ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್ನನ್ನು ಗಲ್ಲಿಗೇರಿಸಿದ್ದು ತಪ್ಪು ಎಂಬಂತೆ ಕೆಲ ಮಾಧ್ಯಮಗಳು ಅಭಿಪ್ರಾಯಗಳನ್ನು ಮಂಡಿಸಿದ್ದವು. ಇದನ್ನು ಖಂಡಿಸಿ 3 ಚಾನೆಲ್ಗಳಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಶೋಕಾಸು ನೋಟಿಸನ್ನು ಜಾರಿಗೊಳಿಸಿದೆ.
ದೇಶದ ನ್ಯಾಯಾಂಗ ಮತ್ತು ರಾಷ್ಟ್ರಪತಿಯವರಿಗೆ ಅವಮಾನ ಮಾಡಿರುವ ಖಾಸಗಿ ಟಿವಿ ಚಾನೆಲ್ಗಳಾದ ಎಬಿಪಿ ನ್ಯೂಸ್, ಎನ್ಡಿಟಿವಿ 24×7, ಆಜ್ತಕ್ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಈ ಚಾನೆಲ್ಗಳು ಯಾಕುಬ್ ಗಲ್ಲಿಗೇರಿದ್ದ ದಿನ ಪ್ರಸಾರ ಮಾಡಿದ ವರದಿ ನ್ಯಾಯಾಂಗದ ನಿಲುವಿಗೆ ವಿರುದ್ಧವಾಗಿತ್ತು. ಅಂತಹ ವಿಷಯ ಪ್ರಸಾರ ಮಾಡಿದಕ್ಕೆ ನಿಮ್ಮ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು ಎಂಬುದಕ್ಕೆ 15 ದಿನಗಳೊಳಗೆ ವಿವರಣೆ ನೀಡಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಸೂಚಿಸಿದೆ.
ಎಬಿಪಿ ಮತ್ತು ಆಜ್ತಕ್ ಛೋಟ ಶಕೀಲ್ನೊಂದಿಗೆ ದೂರವಾಣಿ ಸಂಭಾಷಣೆ ನಡೆಸಿತ್ತು, ಇದರಲ್ಲಿ ಆತ ಯಾಕೂಬ್ ಮುಗ್ಧ ಎಂದು ವಾದಿಸಿದ್ದ. ಎನ್ಡಿಟಿವಿ ಯಾಕುಬ್ ವಕೀಲನ ಸಂದರ್ಶನ ಪ್ರಸಾರ ಮಾಡಿತ್ತು. ಇವೆಲ್ಲವೂ ಯಾಕುಬ್ ಮರಣದಂಡನೆಯ ವಿರುದ್ಧವಾಗಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.