
ನವದೆಹಲಿ: ಈ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಪ್ರಮುಖ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಅವರನ್ನು ಬೆಂಬಲಿಸುವ ಪೋಸ್ಟರ್ಗಳು ಮತ್ತು ಘೋಷಣೆಗಳು ಭಾನುವಾರ ದೆಹಲಿಯ ಇಂಡಿಯಾ ಗೇಟ್ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ರಾರಾಜಿಸಿವೆ. ವಿಚಿತ್ರವೆಂದರೆ ದೆಹಲಿ ಮಾಲಿನ್ಯದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವೇಳೆ ಈ ಪೋಸ್ಟರ್ಗಳನ್ನು ಹಾಕಲಾಗಿದೆ.
ಹದಗೆಡುತ್ತಿರುವ ವಾಯು ಮಾಲಿನ್ಯದ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮಾವೋವಾದಿಗಳ ಪರವಾದ ಪೋಸ್ಟರ್, ಘೋಷಣೆಗಳು ಕಾಣಿಸಿಕೊಂಡವು. ಪ್ರತಿಭಟನಾಕಾರರ ಗುಂಪೊಂದು “ಮಾದ್ವಿ ಹಿದ್ಮಾ ಅಮರ್ ರಹೇ” ಎಂಬ ಘೋಷಣೆಗಳನ್ನು ಕೂಗಿದೆ.
ಪ್ರದರ್ಶನವು ಹಿಂಸಾತ್ಮಕವಾಗುವ ಕೆಲವೇ ನಿಮಿಷಗಳ ಮೊದಲು, “ಬಿರ್ಸಾ ಮುಂಡಾದಿಂದ ಮಾದ್ವಿ ಹಿಡ್ಮಾರವರೆಗೆ, ನಮ್ಮ ಕಾಡುಗಳು ಮತ್ತು ಪರಿಸರದ ಹೋರಾಟ ಮುಂದುವರಿಯುತ್ತದೆ” ಎಂದು ಬರೆದ ಪೋಸ್ಟರ್ ಅನ್ನು ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ಹಿಡಿದಿದ್ದ.
ಮಾವೋವಾದಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ.
“ಇಂಡಿಯಾ ಗೇಟ್ನಲ್ಲಿ ಅಂತಹ ಘೋಷಣೆಗಳನ್ನು ಕೂಗಿದವರನ್ನು ಗುರುತಿಸಲಾಗುವುದು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾವು ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಕನಿಷ್ಠ 26 ಸಶಸ್ತ್ರ ದಾಳಿಗಳಿಗೆ ಕಾರಣನಾಗಿದ್ದ ಹಿಡ್ಮಾ, ನವೆಂಬರ್ 18 ರಂದು ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ. 1981 ರಲ್ಲಿ ಸುಕ್ಮಾದಲ್ಲಿ ಜನಿಸಿದ ಹಿಡ್ಮಾ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ಅನ್ನು ಮುನ್ನಡೆಸಿದ್ದ ಮತ್ತು ಸಿಪಿಐ ಮಾವೋವಾದಿಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕೇಂದ್ರ ಸಮಿತಿಯ ಕಿರಿಯ ಸದಸ್ಯನಾಗಿದ್ದ. ಕೇಂದ್ರ ಸಮಿತಿಯಲ್ಲಿ ಬಸ್ತಾರ್ ಪ್ರದೇಶದ ಏಕೈಕ ಬುಡಕಟ್ಟು ಸದಸ್ಯರಾಗಿದ್ದ.
ಹಿಡ್ಮಾ ತಲೆ ಮೇಲೆ 50 ಲಕ್ಷ ರೂ. ಬಹುಮಾನವಿತ್ತು. 2010 ರಲ್ಲಿ ದಾಂತೇವಾಡದಲ್ಲಿ ನಡೆದ ದಾಳಿಯಲ್ಲಿ 76 ಸಿಆರ್ಪಿಎಫ್ ಸಿಬ್ಬಂದಿ ಬಲಿಯಾದ ದಾಳಿ ಮತ್ತು 2013 ರಲ್ಲಿ ಜಿರಾಮ್ ಘಾಟಿಯಲ್ಲಿ ನಡೆದ ದಾಳಿಯಲ್ಲಿ ಕಾಂಗ್ರೆಸ್ನ ಉನ್ನತ ನಾಯಕರು ಸೇರಿದಂತೆ 27 ಜನರು ಸಾವನ್ನಪ್ಪಿದರು. 2021 ರಲ್ಲಿ ಸುಕ್ಮಾ-ಬಿಜಾಪುರದಲ್ಲಿ ನಡೆದ ದಾಳಿಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದ, ಇದರಲ್ಲಿ 22 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು.
ಆದರೆ ಎಡಪಂಥೀಯ ಗುಂಪುಗಳನ್ನು ಈತನನ್ನು ಹೀರೋ ಮಾಡಲು ಹೊರಟಿದ್ದು, ದೆಹಲಿಯಲ್ಲಿ ಈತನ ಪರವಾಗಿ ಘೋಷಣೆ ಕೂಗುವ ಹಂತಕ್ಕೂ ಇವರು ಹೋಗಿದ್ದಾರೆ ಎಂಬುದು ದುರಾದೃಷ್ಟವೇ ಸರಿ.
#WATCH | Delhi: A group of protesters holds a protest at India Gate over air pollution in Delhi-NCR. They were later removed from the spot by police personnel pic.twitter.com/DBEZTeET0U
— ANI (@ANI) November 23, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



