ಬೀದರ್: ವಿಶ್ವಗುರು ಖ್ಯಾತ ವಚನಕಾರ ಬಸವಣ್ಣ ಅವರ ಸ್ಮರಣೆಯಲ್ಲಿ, ಅವರ ಕಾಯಕ ಧರ್ಮ ಮತ್ತು ತತ್ವಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಬಸವಕಲ್ಯಾಣದಲ್ಲಿ ಸುಮಾರು 500 ಕೋಟಿ ರೂ ವೆಚ್ಚದಲ್ಲಿ ‘ಅನುಭವ ಮಂಟಪ’ ನಿರ್ಮಾಣವಾಗಲಿದ್ದು, ಈ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಅವರು ಅಡಿಗಲ್ಲು ಹಾಕುವ ಮೂಲಕ ಭೂಮಿಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭಾಲ್ಕಿ, ಹಿರೇಮಠ ಸಂಸ್ಥಾನದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಹಲವರು ಸ್ವಾಮೀಜಿಗಳು, ಸಚಿವರು, ಶಾಸಕರು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಬಸವಕಲ್ಯಾಣದ ತ್ರಿಪುರಾಂತ ಕೆರೆಯ ಸಮೀಪದಲ್ಲಿ ಅನುಭವ ಮಂಟಪವನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕಾಗಿ ಕೆರೆಯ ಸಮೀಪದ 72 ಈ ಕರೆಗಳಷ್ಟು ಪ್ರದೇಶವನ್ನು ಮೀಸಲಿಡಲಾಗಿದೆ. ಸುಮಾರು 8 ಎಕರೆ ಪ್ರದೇಶದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಇದು 6 ಅಂತಸ್ಥುಗಳುಳ್ಳ ಕಟ್ಟವಾಗಿರಲಿದ್ದು, 182 ಅಡಿ ಎತ್ತರ ಮತ್ತು 1884 ಅಡಿ ಸುತ್ತಳತೆಯನ್ನು ಹೊಂದಿರಲಿದೆ. ವ್ಯಾಸದ ಲಿಂಗಾಕಾರ ಹೊಂದಿರುವ 100 ಅಡಿಗಳ ಬೃಹತ್ ಗೋಪುರವನ್ನು ಈ ಅನುಭವ ಮಂಟಪ ಹೊಂದಿರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಅನುಭವ ಮಂಟಪದಲ್ಲಿ ಪ್ರವಾಸಿಗರಿಗೆ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಸ್ವಾಗತ ಕೇಂದ್ರ, ಕಾರ್ಯಾಲಯ, ಗ್ರಂಥಾಲಯ, ಸಂಶೋಧನಾ ಕೇಂದ್ರ, ಪ್ರಾರ್ಥನಾ ಮಂದಿರ, ಯೋಗ ಕೇಂದ್ರ, ಇಷ್ಟಲಿಂಗ ಪೂಜಾ ಅನುಷ್ಠಾನ ಗವಿ, ಚಿಂತನ ಕೋಣೆ, ದಾಸೋಹ ಭವನ, ಅತಿಥಿ ಗೃಹ, ಸಭಾಂಗಣ, ಅವಲೋಕನ ಭವನ, ವಾಹನ ನಿಲುಗಡೆಗೆ ಸ್ಥಳಾವಕಾಶ ಮೊದಲಾದವುಗಳು ಇರಲಿವೆ ಎಂದು ಮೂಲಗಳು ನಿರ್ಮಾಣವಾಗಲಿರುವ ಅನುಭವ ಮಂಟಪದ ಕುರಿತು ಮಾಹಿತಿಯನ್ನು ಒದಗಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.