ನವದೆಹಲಿ: ಜಾಗತಿಕ ಕೊರೋನಾ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯುಎನ್ ಮುಖ್ಯಸ್ಥರು ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ವಿಶ್ವದ ಅತ್ಯುತ್ತಮ ಆಸ್ತಿ ಎಂದು ಬಣ್ಣಿಸಿದ್ದಾರೆ.
ಭಾರತದಲ್ಲಿ, ಭಾರತೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಗಳ ಉತ್ಪಾದನೆಯು ಅತ್ಯಂತ ಉನ್ನತ ಮಟ್ಟದಲ್ಲಿದೆ ಎಂದು ಅವರು ಹೇಳಿದರು. ಜಾಗತಿಕ ವ್ಯಾಕ್ಸಿನೇಷನ್ ಅಭಿಯಾನವನ್ನು ಸಾಧ್ಯವಾಗುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲು ಅಗತ್ಯವಿರುವ ಎಲ್ಲ ಸಾಧನಗಳನ್ನು ಭಾರತ ಹೊಂದಿದೆ ಎಂದು ಅಭಿಪ್ರಾಯಿಸಿದ್ದಾರೆ.
ಭಾರತವು 55 ಲಕ್ಷ ಡೋಸ್ ಕೊರೋನಾವೈರಸ್ ಲಸಿಕೆಯನ್ನು ನೆರೆಯ ರಾಷ್ಟ್ರಗಳಿಗೆ ಉಡುಗೊರೆಯಾಗಿ ನೀಡಿರುವ ಹಿನ್ನೆಲೆಯಲ್ಲಿ ಗುಟೆರಸ್ ಈ ಹೇಳಿಕೆ ನೀಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾತನಾಡಿ, ಓಮನ್, ಕ್ಯಾರಿಕೊಮ್ ದೇಶಗಳು, ನಿಕರಾಗುವಾ, ಪೆಸಿಫಿಕ್ ದ್ವೀಪ ರಾಜ್ಯಗಳಿಗೆ ಲಸಿಕೆ ಡೋಸ್ಗಳನ್ನು ಉಡುಗೊರೆಯಾಗಿ ನೀಡಲು ಭಾರತ ಯೋಜಿಸಿದೆ ಎಂದಿದ್ದಾರೆ.
GAVI (ಗ್ಲೋಬಲ್ ಅಲೈಯನ್ಸ್ ಫಾರ್ ವ್ಯಾಕ್ಸಿನ್ಸ್ ಆಂಡ್ ಇಮ್ಯುನೈಝೇಶನ್) ಕೋವ್ಯಾಕ್ಸ್ ಸೌಲಭ್ಯದಡಿಯಲ್ಲಿ ಆಫ್ರಿಕಾಕ್ಕೆ 1 ಕೋಟಿ ಮತ್ತು ವಿಶ್ವಸಂಸ್ಥೆಯ ಆರೋಗ್ಯ ಕಾರ್ಯಕರ್ತರಿಗೆ 10 ಲಕ್ಷ ಲಸಿಕೆ ಡೋಸ್ ಅನ್ನು ಭಾರತ ಪೂರೈಸಲು ಯೋಜಿಸಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.