ಮೆಕ್ಸಿಕೊ: ಫೆಬ್ರವರಿಯಲ್ಲಿ ಸುಮಾರು 8,70,000 ಡೋಸ್ ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಯೋಜಿಸಿದ್ದೇವೆ ಮತ್ತು ಸ್ಥಳೀಯವಾಗಿಯೂ ಉತ್ಪಾದಿಸುತ್ತೇವೆ ಎಂದು ಮೆಕ್ಸಿಕೊವದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶುಕ್ರವಾರ ಹೇಳಿದ್ದಾರೆ.
ಮೆಕ್ಸಿಕೊ ಮತ್ತು ಅರ್ಜೆಂಟೀನಾ ಲ್ಯಾಟಿನ್ ಅಮೆರಿಕಾದಲ್ಲಿ ವಿತರಿಸಲು ಲಸಿಕೆ ತಯಾರಿಸಲು ಅಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮೆಕ್ಸಿಕನ್ ಬಿಲಿಯನೇರ್ ಕಾರ್ಲೋಸ್ ಸ್ಲಿಮ್ ಅವರ ಫೌಂಡೇಶನ್ ವತಿಯಿಂದ ಇದಕ್ಕೆ ಹಣಕಾಸಿನ ನೆರವು ದೊರೆತಿದೆ.
“ಒಪ್ಪಂದದ ಹೊರತಾಗಿ ನಾವು ಅಸ್ಟ್ರಾಜೆನೆಕಾ ಲಸಿಕೆಗಳನ್ನು ಪಡೆಯುತ್ತಿದ್ದೇವೆ. ಈ ಲಸಿಕೆಗಳನ್ನು ಇಲ್ಲಿ ಮೆಕ್ಸಿಕೊದಲ್ಲಿ ತಯಾರಿಸಲಾಗುತ್ತಿದೆ ಮತ್ತು ನಾವು ಭಾರತದಿಂದ ಕೂಡ ಅಸ್ಟ್ರಾಜೆನೆಕಾವನ್ನು ತರುತ್ತೇವೆ” ಎಂದು ಲೋಪೆಜ್ ಒಬ್ರಡಾರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಮೆಕ್ಸಿಕೊದಲ್ಲಿ ಕೊರೋನಾವೈರಸ್ ಕಾರಣದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 156,579 ಆಗಿದೆ. ಫೈಝರ್ ಲಸಿಕೆಯನ್ನು ಕೂಡ ಅಲ್ಲಿಗೆ ಪೂರೈಸಲಾಗುತ್ತಿದೆ. ಆದರೆ ಕಳೆದ ಕೆಲವು ದಿನಗಳಿಂದ ಈ ಲಸಿಕೆಯ ಪೂರೈಕೆಯಲ್ಲಿ ವಿಳಂಬವಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.