ಭಾರತವು 1947 ರಲ್ಲಿ ಸ್ವತಂತ್ರವಾದ ಬಳಿಕವೂ ಗೋವಾ 14 ವರ್ಷಗಳ ಕಾಲ ಪೋರ್ಚುಗೀಸರ ಆಡಳಿತದಲ್ಲಿತ್ತು. 19 ಡಿಸೆಂಬರ್ 1961 ರಲ್ಲಿ ಭಾರತೀಯ ಸೈನ್ಯ ನಡೆಸಿದ ಆಪರೇಷನ್ ವಿಜಯ್ ಮುಖಾಂತರ ಗೋವಾ, ದಮನ್ ಮತ್ತು ದಿಯುವನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತವಾಗಿಸಿ ಸ್ವತಂತ್ರಗೊಳಿಸಲಾಯಿತು..
ಗೋವಾ ಮುಕ್ತಿ ದಿನದ ಬಗ್ಗೆ ತಿಳಿಯಬೇಕಾದ ಮಹತ್ವದ ವಿಚಾರಗಳು..
* ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ, ಭಾರತೀಯ ಜನಸಂಘದ ನಾಯಕರೂ ಆದ ಜಗನ್ನಾಥ ರಾವ್ ಜೋಶಿ ಅವರು ಜೂನ್ 13, 1955 ರಂದು ಗೋವಾ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
* ಮಹಿಳೆಯರೂ ಸೇರಿದಂತೆ ಸುಮಾರು 3000 ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಈ ಸತ್ಯಾಗ್ರಹದಲ್ಲಿ ಜಗನ್ನಾಥ ರಾವ್ ಅವರೊಂದಿಗೆ ಕೈಜೋಡಿಸಿದರು.
* ಆಗಸ್ಟ್ 15, 1955 ರಂದು ಪೋರ್ಚುಗೀಸರಿಂದ ನಿಯೋಜಿಸಲ್ಪಟ್ಟ ಸೇನೆಯು ಸತ್ಯಾಗ್ರಹಿಗಳ ಮೇಲೆ ಗುಂಡಿನ ದಾಳಿಯನ್ನು ನಡೆಸಿದ ಕಾರಣ 51 ನಾಗರೀಕರು ಹುತಾತ್ಮರಾದರು.
* ಬಾಬುಜಿ ಎಂದೇ ಪ್ರಖ್ಯಾತರಾಗಿದ್ದ ಖ್ಯಾತ ಸಂಗೀತಗಾರ ಸುಧೀರ್ ಫಡ್ಕ್ ಅವರು ಸಾಂಸ್ಕೃತಿಕವಾಗಿ ಜನರನ್ನು ಒಂದುಗೂಡಿಸುವಲ್ಲಿ ನೆರವಾದರು.
* ಡಿಸೆಂಬರ್ 19, 1961 ರಂದು ಗೋವಾ ಪೋರ್ಚುಗೀಸರ ಆಡಳಿತದಿಂದ ಬಿಡುಗಡೆ ಪಡೆಯಿತು. ಮತ್ತು ಈ ದಿನವನ್ನು ಗೋವಾ ಮುಕ್ತಿ ದಿನವನ್ನಾಗಿ ಆಚರಿಸಲಾಗುತ್ತದೆ.
* ರಾಷ್ಟ್ರ ಸೇವಿಕಾ ಸಮಿತಿಯು ಸರಸ್ವತಿ ಅಪಟೆ ತಾಯಿ ಅವರ ನೇತೃತ್ವದಲ್ಲಿ ಆಂದೋಲನದಲ್ಲಿ ಪಾಲ್ಗೊಂಡು ಆಹಾರದ ಕುರಿತಾದ ಜವಾಬ್ದಾರಿಯನ್ನು ವಹಿಸಿಕೊಂಡರು..
* ಗೊರಿಲ್ಲಾ ಯುದ್ಧದ ಹೋರಾಟಗಾರರು, ಸಿನಿಮಾ ನಟರು, ಸತ್ಯಾಗ್ರಹಿಗಳು ಮತ್ತು ಪತ್ರಕರ್ತರೂ 1961ರಲ್ಲಿ ಗೋವಾ ದ ಮುಕ್ತಿಗಾಗಿ ಹೋರಾಟ ನಡೆಸಿದರು.
* 450 ವರ್ಷಗಳ ಪೋರ್ಚಿಗೀಸರ ಆಡಳಿತ ಗೋವಾದ ಸಂಸ್ಕೃತಿಯನ್ನು ಹಾಳುಗೆದವಿತ್ತು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಟಿ. ಬಿ. ಚುನ್ಹ ಅವರು ಹೇಳಿದ್ದಾರೆ.
* ವಾಯುಸೇನೆ ಮತ್ತು ನೌಕದಾಳದ ಸುಮಾರು 30,000 ಭಾರತೀಯ ಸೇನೆಯನ್ನು ಹೋರಾಟಕ್ಕಾಗಿ ಕಳುಹಿಸಿದಾಗ, 48 ಗಂಟೆಗಳ ಒಳಗಾಗಿ ಗೋವಾ ಪೋರ್ಚುಗೀಸರ ಆಡಳಿತದಿಂದ ಬಿಡುಗಡೆ ಪಡೆಯಿತು..
* 1955ರಲ್ಲಿ ಗೋವಾ ವಿಮೋಚಣೆಗಾಗಿ ಸರ್ವ ಪಕ್ಷದ ರಾಷ್ಟ್ರೀಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಹೋರಾಟವನ್ನು ಮುನ್ನಡೆಸಿದ್ದರು.
* ಗೋವಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕ ಜನ ಸಂಘದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಗುಂಡೇಟಿನಿಂದ ಗಾಯಗೊಂಡಿದ್ದರು ಹಾಗೂ ಸೆರೆವಾಸ ಅನುಭಸಿದ್ದರು.
* 1946 ರ ಜೂನ್ 18 ರಂದು ಗೋವಾ ವಿಮೋಚನಾ ಆಂದೋಲನವನ್ನು ಡಾ. ರಾಮ್ ಮನೋಹರ್ ಲೋಹಿಯ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು.
* ವಿಮೋಚನಾ ಆಂದೋಲನದಲ್ಲಿ ವಿವಿಧ ಪಂಥದ ಜನರು ಪೋರ್ಚಿಗೀಸರಾ ಆಡಳಿತವನ್ನು ಕೊನೆಗನಿಸುವ ಉದ್ದೇಶದಿಂದ ಬಹುದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
* 1961ರಲ್ಲಿ ಭಾರತೀಯ ಸಶಸ್ತ್ರ ಸೈನ್ಯದಿಂದ ಆಪರೇಷನ್ ವಿಜಯ್ ಅನ್ನು ನಡೆಸಲಾಯಿತು.
* ಆಪರೇಷನ್ ವಿಜಯ್ ಡಿಸೆಂಬರ್ 17 ರಂದು ಪ್ರಧಾನಿ ನೆಹರೂ ಅವರ ಆಜ್ಞೆಯೊಂದಿಗೆ ಪ್ರಾರಂಭವಾಯಿತು.
* ಅತ್ಯಂತ ಕಡಿಮೆ ರಕ್ತಪಾತದೊಂದಿಗೆ ಈ ಯುದ್ಧವು ದಮನ್ ಮತ್ತು ದಿಯುಗಳನ್ನೂ ಪೋರ್ಚುಗೀಸರ ಆಡಳಿತದಿಂದ ಮುಕ್ತಗೊಳಿಸುವುದರೊಂದಿಗೆ ಯಶಸ್ವಿಯಾಯಿತು.
* ಆಪರೇಷನ್ ವಿಜಯ್ ವಾಯುಸೇನೆ, ಭೂಮಿ ಸೇನೆ ಮತ್ತು ನೌಕದಾಳದ ಸಹಯೋಗದೊಂದಿಗೆ 36 ಗಂಟೆಗಳಲ್ಲಿ ನಡೆಸಿ ಜಯ ಗಳಿಸುವುದರೊಂದಿಗೆ ಭಾರತದಲ್ಲಿ 451 ವರ್ಷಗಳ ಪೋರ್ಚುಗೀಸರ ಆಡಳಿತಕ್ಕೆ ಮಂಗಳ ಹಾಡುವಲ್ಲಿ ಯಶಸ್ವಿಯಾಯಿತು.
* ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮೋಹನ್ ರಾನಾದೆ ಅವರು ಗೋವಾ ವಿಮೋಚನಾ ಆಂದೋಲನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದರು.
* ಗೋವಾ ವಿಮೋಚನಾ ಆಂದೋಲನವು 1961 ರ ಡಿಸೆಂಬರ್ 19 ರಂದು ಭಾರತೀಯ ಸೈನ್ಯದ ವಿಜಯದೊಂದಿಗೆ ಕೊನೆಗೊಂಡಿತು.
ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.