ನವದೆಹಲಿ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಬೆಂಗಳೂರು-ಚೆನ್ನೈ ನಡುವೆ 263 ಕಿಮೀ ಉದ್ದದ ಚತುಷ್ಪಥ ಎಕ್ಸ್ಪ್ರೆಸ್ ಹೆದ್ದಾರಿಯನ್ನು ನಿರ್ಮಿಸುವ ಕೆಲಸಕ್ಕೆ ಸಿದ್ಧತೆ ನಡೆಸಿದೆ.
ಇದರನ್ವಯ ಬೆಂಗಳೂರು-ಚೆನ್ನೈ ನಡುವಿನ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಎನ್ಎಚ್ಎಐ ಬಿಡ್ಗಳನ್ನು ಆಹ್ವಾನಿಸಿದೆ. 2021 ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಈ ಕಾಮಗಾರಿಯನ್ನು ಆರಂಭ ಮಾಡುವ ಇರಾದೆಯನ್ನೂ ಪ್ರಾಧಿಕಾರ ಹೊಂದಿದೆ. ಈ ಯೋಜನೆಯನ್ನು ಹತ್ತು ಪ್ಯಾಕೇಜ್ಗಳಂತೆ ವಿಂಗಡಣೆ ಮಾಡಲಾಗಿದ್ದು 2024ರ ಮಾರ್ಚ್ ವೇಳೆಗೆ ಸಂಪೂರ್ಣಗೊಳಿಸುವ ಗುರಿಯನ್ನು ಸಹ ಪ್ರಾಧಿಕಾರ ಹೊಂದಿರುವುದಾಗಿ ತಿಳಿಸಿದೆ.
ಈಗಾಗಲೇ ವಿಂಗಡಣೆ ಮಾಡಲಾಗಿರುವ ಹತ್ತು ಪ್ಯಾಕೇಜ್ಗಳ ಪೈಕಿ ಮೂರು ಪ್ಯಾಕೇಜ್ಗಳು ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಅನ್ವಯವಾಗಿದ್ದರೆ, ನಾಲ್ಕು ಪ್ಯಾಕೇಜ್ಗಳು ತಮಿಳುನಾಡಿಗೆ ಸಂಬಂಧಿಸಿದಂತಿದೆ. ಸುಮಾರು 17 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ. ಪ್ರಸ್ತುತ ಆರಂಭ ಮಾಡಲು ನಿರ್ಧರಿಸಲಾಗಿರುವ ಬೆಂಗಳೂರು-ಚೆನ್ನೈ ನಡುವಿನ ಕಾಮಗಾರಿ ಸಂಪೂರ್ಣವಾದಲ್ಲಿ, ಈ ಎರಡು ನಗರಗಳಿಗೆ ಎರಡೂವರೆ ಗಂಟೆಗಳಲ್ಲಿಯೇ ಪ್ರಯಾಣ ಸಾಧ್ಯವಾಗಲಿದೆ.
ಇನ್ನು ಯೋಜನೆಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಮಾತುಕತೆ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.