ನವದೆಹಲಿ: ಇತ್ತೀಚಿಗೆ ಬಿಹಾರದ ಮುಜಾಫರ್ಪುರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಡಿಎನ್ಎ ಬಗ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿಗೆ ಪತ್ರ ಬರೆಯಲಿದ್ದಾರೆ.
ಪತ್ರದಲ್ಲಿರುವ ನಿತೀಶ್ ಕಾಮೆಂಟ್ಗಳು ಶೀಘ್ರದಲ್ಲೇ ಟ್ವಿಟರ್ನಲ್ಲಿ ಪ್ರಕಟಗೊಳ್ಳಲಿದೆ.
ಸಮಾವೇಶದಲ್ಲಿ ಮಾತನಾಡಿದ್ದ ಮೋದಿ, ‘ನಿತೀಶ್ ಅವರ ಡಿಎನ್ಎಯಲ್ಲಿಯೇ ಏನೋ ಸಮಸ್ಯೆಯಿದೆ, ಪ್ರಜಾಪ್ರಭುತ್ವದ ಡಿಎನ್ಎ ಆ ರೀತಿ ಇರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ನಮ್ಮ ಶತ್ರುಗಳಿಗೂ ಗೌರವ ನೀಡುತ್ತೇವೆ’ ಎಂದಿದ್ದರು.
ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ನಿತೀಶ್, ಮೋದಿ ಈ ಹೇಳಿಕೆಯ ಮೂಲಕ ಬಿಹಾರದ ಜನತೆಗೆ ಅವಮಾನ ಮಾಡಿದ್ದಾರೆ ಎಂದಿದ್ದರು.
ನಾನು ಬಿಹಾರದ ಮಗ, ಬಿಹಾರದ ಜನತೆಯಲ್ಲಿರುವ ಡಿಎನ್ಎನೇ ನನಗೂ ಇದೆ, ತಮ್ಮ ಡಿಎನ್ಎಯನ್ನು ಅವಮಾನಿಸಿ ವ್ಯಕ್ತಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬುದನ್ನು ಜನತೆಗೆಯೇ ಬಿಟ್ಟುಬಿಡುತ್ತೇನೆ ಎಂದು ನಿತೀಶ್ ಹೇಳಿದ್ದಾರೆ.
ಇದೀಗ ಮೋದಿಗೆ ಪತ್ರ ಬರೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಅವರು ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.