ವದೆಹಲಿ: 2021 ರ ಜ. 1 ರಿಂದಲೇ ಜಾರಿಯಾಗುವಂತೆ ಎಲ್ಲಾ ರೀತಿಯ ಚತುಷ್ಪಥ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸಾರಿಗೆ ಸಚಿವಾಲಯವು ಆದೇಶವನ್ನು ಹೊರಡಿಸಿದೆ.
ಯಾವುದೇ ಚತುಷ್ಪಥ ವಾಹನಗಳಿಗೂ ಈ ಆದೇಶದಿಂದ ಯಾವುದೇ ರೀತಿಯ ವಿನಾಯಿತಿ ಇಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ. 2017 ಡಿ.1 ಕ್ಕೂ ಮೊದಲು ಮಾರಾಟವಾಗಿರುವ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯ ಎಂದು ಈ ಆದೇಶ ತಿಳಿಸಿದೆ. ಆ ಬಳಿಕ ಮಾರಾಟವಾಗಿರುವ ವಾಹನಗಳಿಗೆ ಈ ನಿಯಮ ಈಗಾಗಲೇ ಜಾರಿಯಲ್ಲಿದೆ ಎಂದು ಸಚಿವಾಲಯವು ಹೇಳಿದೆ.
ಈ ಆದೇಶದನ್ವಯ ಮುಂದಿನ ದಿನಗಳಲ್ಲಿ ಫಾಸ್ಟ್ಯಾಗ್ ಹೊಂದಿದ್ದರಷ್ಟೇ ಫಿಟ್ನೆಸ್ ಸರ್ಟಿಫಿಕೇಟ್ ದೊರೆಯಲಿದೆ. ಇನ್ನು ರಾಷ್ಟ್ರೀಯ ಪರವಾನಿಗೆ ಹೊಂದಿರುವ ವಾಹನಗಳಿಗೆ 2019ರಲ್ಲಿಯೇ ಫಾಸ್ಟ್ಯಾಗ್ ಕಡ್ಡಾಯ ನಿಯಮವನ್ನು ಜಾರಿಗೆ ತರಲಾಗಿತ್ತು. ಜೊತೆಗೆ ಮುಂದಿನ ದಿನಗಳಲ್ಲಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ಗೆ ಸಹ ಫಾಸ್ಟ್ಯಾಗ್ ಹೊಂದಿರುವುದು ಕಡ್ಡಾಯ ಎಂದು ಸಾರಿಗೆ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.