ನವದೆಹಲಿ: ಪೂರ್ವ ಲಡಾಖ್ನ ಪಾಂಗೊಂಗ್ ತ್ಸೊ ಸೇರಿದಂತೆ ಪರ್ವತಗಳಲ್ಲಿನ ಜಲಮೂಲಗಳ ಕಣ್ಗಾವಲುಗಾಗಿ ಭಾರತೀಯ ಸೇನೆಯು ಹೊಸ ವೇಗದ ಗಸ್ತು ದೋಣಿಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಆರ್ಡರ್ ನೀಡಿದೆ.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿಸುವ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ 2021ರ ಮೊದಲ ರಕ್ಷಣಾ ಆರ್ಡರ್ ಅನ್ನು ದೇಶೀಯ ಶಿಪ್ಯಾರ್ಡ್ಗೆ ನೀಡಲಾಗಿದೆ. ಈ ವರ್ಷವೇ ದೋಣಿಗಳನ್ನು ಸೇನೆಯು ಸ್ವೀಕರಿಸಲು ಪ್ರಾರಂಭಿಸಲಿದೆ.
ಭಾರತೀಯ ಸೇನೆ ಮತ್ತು ಚೀನಾದ ಪಿಎಲ್ಎ ಎರಡೂ ದೋಣಿಗಳನ್ನು ಬಳಸಿ ಪಾಂಗೊಂಗ್ ಸರೋವರದಲ್ಲಿ ಗಸ್ತು ತಿರುಗುತ್ತವೆ.
ಚೀನಿಯರಿಗೆ ಸೆಡ್ಡು ಹೊಡೆಯುವ ಯಾರು ಭಾರತಕ್ಕೆ ಹೊಸ ದೋಣಿಗಳ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
“ಚೀನಿಯರು ಉತ್ತಮ ದೋಣಿಗಳನ್ನು ಬಳಸುತ್ತಿದ್ದಾರೆ ಮತ್ತು ದೋಣಿಗಳನ್ನು ಹೆಚ್ಚಿನ ವೇಗದಲ್ಲಿ ನಿರ್ವಹಿಸುತ್ತಿದ್ದಾರೆ, ದೊಡ್ಡ ಅಲೆಗಳನ್ನು ಸೃಷ್ಟಿಸುತ್ತಿದ್ದಾರ. ಆದರೆ ಭಾರತ ಹಗುರವಾದ ಗಸ್ತು ದೋಣಿಗಳನ್ನು ನಿರ್ವಹಿಸುತ್ತಿದೆ. ಸೈನ್ಯಕ್ಕೆ ಹೆಚ್ಚು ಅತ್ಯಾಧುನಿಕ ಮತ್ತು ಶಕ್ತಿಯುತ ದೋಣಿಗಳು ಬೇಕಾಗಿದ್ದವು, ಅದನ್ನು ಈಗ ಆದೇಶಿಸಲಾಗಿದೆ” ಎಂದು ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಜಸ್ವಾಲ್ (ನಿವೃತ್ತ) ಹೇಳಿದ್ದಾರೆ.
ಭಾರತೀಯ ನೌಕಾಪಡೆ ಕಳೆದ ವರ್ಷ ಲಡಾಖ್ಗೆ ಒಂದು ಡಜನ್ ಉನ್ನತ-ಶಕ್ತಿಯ, ದೊಡ್ಡ ಮತ್ತು ಉನ್ನತ ದೋಣಿಗಳನ್ನು ಕಳುಹಿಸಿತ್ತು, ಇದರಿಂದಾಗಿ ಭಾರತೀಯ ಸೇನೆಯು ಪಂಗೊಂಗ್ ತ್ಸೊದಲ್ಲಿ ಗಸ್ತು ತಿರುಗಲು, ಚೀನಾವನ್ನು ಹಿಡಿದಿಡಲು ಸಾಧ್ಯವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.