ಮದುವೆಗಳ ಬಗ್ಗೆ ಸಂಶೋಧನೆಯನ್ನು ನಡೆಸಿರುವ ಹಾರ್ವರ್ಡ್ ಮನಶಾಸ್ತ್ರಜ್ಞ ರಾಬರ್ಟ್ ಎಪ್ಸ್ಟೀನ್ ಅವರ ಪ್ರಕಾರ, ಅಮೆರಿಕನ್ನರ ಪ್ರೇಮ ವಿವಾಹವು ಭಾರತೀಯರ ಅರೇಂಜ್ಡ್ ಮ್ಯಾರೇಜ್ಗೆ ವ್ಯತಿರಿಕ್ತವಾಗಿದೆ. ಅಮೆರಿಕದಲ್ಲಿ ವಿವಾಹ ಪೂರ್ವ ಪ್ರೇಮವು ಕಡ್ಡಾಯ ಎಂಬಂತಿದೆ. ಆದರೆ ಭಾರತೀಯರಲ್ಲಿ ವಿವಾಹದ ಬಳಿಕ ಪ್ರೇಮ. ಸಮಕಾಲೀನ ಭಾರತದಲ್ಲಿ ಸಾಂಪ್ರದಾಯಿಕ ಅರೆಂಜ್ ಮ್ಯಾರೇಜ್ ಮತ್ತು ಮಾಡರ್ನ್ ಲವ್ ಮ್ಯಾರೇಜ್ ಎರಡು ಕೂಡ ಸಾಮಾನ್ಯವಾಗಿದೆ. ಆದರೆ ಪ್ರಸ್ತುತ ಲವ್ ಮ್ಯಾರೇಜ್ ವರ್ಸಸ್ ಲವ್ ಜಿಹಾದ್ ಭಾರತದಲ್ಲಿ ಸದ್ದು ಮಾಡುತ್ತಿದೆ. ಒಂದು ದಶಕದ ಹಿಂದೆ ಕೇರಳದಲ್ಲಿ ಪ್ರಾರಂಭವಾದ ಇದು ಈಗ ದೇಶದಾದ್ಯಂತ ಮತ್ತು ಜಾಗತಿಕ ಮಟ್ಟದಲ್ಲೂ ಹರಡುತ್ತಿದೆ.
ಮೊದಮೊದಲು ಇದನ್ನು ಹಿಂದುತ್ವವಾದಿ / ಸಂಘಟನೆಗಳ ಸೃಷ್ಟಿ ಎಂದು ನಿರ್ಲಕ್ಷ್ಯ ಮಾಡಲಾಗುತ್ತಿತ್ತು, ಆದರೆ ಈಗ ಇದು ಹಿಂದೂಯೇತರ, ಪಕ್ಷೇತರವಾಗಿ ಮಾರ್ಪಟ್ಟಿದೆ. ಲವ್ ಜಿಹಾದ್ ಅಸ್ತಿತ್ವವನ್ನು ಕೆಲವರು ವಿವಾದಾತ್ಮಕ ಮಾಡುತ್ತಾರೆ. ಆದರೆ ಲವ್ ಜಿಹಾದ್ ಒಂದು ವೇಳೆ ಅಸ್ತಿತ್ವದಲ್ಲಿದ್ದರೆ, ಅದು ಮಾನವನ ಸಹಜ ಬಲಿಷ್ಠ ಮನೋಭಿಲಾಷೆಯಾದ ಪ್ರೀತಿ ಮತ್ತು ಅಷ್ಟೇ ಶಕ್ತಿಯುತವಾದ ಮಾನವನ ಸಮಗ್ರ ಭಾವನೆ ಧರ್ಮವನ್ನು ಪರಸ್ಪರ ಮಿಶ್ರಣ ಮಾಡುತ್ತದೆ. ಈ ಮಿಶ್ರಣದ ಅಪಾಯವೆಂದರೆ, ಇದು ಕುಟುಂಬಗಳನ್ನು ಒಡೆಯುತ್ತದೆ ಮತ್ತು ಸಮುದಾಯದಲ್ಲಿ ಬಿರುಕು ಮೂಡಿಸುತ್ತದೆ. ಇದು ಮಾರಣಾಂತಿಕ ಮತ್ತು ವಿಧ್ವಂಸಕಾರಿಯು ಆಗಬಹುದು. ಮುಸ್ಲಿಂ ಹುಡುಗ ಮತ್ತು ಮುಸ್ಲಿಮೇತರ ಹುಡುಗಿಯ ನಡುವಿನ ಸಹಜ ಮದುವೆಗಿಂತ ಲವ್ ಜಿಹಾದ್ ಮದುವೆ ಅತ್ಯಂತ ಭಿನ್ನವಾಗಿದೆ.
ಲವ್ ಮ್ಯಾರೇಜ್ ವರ್ಸಸ್ ಲವ್ ಜಿಹಾದ್
ಸ್ತ್ರೀ ಮತ್ತು ಪುರುಷರ ಪ್ರೀತಿಯ ದ್ಯೋತಕ ಪ್ರೇಮ ವಿವಾಹ. ಲವ್ ಜಿಹಾದ್ ಅಂದರೆ ಒಬ್ಬ ಮುಸ್ಲಿಮ್ ಹುಡುಗ ಕೇವಲ ಧರ್ಮಕ್ಕಾಗಿ ಮುಸ್ಲಿಮೇತರ ಯುವತಿಯನ್ನು ವಿವಾಹವಾಗುವುದು. ಲವ್ ಜಿಹಾದ್ ಪ್ರೇಮ ವಿವಾಹ ಆಗಲಾರದು. ಇಲ್ಲಿ ಧರ್ಮದ ಪ್ರಾಬಲ್ಯ ಹೆಚ್ಚಿರುತ್ತದೆ. ಸಾರ್ವತ್ರಿಕ ಪ್ರೇಮವಿವಾಹ ಯಾವುದೇ ಪುರುಷ ಮತ್ತು ಯಾವುದೇ ಸ್ತ್ರೀಯ ನಡುವೆ ಇರಬಹುದು, ಒಂದೇ ನಂಬಿಕೆ ಅಥವಾ ಬೇರೆ ನಂಬಿಕೆಯವರ ನಡುವೆ ಇರಬಹುದು. ಆದರೆ ಇಸ್ಲಾಮಿಕ್ ಲವ್ ಜಿಹಾದ್ ಕೇವಲ ಮುಸ್ಲಿಂ ಪುರುಷ ಮತ್ತು ಮುಸ್ಲಿಮೇತರ ಯುವತಿಯ ನಡುವೆಯೇ ಇರುತ್ತದೆ.
ಹೀಗಾಗಿಯೇ ಇದು ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಇತರರು ಮತ್ತು ಮುಸ್ಲಿಮರ ನಡುವಿನ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕೆಲವರು ಲವ್ ಜಿಹಾದ್ ಇಸ್ಲಾಮೋಫೋಬಿಯ ಎಂದು ಹೇಳುತ್ತಾರೆ. ಆದರೆ ಇದರ ಸಮಸ್ಯೆಗೆ ಒಳಪಟ್ಟವರ ವ್ಯಾಖ್ಯಾನ ಬೇರೆಯದೇ ಇದೆ. ಸುಪ್ರೀಂಕೋರ್ಟ್ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾದಳ 94 ಮುಸ್ಲಿಂ ಪುರುಷ ಮತ್ತು ಮುಸ್ಲಿಮೇತರ ಸ್ತ್ರೀಯರ ಲವ್ ಮ್ಯಾರೇಜ್ ಪ್ರಕರಣಗಳನ್ನು ತನಿಖೆ ನಡೆಸಿದೆ. ಇದರಲ್ಲಿ 23 ಪ್ರಕರಣಗಳು ಲವ್ ಜಿಹಾದ್ ಎಂದು ಶಂಕಿಸಲ್ಪಟ್ಟಿವೆ.
ಲವ್ ಜಿಹಾದ್ ಅನ್ನು ತಳ್ಳಿಹಾಕುವುದು ಸುಲಭದ ಮಾತಲ್ಲ. ಆದರೆ ಲವ್ ಜಿಹಾದ್ ಎಂದರೇನು? ಪ್ರೀತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಪ್ರೀತಿಗೆ ಜಿಹಾದ್ ಸೇರಿಕೊಂಡಿದ್ದು ಅಪಾಯಕಾರಿ. ಸತ್ಯವೆಂದರೆ ಜಿಹಾದ್ ಅಂದರೆ ಯುದ್ಧ, ಇಸ್ಲಾಂ ಪ್ರಚಾರದ ಭಾಗ. ಪ್ರೀತಿ (ವಿವಾಹ) ಇಸ್ಲಾಂ ಪ್ರಚಾರದ ಭಾಗವಾಗಬಹುದೇ? ತಟಸ್ಥ ಮತ್ತು ಇಸ್ಲಾಮಿಕ್ ಮೂಲಗಳು ಈ ಸಾಧ್ಯತೆ ಇದೆ ಎನ್ನುತ್ತವೆ.
ಧರ್ಮಕ್ಕಾಗಿ ಪ್ರೀತಿ
ಇಸ್ಲಾಮಿಕ್ ಅನ್ನು ಒಳಗೊಂಡಂತಹ ಅಧ್ಯಯನಗಳು ಇಸ್ಲಾಂ ಧರ್ಮವನ್ನು ವಿಸ್ತರಿಸುವಲ್ಲಿ ಪ್ರೇಮ ವಿವಾಹವು ಹೇಗೆ ಮಹತ್ತರ ಪಾತ್ರ ನಿಭಾಯಿಸಿದೆ ಮತ್ತು ನಿಭಾಯಿಸುತ್ತಿದೆ ಎಂಬುದನ್ನು ತೋರಿಸುತ್ತದೆ. “ಜನಸಂಖ್ಯಾ ಇಸ್ಲಾಮೀಕರಣ: ಮುಸ್ಲಿಂ ದೇಶಗಳಲ್ಲಿ ಮುಸ್ಲಿಮೇತರರು (“Demographic Islamization : Non-Muslims in Muslim Countries”)” ಎಂಬ ಶೀರ್ಷಿಕೆಯ ಸಂಶೋಧನೆಯಲ್ಲಿ, ಪ್ರೀತಿ ಮತ್ತು ವಿವಾಹದ ಮೂಲಕ ಇಸ್ಲಾಮಿಕ್ ರಾಷ್ಟ್ರಗಳು ಹೇಗೆ ಇಸ್ಲಾಮೀಕರಣಗೊಳ್ಳುತ್ತಿವೆ ಎಂಬುದನ್ನು ಫಿಲಿಪ್ ಫಾರ್ಗುಸ್ ವಿವರಿಸುತ್ತಾರೆ. ಫಾರ್ಗ್ಯೂಸ್ ಪ್ರಕಾರ: “ಬಹು ಹಿಂದೆ ಬಲಾತ್ಕಾರವು ಇಸ್ಲಾಮೀಕರಣದ ನಿರಂತರ ಪ್ರಕ್ರಿಯೆಯಲ್ಲಿ ಪಾತ್ರ ವಹಿಸಿದಂತೆ ಈಗ ಪ್ರೀತಿಯು ಆ ಪಾತ್ರವನ್ನು ವಹಿಸುತ್ತಿದೆ.” (In Paul H. Nitze School of Advanced International Studies [SAIS] Review, Johns Hopkins University).
“How Islam Spread Throughout the World”” ಎಂಬ ಶೀರ್ಷಿಕೆಯ ತನ್ನ ಮೂಲ ಪತ್ರಿಕೆಯಲ್ಲಿ, ಇಸ್ಲಾಂ ಧರ್ಮವು ಕತ್ತಿಯಿಂದ ಮಾತ್ರ ಹರಡಿತು ಎಂಬ ಅಭಿಪ್ರಾಯವನ್ನು ಹಸಮ್ ಮುನೀರ್ ಪ್ರತಿಪಾದಿಸುತ್ತಾರೆ. ಮುನೀರ್ ಅವರ ಸಂಶೋಧನೆ ಯಾಕೀನ್ ಸಂಸ್ಥೆಯ ಸೈಟ್ನಲ್ಲಿ ಗೋಚರಿಸುತ್ತದೆ, ಅವರ ತತ್ವಶಾಸ್ತ್ರ ಮತ್ತು ಕಾರ್ಯಸೂಚಿಯನ್ನು ಇಸ್ಲಾಮೋಫೋಬಿಯಾ ಮತ್ತು ಸಮುದಾಯದ ಮೇಲೆ ಅದರ ಋಣಾತ್ಮಕ ಪ್ರಭಾವವನ್ನು ತೊಡೆದುಹಾಕಲು ವಿನ್ಯಾಸಗೊಳಿಸಲಾಗಿದೆ. ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ, ಇಸ್ಲಾಂ ಧರ್ಮ ಹರಡುವ ನಾಲ್ಕು ವಿಧಾನಗಳಲ್ಲಿ ಅಂತರ್-ಧಾರ್ಮಿಕ ವಿವಾಹವು ಒಂದು ಎಂದು ಮುನೀರ್ ಹೇಳುತ್ತಾರೆ. ಮುನೀರ್ ಬರೆಯುತ್ತಾರೆ – “ಮುಸ್ಲಿಮರು ಮತ್ತು ಮುಸ್ಲಿಮೇತರರ ನಡುವಿನ ವಿವಾಹವು ಅನೇಕ ಸಂದರ್ಭಗಳಲ್ಲಿ ಇಸ್ಲಾಂ ಧರ್ಮದ ಹರಡುವಿಕೆಗೆ ಐತಿಹಾಸಿಕವಾಗಿ ಮಹತ್ವದ್ದಾಗಿದೆ. ಇದು ಸಂಶೋಧನೆಯ ಕ್ಷೇತ್ರವಾಗಿದ್ದು, ಇತ್ತೀಚೆಗೆ ಗಮನ ಸೆಳೆಯಲು ಪ್ರಾರಂಭಿಸಿದೆ, ಏಕೆಂದರೆ ಈ ಪ್ರಕ್ರಿಯೆಯ ಮೂಲಕ ಇಸ್ಲಾಂಗೆ ಮತಾಂತರಗೊಂಡ ಹೆಚ್ಚಿನವರಲ್ಲಿ ಮಹಿಳೆಯರು”.
ಮುನೀರ್ ಪ್ರೀತಿಯ ಮೂಲಕ ಇಸ್ಲಾಂ ಧರ್ಮವು ಹರಡಿದ ದೇಶಗಳನ್ನು ಪಟ್ಟಿ ಮಾಡಿದ್ದಾರೆ. ಸ್ಪೇನ್ನಲ್ಲಿ ಆರಂಭಿಕವಾಗಿ ಮುಸ್ಲಿಂ ಸಮುದಾಯವನ್ನು ಸ್ಥಾಪಿಸಲು ಅಂತರ್ ವಿವಾಹದ ಮೂಲಕ ಪರಿವರ್ತನೆ ಮುಖ್ಯವಾಗಿತ್ತು. ಆರಂಭಿಕ ಆಧುನಿಕ ಒಟ್ಟೋಮನ್ ಸಾಮ್ರಾಜ್ಯವು ಮತಾಂತರವನ್ನು ಒಳಗೊಂಡ ಅಂತರ್ ವಿವಾಹದ ಅನೇಕ ಉದಾಹರಣೆಗಳನ್ನು ನೀಡುತ್ತದೆ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ, ಹಲವಾರು ದಲಿತ ಮಹಿಳೆಯರು ಮುಸ್ಲಿಮರೊಂದಿಗೆ ವಿವಾಹದ ಭಾಗವಾಗಿ ಇಸ್ಲಾಂಗೆ ಮತಾಂತರಗೊಂಡರು ಎಂದು ಮುನೀರ್ ಬರೆಯುತ್ತಾರೆ. “ಇತ್ತೀಚಿನ ದಿನಗಳಲ್ಲಿ ಇಸ್ಲಾಂಗೆ ಮತಾಂತರಗೊಳ್ಳುವಲ್ಲಿ ಅಂತರ್ ವಿವಾಹವು ಪ್ರಮುಖ ಪಾತ್ರ ವಹಿಸುತ್ತಿದೆ” ಎಂದು ಅವರು ಹೇಳುತ್ತಾರೆ.
ಸಮಕಾಲೀನ ಕಾಲದಲ್ಲಿ, ಬಲವಂತದ ಬದಲು ಪ್ರೀತಿಯು ಇಸ್ಲಾಂ ಧರ್ಮವನ್ನು ಹರಡುತ್ತಿದೆ ಎಂಬ ಫಿಲಿಪ್ ಫಾರ್ಗ್ಯೂಸ್ ಅವರ ಅಭಿಪ್ರಾಯವು ಮುನೀರ್ ಅವರಿಂದ ದೃಢೀಕರಿಸಲ್ಪಟ್ಟಿದೆ. ಫರ್ಗುಸ್ಗೆ ಪೂರಕವಾಗಿ ಮುನೀರ್ ಐತಿಹಾಸಿಕ ಸಾಕ್ಷ್ಯಗಳನ್ನು ನೀಡುತ್ತಾರೆ, ಮದುವೆಯು ಕೇವಲ ವ್ಯಕ್ತಿಗಳಲ್ಲದೆ ದೇಶಗಳನ್ನು ಇಸ್ಲಾಂಗೆ ಪರಿವರ್ತಿಸುವ ಅಡಿಪಾಯವಾಗಿತ್ತು. ಕ್ರಿಶ್ಚಿಯನ್ ಸಿ ಸಾಹ್ನರ್ ಅವರು ʼChristian Martyrs under Islam: Religious violence and the making of the Muslim World (Princeton University Press (ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್)ʼ ಎಂಬ ಪುಸ್ತಕದಲ್ಲಿ, “ಇಸ್ಲಾಂ ಧರ್ಮವು ಕ್ರಿಶ್ಚಿಯನ್ ಪ್ರಪಂಚದಾದ್ಯಂತ ಮಲಗುವ ಕೋಣೆಯ ಮೂಲಕ ಹರಡಿತು” ಎಂದು ಹೇಳುತ್ತಾರೆ. ಮುಸ್ಲಿಮೇತರ ಮಹಿಳೆಯರಿಗೆ ಮುಸ್ಲಿಂ ಪುರುಷರ ಮೇಲಿನ ಪ್ರೀತಿಯು ಧಾರ್ಮಿಕ ಚಲನೆಯಿಂದ ತುಂಬಿದೆ. ಇಸ್ಲಾಂ ಧರ್ಮವನ್ನು ಹರಡಲು ಮುಸ್ಲಿಂ ಅಲ್ಲದ ಮಹಿಳೆಯರೊಂದಿಗೆ ಮುಸ್ಲಿಂ ಪುರುಷರ ವಿವಾಹವು ಧಾರ್ಮಿಕ ಅಜೆಂಡಾವಾಗಿ ಬದಲಾಗಿದೆ.
ಏಕಮುಖ ಸಂಚಾರ
ಸಮಸ್ಯೆ ಇನ್ನಷ್ಟು ಹದಗೆಡಿಸಲು, ಮುಸ್ಲಿಮರು ಮತ್ತು ಮುಸ್ಲಿಮೇತರರ ನಡುವಿನ ವಿವಾಹವು ಏಕಮುಖ ಸಂಚಾರವೆಂದು ತೋರುತ್ತದೆ, ಏಕೆಂದರೆ ಮುಸ್ಲಿಂ ಮಹಿಳೆಯರು ಮುಸ್ಲಿಮೇತರರನ್ನು ಮದುವೆಯಾಗುವುದನ್ನು ಇಸ್ಲಾಂ ನಿಷೇಧಿಸುತ್ತದೆ ಮತ್ತು ಅವರನ್ನು ಧರ್ಮದೊಳಗೆ ಸೀಮಿತಗೊಳಿಸುತ್ತದೆ. ಯುಎಸ್ನ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಅಧ್ಯಯನದ ಪ್ರಕಾರ, ಉನ್ನತ ಮಟ್ಟದ ಮುಸ್ಲಿಮರು ತಮ್ಮ ಪುತ್ರರು ಮುಸ್ಲಿಮೇತರರನ್ನು ಮದುವೆಯಾಗುವುದನ್ನು ಒಪ್ಪಿಕೊಂಡರೆ, ಹೆಣ್ಣುಮಕ್ಕಳು ಮುಸ್ಲಿಮೇತರರನ್ನು ಮದುವೆಯಾಗುವುದನ್ನು ಒಪ್ಪಿಕೊಳ್ಳುವುದಿಲ್ಲ.
ಭಾರತದ ಪರಿಸ್ಥಿತಿಯೂ ಭಿನ್ನವಾಗಿಲ್ಲ. 2012 ರಲ್ಲಿ, ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿ ಒಮ್ಮನ್ ಚಾಂಡಿ ಅವರು, 2009-12ರಲ್ಲಿ ಇತರ ಧರ್ಮಗಳ 2,667 ಯುವತಿಯರು ಇಸ್ಲಾಂಗೆ ಮತಾಂತರಗೊಂಡರು, ಇದೇ ವೇಳೆ ಕೇವಲ 81 ಮುಸ್ಲಿಂ ಮಹಿಳೆಯರು ಇತರ ಧರ್ಮಗಳಿಗೆ ಮತಾಂತರಗೊಂಡಿದ್ದಾರೆ (ಇಂಡಿಯಾ ಟುಡೆ, 4.9.2012) ಎಂದಿದ್ದಾರೆ. ಮುಸ್ಲೀಮೇತರರನ್ನು ಮದುವೆಯಾದ ಮುಸ್ಲಿಂ ಮಹಿಳೆಯರಿಗಿಂತ ಇಸ್ಲಾಂ ಧರ್ಮಿಯರನ್ನು ಮದುವೆಯಾದ ಮುಸ್ಲಿಮೇತರ ಮಹಿಳೆಯರ ಸಂಖ್ಯೆ 33 ಪಟ್ಟು ಹೆಚ್ಚಾಗಿದೆ.
ಕೇರಳದ ‘ಲವ್ ಜಿಹಾದ್’ ಜಾಗತಿಕ ಮಟ್ಟದಲ್ಲಿದೆ
ಇಸ್ಲಾಮಿಕ್ ಇತಿಹಾಸದ ಹಿನ್ನೆಲೆಯನ್ನು ಗಮನಿಸಿದರೆ, 2009 ರಲ್ಲಿ ಕೇರಳದಲ್ಲಿ ಕೇಳಿ ಬಂದ “ಲವ್ ಜಿಹಾದ್” ಎಂಬ ಪದವು ಪ್ರೀತಿಸುವ ಮತ್ತು ಮದುವೆಯಾಗುವ ಜೋಡಿಗಳ ಪ್ರಕರಣಗಳಿಗೆ ಸೂಕ್ತವಾದುದಲ್ಲ ಎಂದು ಹೇಳಲಾಗಿತ್ತು . ಮುಸ್ಲಿಮೇತರ ಮಹಿಳೆಯರೊಂದಿಗೆ ಮುಸ್ಲಿಮರ ವಿವಾಹದ ಬಗ್ಗೆ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಪೊಲೀಸರನ್ನು ಕೇಳಿದಾಗ ಈ ಪದ ಮಾನ್ಯತೆ ಪಡೆಯಿತು. ಕ್ರಿಶ್ಚಿಯನ್ ಅಸೋಸಿಯೇಷನ್ ಫಾರ್ ಸೋಷಿಯಲ್ ಆಕ್ಷನ್ ಕ್ರಿಶ್ಚಿಯನ್ ಮಹಿಳೆಯರ ವಿರುದ್ಧ ಲವ್ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿದಾಗ ಲವ್ ಜಿಹಾದ್ ಅನ್ನು ಕೇವಲ ಹಿಂದುತ್ವ ಗುಂಪುಗಳ ಅಭಿಯಾನ ಎಂದು ತಳ್ಳಿಹಾಕುವ ಆರಂಭಿಕ ಪ್ರಯತ್ನಗಳು ಹಿನ್ನಡೆ ಕಂಡವು.
ಯೂನಿಯನ್ ಆಫ್ ಕ್ಯಾಥೊಲಿಕ್ ಏಷ್ಯನ್ ನ್ಯೂಸ್ (13.10.2009) “India: Church, state concerned about ‘Love Jihad’”ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಮಾಡಿತು. ಕರ್ನಾಟಕ ಸರ್ಕಾರವೂ ಲವ್ ಜಿಹಾದ್ ಅನ್ನು ಗಂಭೀರವಾಗಿ ನೋಡಲಾರಂಭಿಸಿತು. 2010 ರಲ್ಲಿ, ಸಿಪಿಎಂಗೆ ಸೇರಿದ ಕೇರಳ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್, “ಹಣ ಮತ್ತು ವಿವಾಹಗಳನ್ನು” (ಟೈಮ್ಸ್ ಆಫ್ ಇಂಡಿಯಾ, 26.7.2020) ಬಳಸಿ 20 ವರ್ಷಗಳಲ್ಲಿ ಕೇರಳವನ್ನು ಇಸ್ಲಾಮೀಕರಣಗೊಳಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯೋಜನೆಯನ್ನು ಹೊಂದಿದೆ ಎಂದು ಹೇಳಿದರು. ಇತರ ಸಮುದಾಯಗಳೊಂದಿಗೆ ಮುಸ್ಲಿಮರ ವಿವಾಹದ ಕುರಿತಾದ ಒಮ್ಮನ್ ಚಾಂಡಿ ಅವರ ಡೇಟಾ (2012) ಕೇರಳದಲ್ಲಿ ಲವ್ ಜಿಹಾದ್ ಚರ್ಚೆಯನ್ನು ಪುನರುಜ್ಜೀವನಗೊಳಿಸಿತು.
ಕ್ರಿಶ್ಚಿಯನ್ನರು, ಕಾಂಗ್ರೆಸ್ ಮತ್ತು ಸಿಪಿಎಂ ಈ ವಿಷಯಕ್ಕೆ ವಿಭಿನ್ನವಾಗಿ ಒತ್ತು ನೀಡಿವೆ. ಲವ್ ಜಿಹಾದ್ ಪ್ರಕರಣಗಳ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ 2017 ರಲ್ಲಿ ಡಿಜಿಪಿ ಕೇರಳಕ್ಕೆ ನಿರ್ದೇಶನ ನೀಡಿತು. ನಂತರ, ಲವ್ ಜಿಹಾದ್ ಪ್ರಕರಣಗಳ ಅಸ್ತಿತ್ವದ ಬಗ್ಗೆ ಎನ್ಐಎ ವರದಿ ಮಾಡಿದೆ. 2019 ರಲ್ಲಿ ಕೇರಳ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕ್ರಿಶ್ಚಿಯನ್ ಮಹಿಳೆಯರನ್ನು ಸಂಘಟಿತ ಇಸ್ಲಾಂ ಧರ್ಮಕ್ಕೆ ಮಾತ್ರವಲ್ಲದೆ ಭಯೋತ್ಪಾದನೆಗಾಗಿಯೂ ಬಳಸಲಾಗುತ್ತಿರುವ ಬಗ್ಗೆ ಪತ್ರ ಬರೆದಿದ್ದಾರೆ.
2020 ರಲ್ಲಿ, ಸಿರೋ-ಮಲಬಾರ್ ಚರ್ಚ್ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿತು. ಕೇರಳದಲ್ಲಿ ಸೃಷ್ಟಿಯಾದ ಲವ್ ಜಿಹಾದ್ ಪದ ಜಾಗತಿಕ ಮಟ್ಟಕ್ಕೆ ಸಾಗಿದೆ. ಲವ್ ಜಿಹಾದ್ ಇಸ್ಲಾಮೀಕರಣಕ್ಕೆ ಒಂದು ಸಾಧನವಾಗಿದೆ ಮತ್ತು ಮತಾಂತರದ ಸಾಧನವಾದ ಮಿಶ್ರ ವಿವಾಹಗಳು ಬೌದ್ಧಧರ್ಮದ ಉಳಿವಿಗೆ ಅಪಾಯಕಾರಿ ಎಂದು ಬರ್ಮ ಮತ್ತು ಥೈಲ್ಯಾಂಡ್ನ ಬೌದ್ಧರು ಹೇಳುತ್ತಾರೆ. (Buddhist Islamophobia: Actors, Tropes, Contexts)
ಹಳತಾದ ಚಿಂತನೆ
ಈ ಸಮಸ್ಯೆಗೆ ಪರಿಹಾರವು ಆಲೋಚನೆಯಲ್ಲಿನ ಒಂದು ಮಾದರಿಯ ಬದಲಾವಣೆಯನ್ನು ಬಯಸುತ್ತದೆ. ಸಂಘಟಿತ ಧರ್ಮಗಳ ಸಾವನ್ನು ಆಶಿಸುವುದು ಈಗ ಔಟ್ ಡೇಟೆಡ್ ಆಶಯವಾಗಿದೆ. ಹೊಸ ವಾಸ್ತವವೆಂದರೆ, ಧರ್ಮ ಈಗ ಪ್ರಬಲ ಪಾತ್ರಧಾರಿಯಾಗಿ ಹೊರಹೊಮ್ಮುತ್ತಿದೆ. ಸಮಕಾಲೀನ ಲಿಬರಲ್ಗಳು 1918 ರಲ್ಲಿ ಅವರ ಐಕಾನ್ ಮ್ಯಾಕ್ಸ್ ವೆಬರ್ ಹೇಳಿದ್ದನ್ನು ಈಗ ನೆನಪಿಸಿಕೊಳ್ಳಬಹುದು. ಧರ್ಮ ಮತ್ತು ಮೂಢನಂಬಿಕೆಗಳನ್ನು ಸವೆಸಬಲ್ಲ ಮತ್ತು ಈ ಎರಡರಿಂದಲೂ ಮೋಡಿಗೊಳಗಾದ ಜಗತ್ತನ್ನು ಅಪವಿತ್ರಗೊಳಿಸಬಲ್ಲ ವಿಜ್ಞಾನವು ಮೌಲ್ಯಗಳು ಮತ್ತು ನೈತಿಕತೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಮೂಲಭೂತ ಬಿಕ್ಕಟ್ಟಿಗೆ ಕಾರಣವಾಗುವ ವಿಜ್ಞಾನ ಮತ್ತು ಧರ್ಮದಲ್ಲಿನ ಅಸಮರ್ಪಕತೆಯ ಮುನ್ಸೂಚನೆಯನ್ನು ಆತ ನೀಡಿದ್ದ.
ಹಳೆಯ ಶೈಲಿಯ ಧರ್ಮಕ್ಕೆ ಮರಳುವುದು ಕೀಳು ಪರಿಹಾರ ಎಂದು ವೆಬರ್ ಭಾವಿಸಿದ್ದರೂ, ಅವನ ಪೂರ್ಣ ನೂರು ವರ್ಷಗಳ ನಂತರ, ಆತ ಹೆದರುತ್ತಿದ್ದ ಸಂಗತಿಗಳು ನಿಜವಾಗುತ್ತಿದೆ. ಜಗತ್ತು ಬೆರಗುಗೊಳಿಸುವ ರೀತಿಯಲ್ಲಿ ಧಾರ್ಮಿಕವಾಗುತ್ತಿದೆ. ಧಾರ್ಮಿಕರ ಜನಸಂಖ್ಯೆಯು 2050 ರಲ್ಲಿ 2.3 ಶತಕೋಟಿಗಳಷ್ಟು ಹೆಚ್ಚಾಗುತ್ತದೆ ಮತ್ತು ಧಾರ್ಮಿಕರಲ್ಲದವರು ಕೇವಲ 0.1 ಬಿಲಿಯನ್ ಆಗುತ್ತಾರೆ ಎಂದು ಊಹಿಸಲಾಗಿದೆ! 1970 ರ ದಶಕದಲ್ಲಿ 5 ರಲ್ಲಿ 1 ಧಾರ್ಮಿಕರಲ್ಲದರಾಗಿದ್ದರೆ, 2050ರಲ್ಲಿ ಇದು 7 ರಲ್ಲಿ 1 ಆಗಲಿದೆ. ಧಾರ್ಮಿಕರಲ್ಲದವರ ಸಂಖ್ಯೆ ಗಣನೀಯ ಕುಸಿಯಲಿದೆ.
ಇದನ್ನು ಉಲ್ಲೇಖಿಸಿ, ವಿಶ್ವ ಆರ್ಥಿಕ ವೇದಿಕೆ ಹೀಗೆ ಹೇಳುತ್ತದೆ: “ಸಂಘಟಿತ ಧರ್ಮಗಳ ಸಾವಿನ ವರದಿಗಳು ಉತ್ಪ್ರೇಕ್ಷೆಯಾಗಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ವಿಶ್ವದಾದ್ಯಂತ ಧಾರ್ಮಿಕರ ಜನಸಂಖ್ಯೆಯ ಬೆಳವಣಿಗೆಯು 2010 ಮತ್ತು 2050 ರ ನಡುವಿನ ಧಾರ್ಮಿಕರಲ್ಲದವರ ಬೆಳವಣಿಗೆಗಿಂತ 23 ಪಟ್ಟು ದೊಡ್ಡದಾಗಿದೆ ಎಂದು ಊಹಿಸಲಾಗಿದೆ.
ಧಾರ್ಮಿಕತೆ ಹೆಚ್ಚುತ್ತಿರುವ ಮತ್ತು ವೆಬೆರಿಯನಿಸಂ ಕಡಿಮೆಯಾಗುತ್ತಿರುವ ಜಗತ್ತಿನಲ್ಲಿ, ಸಮಕಾಲೀನ ಉದಾರವಾದಿ ವಿಚಾರಗಳು ಹಳೆಯದು ಮತ್ತು ಧರ್ಮವನ್ನು ಪ್ರೀತಿಸುವಂತಹ ವಿಷಯಗಳನ್ನು ನಿಭಾಯಿಸಲು ಅಸಮರ್ಥವೆಂದು ತೋರುತ್ತದೆ. ಸಮಕಾಲೀನ ಉದಾರವಾದಕ್ಕಿಂತ ಹೆಚ್ಚು ಸೂಕ್ತವಾದ ವಿಭಿನ್ನ ಆಲೋಚನೆ ಅಗತ್ಯವಾಗಿದೆ. ಉದಯೋನ್ಮುಖ ಪರಿಸ್ಥಿತಿ ಪ್ರಾಮಾಣಿಕ, ಮುಕ್ತ ಮತ್ತು ದಿಟ್ಟ ಚರ್ಚೆಗೆ ಕರೆ ನೀಡುತ್ತದೆ. ವಿಕಾರಗೊಂಡ ಭಾರತೀಯ ಜಾತ್ಯತೀತತೆಯು ಇದನ್ನು ಪ್ರಶ್ನೆಯಾಗಿ ಸ್ವೀಕರಿಬಲ್ಲದೆ?
ಮೂಲ ಲೇಖನ: ಎಸ್.ಗುರುಮೂರ್ತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.