ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪರಿಷತ್ ಆರೋಗ್ಯ ಮಾನ್ಯತೆಯ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ನಲ್ಲಿ ಬರುವ ಕೆಐಎ, ಕಾರ್ಯ ನಿರ್ವಹಿಸುವ ಉದ್ಯೋಗಿಗಳು, ಪ್ರಯಾಣಿಕರು ಮತ್ತು ಸಾರ್ವಜನಿ ಸುರಕ್ಷತೆಯ ಬದ್ಧತೆ, ಕ್ರಮಗಳನ್ನು ಪರಿಶೀಲನೆ ನಡೆಸಿ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ. ಈ ಆರೋಗ್ಯ ಮಾನ್ಯತೆಯ ಕಾರಣದಿಂದಾಗಿ ಬೆಂಗಳೂರು ಏರ್ಪೋರ್ಟ್ನಿಂದ ಪ್ರಯಾಣಿಸುವ ಪ್ರಯಾಣಿಕರ ಆತ್ಮವಿಶ್ವಾಸ ಸಹ ಹೆಚ್ಚುವಂತಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಪರ್ಕ ರಹಿತ ಪ್ರಕ್ರಿಯೆ, ಸೋಂಕು ನಿವಾರಕ ಸಿಂಪಡಣೆಯ ಕ್ರಮವನ್ನು ಸಹ ಕೊರೋನಾ ಸಂದರ್ಭದಲ್ಲಿ ಕೈಗೊಂಡಿದೆ. 2020 ರ ಡಿಸೆಂಬರ್ ತಿಂಗಳಿನಲ್ಲಿ ವಿಮಾನ ನಿಲ್ದಾಣದಲ್ಲಿ 33053 ಮೆಟ್ರಿಕ್ ಟನ್ ಗಳಷ್ಟು ಸರಕು ಮತ್ತು ಸೇವೆಗಳನ್ನು ನೀಡಿದೆ. ಸಿಬಿಐಸಿ, ಹಣಕಾಸು ಸಚಿವಾಲಯ, ಸರಕು ಪಾಲುದಾರರಾದ ಏರ್ ಇಂಡಿಯಾ, ಎಸ್ಎಟಿಎಸ್, ಮೆನ್ಜೀಸ್ ಏವಿಯೇಷನ್ ಬೆಂಗಳೂರು ಪ್ರೈ. ಲಿ. ಸಹಯೋಗದಿಂದ ಈ ಮಾನ್ಯತೆ ದೊರಕಿದೆ ಎಂದು ಬಿಐಎಲ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.