ಬೆಂಗಳೂರು: 2021 ರ ಜನವರಿ ಒಂದರಿಂದ ಸಿಎಂ ಕಚೇರಿಗೆ ಅಹವಾಲು ಸಲ್ಲಿಕೆ ಮತ್ತು ಸಂವಹನಕ್ಕೆ ಒಂದೇ ಇ-ಮೇಲ್ ಐಡಿ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಸಚಿವಾಲಯವು ತಿಳಿಸಿದೆ.
cm.kar@nic.in ಇ-ಮೇಲ್ ಐಡಿ ಮೂಲಕವೇ ಅಹವಾಲು ಸಲ್ಲಿಕೆ, ಸಂವಹನಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ವಿಚಾರಗಳನ್ನು ನಡೆಸಲಾಗುವುದು ಎಂದು ಸಚಿವಾಲಯವು ಮಾಹಿತಿ ನೀಡಿದೆ. 2020 ರ ಆಗಸ್ಟ್ ತಿಂಗಳಿನಿಂದ ಮುಖ್ಯಮಂತ್ರಿ ಕಚೇರಿಯ ಹೆಚ್ಚಿನ ಎಲ್ಲಾ ವ್ಯವಹಾರಗಳನ್ನು ಇ ಮೇಲ್ ಮೂಲಕವೇ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಮುಖ್ಯಮಂತ್ರಿ ಕಚೇರಿಯು 3 ಸಕ್ರಿಯ ಇ-ಮೇಲ್ಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ಅಹವಾಲು ಪುನರಾವರ್ತನೆಯಾಗಿ ಅನಗತ್ಯ ಗೊಂದಲಗಳು ಸೃಷ್ಟಿಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ಒಂದೇ ಇ-ಮೇಲ್ ಬಳಕೆ ಮಾಡಲು ಮುಂದಾಗಿರುವುದಾಗಿ ಕಚೇರಿಯ ಮೂಲಗಳು ತಿಳಿಸಿವೆ.
ಜನವರಿ 1, 2021 ರಿಂದ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಅಹವಾಲು ಸ್ವೀಕಾರಕ್ಕೆ cm.kar@nic.in ಇ-ಮೇಲ್ ಐಡಿ ಮಾತ್ರ ಬಳಕೆ. pic.twitter.com/ACw76yy1Z9
— CM of Karnataka (@CMofKarnataka) December 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.