ್ಯವಾಗಿತ್ತು. ಅಮೆರಿಕ ಇಂತಹ ವಿಚಾರಗಳಲ್ಲಿ ಭಾರತದ ಸಹಯೋಗ ಬಯಸುತ್ತದೆ. ಜೊತೆಗೆ ಭಾರತೀಯ ವಾಯುಪಡೆಯಿಂದ ಮುಂದಿನ ದಿನಗಳಲ್ಲಿ ಸಹಕಾರ ಬಯಸುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.