ನವದೆಹಲಿ: ಪಾಕಿಸ್ಥಾನದಲ್ಲಿನ ಹಿಂದೂಗಳು ನರಕಸದೃಶ್ಯ ಜೀವನವನ್ನು ನಡೆಸುತ್ತಿದ್ದಾರೆ, ಅವರ ದೇಗುಲಗಳು, ಶ್ರದ್ಧಾ ಕೇಂದ್ರಗಳ ಮೇಲೆ ನಿರಂತರ ದಾಳಿಗಳಾಗುತ್ತಿವೆ. ಪವಿತ್ರ ಗ್ರಂಥಗಳನ್ನು ಸುಟ್ಟು ಹಾಕಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಒಬ್ಬನೇ ಒಬ್ಬ ಹಿಂದೂವಿಲ್ಲದ ಪಾಕಿಸ್ಥಾನ ನಿರ್ಮಾಣವಾಗುವ ದಿನ ದೂರವಾಗಿಲ್ಲ.
7 ಲಕ್ಷ ಜನಸಂಖ್ಯೆ ಹೊಂದಿರುವ ಹಿಂದೂಗಳು ಪಾಕಿಸ್ಥಾನದ ಅತಿದೊಡ್ಡ ಅಲ್ಪಸಂಖ್ಯಾತರು. 1971ರಿಂದಲೂ ಇಲ್ಲಿ ಹಿಂದೂಗಳ ಸಂಸ್ಕೃತಿಯನ್ನು ನಾಶಪಡಿಸುತ್ತಾ ಬರಲಾಗುತ್ತಿದೆ, ಹಿಂದೂ ಸಾಹಿತ್ಯ, ಕಲೆ, ಹಿಂದಿ, ಸಂಸ್ಕೃತ ಭಾಷೆಯನ್ನು ಪಾಕಿಸ್ಥಾನದ ಯಾವ ಮೂಲೆಯಲ್ಲೂ ಕಲಿಸಲಾಗುತ್ತಿಲ್ಲ ಎಂಬುದಾಗಿ ಅಲ್ಲಿನ ಹಿಂದೂಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸಿಂಧ್ನಲ್ಲಿ ಇತ್ತೀಚಿಗೆ ಹಿಂದೂ ದೇಗುಲವೊಂದನ್ನು ನಾಶಪಡಿಸಲಾಗಿತ್ತು, ಅದಕ್ಕೆ ಹಿಂದೂ ಸಮುದಾಯದಿಂದ ಭಾರೀ ಪ್ರತಿಭಟನೆಗಳೂ ವ್ಯಕ್ತವಾಗಿದ್ದವು. ಕೋಮುವಾದವನ್ನು ಹರಡಲು, ಹಿಂದೂಗಳನ್ನು ಧಮನಿಸಲು ಈ ರೀತಿ ಮಾಡಲಾಗುತ್ತಿದೆ ಎನ್ನಲಾಗಿದೆ.
ಹಿಂದೂ ಹುಡುಗಿಯರನ್ನು ಅಪಹರಿಸುವುದು, ಮತಾಂತರ ಮಾಡುವ ಕಾರ್ಯ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ, ಹಣಕ್ಕಾಗಿ ಹಿಂದೂ ವ್ಯಾಪಾರಿಗಳನ್ನು ಅಪಹರಿಸಿ ಪೀಡಿಸಲಾಗುತ್ತಿದೆ. ಹಲವಾರು ಹಿಂದೂಗಳನ್ನು ದೇಶ ಬಿಟ್ಟು ಓಡಿಹೋಗುವಂತೆ ಮಾಡಲಾಗಿದೆ ಎಂದು ಅಲ್ಲಿನ ಪತ್ರಿಕೆ ಡಾನ್ನಲ್ಲಿಯೇ ವರದಿಯಾಗಿದೆ.
ಹೀಗೆಯೇ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಪಾಕಿಸ್ಥಾನದಲ್ಲಿ ಒಬ್ಬನೇ ಒಬ್ಬ ಹಿಂದೂವು ಇರದ ದಿನ ದೂರವಿರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.