ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಭಾರತದಲ್ಲಿ ಒಟ್ಟು ಅಂತರ್ಜಾಲ ಸಂಪರ್ಕಗಳ ಸಂಖ್ಯೆ 31 ಆಗಸ್ಟ್ 2020 ರ ವೇಳೆಗೆ 75 ಕೋಟಿ ಮೈಲಿಗಲ್ಲು ದಾಟಿದೆ, ಅಂತರ್ಜಾಲ ಸೇವೆಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಬಳಕೆಗೆ ತೆರೆದು 25 ವರ್ಷಗಳ ನಂತರ ಈ ಸಾಧನೆ ಮಾಡಲಾಗಿದೆ. 1995 ಆಗಸ್ಟ್ 15 ರಂದು ಅಂತರ್ಜಾಲ ಸೇವೆಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಬಳಕೆಗೆ ತೆರೆಯಲಾಯಿತು.
2016 ರ ಮಾರ್ಚ್ನಲ್ಲಿ 34 ಕೋಟಿ ಅಂತರ್ಜಾಲ ಸಂಪರ್ಕಗಳನ್ನು ಭಾರತದಲ್ಲಿ ಹೊಂದಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಸಂಪರ್ಕಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂಬುದು ಗಮನಾರ್ಹ. ಸರ್ಕಾರವು ತನ್ನ ಡಿಜಿಟಲ್ ಇಂಡಿಯಾ ಅಡಿಯಲ್ಲಿ ಅಂತರ್ಜಾಲ ಸಂಪರ್ಕಗಳಿಗೆ ಉತ್ತೇಜನ ನೀಡಿದ್ದರಿಂದ ಮಹತ್ವದ ಪ್ರಗತಿ ಸಾಧಿಸಲಾಗಿದೆ.
ಇದಕ್ಕೂ ಮುನ್ನ, ಭಾರತವು 2018 ರ ಸೆಪ್ಟೆಂಬರ್ನಲ್ಲಿ 50 ಕೋಟಿ ಸಂಪರ್ಕಗಳ ಮೈಲಿಗಲ್ಲು ದಾಟಿದೆ. ಅಂದಿನಿಂದ, ರಾಷ್ಟ್ರವು ಪ್ರತಿ ತಿಂಗಳು 86 ಲಕ್ಷಕ್ಕೂ ಹೆಚ್ಚು ಹೊಸ ಸಂಪರ್ಕಗಳನ್ನು ಸೇರ್ಪಡೆಗೊಳಿಸಿದೆ.
ಈ ನಡುವೆ, ಕೇವಲ ಆರು ರಾಜ್ಯಗಳು 26 ಕೋಟಿ ಅಥವಾ ರಾಷ್ಟ್ರದ ಎಲ್ಲಾ ಇಂಟರ್ನೆಟ್ ಸಂಪರ್ಕಗಳಲ್ಲಿ ಶೇಕಡಾ 35 ರಷ್ಟನ್ನು ಹೊಂದಿವೆ ಎಂಬುದು ಗಮನಾರ್ಹವಾಗಿದೆ. ಅವುಗಳೆಂದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಮತ್ತು ಮಹಾರಾಷ್ಟ್ರ.
ಅಲ್ಲದೆ, 2020 ರ ಜೂನ್ 30 ರ ವೇಳೆಗೆ, ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಸುನಿಲ್ ಮಿತ್ತಲ್ ಅವರ ಭಾರತಿ ಏರ್ಟೆಲ್ ಮತ್ತು ನಂತರ ವೊಡಾಫೋನ್ ಐಡಿಯಾ ನಂತರದ ಸ್ಥಾನವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.