ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಪೂರ್ವತಯಾರಿ ಬೈಠಕ್ಗೆ ಗುಬ್ಬಿ ತಾಲ್ಲೂಕಿನ ಚೆಂಗಾವಿ ಪಂಚಾಯತ್ ನೆಟ್ಟೆಕೆರೆ ಗ್ರಾಮದಿಂದ 32 ವಯಸ್ಸಿನ ತರುಣನೊಬ್ಬ ಬಂದಿದ್ದ.
ಪಂಚಾಯತಿಯ ಎಲ್ಲಾ ಗ್ರಾಮಗಳನ್ನು ತಲುಪಬೇಕು ಅನ್ನೋ ಪ್ರಶ್ನೆಯನ್ನು ಅಲ್ಲಿ ಕೇಳಿದಾಗ ಉತ್ತರವಿರಲಿಲ್ಲ ಕಾರಣ ಆ ಪಂಚಾಯತಿಯ 1 ಗ್ರಾಮದಿಂದ ಮಾತ್ರ ವ್ಯಕ್ತಿಗಳು ಬಂದಿದ್ದರು.
ಕೂತ ಜಾಗದಿಂದಲೇ ಒಂದು ಪ್ರೇರಣೆಯ ಧ್ವನಿಯೊಂದು ಕೇಳಿಸಿತ್ತು ಹೌದು ಚೆಂಗಾವಿ ಪಂಚಾಯಿತಿಯ ಎಲ್ಲಾ ಗ್ರಾಮಗಳ ಎಲ್ಲಾ ಮನೆಗಳನ್ನು ತಲುಪುತ್ತೇವೆ……!!!
ತಲುಪಬಹುದೇ ಅಂತ ಕೇಳಿದ ಹಿರಿಯರ ದೃಷ್ಟಿ ಆ ತರುಣ ಕಡೆ ತಿರುಗಿತು.. ಅವರಿಗೆ ಅಶ್ವರ್ಯ ಕಾರಣ ತನ್ನ ಹುಟ್ಟಿನಿಂದಲೇ ತನ್ನ 2 ಕಾಲುಗಳ ಸ್ವಾದಿನ ಕಳೆದುಕೊಂಡ ಶಿವಲಿಂಗೇ ಗೌಡರ ವಿಶ್ವಾಸದ ಮಾತುಗಳು ಕೇಳಿ.
ಇವರು ಸಂಘದ ಸ್ವಯಂಸೇವಕರು, 2012 ರಲ್ಲಿ ಪ್ರಾಥಮಿಕ ಶಿಕ್ಷಾವರ್ಗ ಹೆಬ್ಬೂರಿನಲ್ಲಿ ಆಯ್ತು ಆಗ ತಾನು ಆ ವರ್ಗದಲ್ಲಿ ಭಾಗವಹಿಸುವುದು ಕಷ್ಟ ಅಂಥ ಗೊತ್ತಿದ್ದರೂ ಮನಸ್ಸಲ್ಲಿ ಸಂಘವನು ಧರಿಸಿ ಆಗಿದೆ ಕಷ್ಟ ಆದರೂ ಆಗಲಿ ಅಂತ ಭಾಗವಹಿಸಿದರು. ಊರಿನಲ್ಲಿ ಸಣ್ಣ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ.
ವಿಕಲತೆ ದೇಹಕ್ಕೆ ಇರಬಹುದು ಆದರೆ ಮನಸಿಗಲ್ಲ ಅನ್ನೋ ಮಾತು ಅವರದು!!!!
ಗಾಲಿ ಕುರ್ಚಿಯಲ್ಲಿ ಚೆಂಗಾವಿ ಪಂಚಾಯತ್ ನ ಎಲ್ಲಾ ಗ್ರಾಮಗಳನ್ನು ತಲುಪಲು ಯೋಜನೆ ಸಿದ್ಧವಾಗಿದೆ ಸ್ನೇಹಿತರ ಜೊತೆಗೂಡಿ ಈಗಾಗಲೇ ತನ್ನ ಗ್ರಾಮದ ಜೊತೆಗೆ ಮತ್ತೊಂದು ಗ್ರಾಮವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ… ಇವರದೊಂದು ಸಮರ್ಪಿತ ಹೃದಯ.
https://m.facebook.com/story.php?story_fbid=243518517178854&id=100045621226489
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.