ನವದೆಹಲಿ: ಪೂರ್ವ ಲಡಾಖ್ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ನಿಯೋಜಿತಗೊಂಡಿರುವ ಭಾರತೀಯ ಸೇನಾ ಪಡೆಗಳಿಗಾಗಿನ ಸ್ಮಾರ್ಟ್ ಕ್ಯಾಂಪ್ಗಳು ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಬಳಕೆಗೆ ಸಿದ್ಧವಾಗಿವೆ.
ಎಲ್ಎಸಿಯ ಉದ್ದಕ್ಕೂ ಚೀನಾವು ಭಾರತೀಯ ಭೂಪ್ರದೇಶದ ಮೇಲೆ ನಡೆಸುವ ಯಾವುದೇ ಅತಿಕ್ರಮಣವನ್ನು ಎದುರಿಸಲು ಭಾರತೀಯ ಸೇನೆಯು ಈ ಪ್ರದೇಶದಲ್ಲಿ 50,000 ಸೈನಿಕರನ್ನು ನಿಯೋಜಿಸಿದೆ.
ಚಳಿಗಾಲದಲ್ಲಿ ಲಡಾಖ್ನಲ್ಲಿ ತಾಪಮಾನ ಗಣನೀಯವಾಗಿ ಇಳಿಯುವುದರಿಂದ ಸ್ಮಾರ್ಟ್ ಕ್ಯಾಂಪ್ಗಳು ಅಗತ್ಯವಾಗಿರುತ್ತದೆ, ಇಲ್ಲಿ ತಾಪಮಾನ ಆಗಾಗ ಫ್ರೀಝಿಂಗ್ ಪಾಯಿಂಟ್ಗಿಂತ 40 ಡಿಗ್ರಿ ಕಡಿಮೆಗೆ ತಲುಪುತ್ತದೆ.
ಡಿಸೆಂಬರ್ ಮತ್ತು ಫೆಬ್ರವರಿ ನಡುವಿನ ಚಳಿಗಾಲದ ತಿಂಗಳುಗಳಲ್ಲಿ, ಈ ಪ್ರದೇಶದಲ್ಲಿ ಹಲವಾರು ಅಡಿ (30 ರಿಂದ 40 ಅಡಿಗಳು)ಗಳಷ್ಟು ಹಿಮ ಆವೃತ್ತವಾಗಿತ್ತು.
ಈ ಸ್ಮಾರ್ಟ್ ಕ್ಯಾಂಪ್ಗಳನ್ನು ಕಳೆದ ಕೆಲವು ತಿಂಗಳುಗಳಿಂದ ಲಡಾಕ್ನಲ್ಲಿ ಮೂಲಸೌಕರ್ಯ ಚಾಲನೆಯ ಭಾಗವಾಗಿ ಸೈನ್ಯದ ಚಲನವಲನವನ್ನು ಸರಾಗಗೊಳಿಸುವ ಸಲುವಾಗಿ ಮತ್ತು ನವೆಂಬರ್ ಮತ್ತು ಮಾರ್ಚ್ ನಡುವಿನ ಕಠಿಣ ಚಳಿಗಾಲದಲ್ಲಿ ಬದುಕುಳಿಯಲು ಸುಲಭವಾಗುವಂತೆ ನಿರ್ಮಿಸಲಾಗಿದೆ.
ಈ ಶಿಬಿರಗಳಲ್ಲಿ ವಿದ್ಯುತ್, ನೀರು ಮತ್ತು ಹೀಟಿಂಗ್ ವ್ಯವಸ್ಥೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷವು ಚಳಿಗಾಲದಲ್ಲೂ ಮುಂದುವರಿಯುವ ಸಾಧ್ಯತೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.