ಲಾಸ್ ಏಂಜಲೀಸ್: ನೇಪಾಳ ಮತ್ತು ಉತ್ತರ ಭಾರತದಲ್ಲಿ ಈಗಾಗಲೇ ಎರಡು ಬಾರಿ ಭಯಾನಕ ಭೂಕಂಪಗಳು ಸಂಭವಿಸಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಕಹಿ ನೆನಪು ಮಾಸುವ ಮೊದಲೇ ಈ ಭಾಗಗಳಲ್ಲಿ ಮತ್ತೆ ಭಾರೀ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಸೂಚನೆ ನೀಡಿದ್ದಾರೆ.
ಮತ್ತೆ ಭೂಕಂಪವಾಗುವ ಸಾಧ್ಯತೆ ಇದೆ ಎಂದು ಕೇಂಬ್ರಿಡ್ಜ್ ವಿವಿ ಪ್ರೊಫೆಸರ್ ಜೀನ್ ಫಿಲಿಪ್ ಅವೋಕ್ ಅವರ ನೇತೃತ್ವದ ವಿಜ್ಞಾನಿಗಳ ತಂಡ ಎಚ್ಚರಿಸಿದೆ. ಈ ಪ್ರದೇಶಗಳಲ್ಲಿ ಭೂಗರ್ಭದೊಳಗಿನ ಯುರೇಷ್ಯಾ ಪದರಗಳ ಒತ್ತಡದಿಂದ ಈ ಭೂಕಂಪ ಸಂಭವಿಸುತ್ತಿದ್ದು, ಭೂಮಿಯ ಮೇಲ್ಪದರದಲ್ಲಿ ಒತ್ತಡ ಸಂಪೂರ್ಣ ಬಿಡುಗಡೆಯಾಗುವವರೆಗೂ ಈ ಕಂಪನಗಳು ಸಂಭವಿಸುತ್ತಲೇ ಇರುತ್ತದೆ ಎಂದು ಅವರು ಹೇಳಿದ್ದಾರೆ.
ನೇಪಾಳದ ಪೋಖರಾದಿಂದ ದೆಹಲಿ ವರೆಗೂ ಭೂಪದರಗಳ ಒತ್ತಡವಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.