ಪುತ್ತೂರು : ಮಾನಸಿಕವಾಗಿ ಹುರುಪಿನಿಂದ ಕಾರ್ಯಚಟುವಟಿಕೆ ಮಾಡುವವರು ಸದಾಯುವಕರಂತೆ ಚೈತನ್ಯಹೊಂದಿರುವರು, ಪ್ರಸ್ತುತ ಯುವ ಸಮಾಜ ತಂತ್ರಜ್ಞಾನದಲ್ಲಿ ವೇಗವಾಗಿ ಮುಂದುವರಿಯುತ್ತದೆಯಾದರೂ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ ಇದು ವಿಷಾದನೀಯ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು.
ಅವರು ಎ.೨ರಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆದ ರಾಷ್ಟ್ರೀಯ ಯುವಸಪ್ತಾಹದ ಸಮಾರೋಪ ಸಮಾರಂಭ ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಮತ್ತು ಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆಶಯ ಬಾಷಣ ಮಾಡಿದರು.
ದೇಶದಲ್ಲಿ ಹಲವು ರೀತಿಯ ಭಯೋತ್ಪಾದನೆಗಳು ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತಿವೆ.ಇದರಲ್ಲಿ ಸಾಂಸ್ಕೃತಿಕ ಭಯೋತ್ಪಾದನೆ ಕೂಡ ಒಂದು ಜತೆಗೆ ನಾವು ಸಾಂಸ್ಕೃತಿಕ ನೆಲೆಗಟ್ಟನ್ನು ಮರೆಯುತ್ತಿದ್ದೇವೆ ಇದು ನಮ್ಮ ದೇಶದ ದೊಡ್ಡ ದುರಂತ.ಸಮಾಜ ಹಾದಿತಪ್ಪುತ್ತಿರುವುದನ್ನು ಯುವಸಮಾಜದಿಂದ ಸರಿಮಾಡುವ ಸಾಮರ್ಥ್ಯವಿದೆ,ಬದ್ದತೆಯಿಂದ ಕಾರ್ಯಮಾಡಿದಾಗ ಯಾವುದೇ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಕೆ.ಕೆ.ಪೂಂಜ ಉದ್ಘಾಟಿಸಿದರು.
ತಾ.ಪಂ.ಉಪಾಧ್ಯಕ್ಷ ಹಾಗೂ ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ದಿನೇಶ್ ಮೆದು ಮಾತನಾಡಿ ,ಯುವಕ ಮಂಡಲದ ಸದಸ್ಯರ ಸಹಕಾರ,ಸಹಭಾಗಿತ್ವದಿಂದ ಹಲವು ಸಮಾಜಮುಖಿ ಕಾರ್ಯ ನಡೆಸಲು ಸಾಧ್ಯವಾಗಿದೆ,ಯುವ ಸಮಾಜ ತಮಗೆ ದೊರಕುವ ವೇದಿಕೆಯನ್ನು ಸದುಪಯೋಗಪಡಿಸಿಕೊಂಡರೆ ಬೆಳವಣಿಗೆ ಸಾಧ್ಯ ಎಂದರು.
ಸವಣೂರು ಪ.ಪೂ.ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್ ಮಾತನಾಡಿ,ಹಲವಾರು ಸಾಮಾಜಿಕ ಕಾರ್ಯ ನಡೆಸುತ್ತಿರುವ ಸವಣೂರು ಯುವಕ ಮಂಡಲದಿಂದ ಇನ್ನಷ್ಟು ಸೇವೆಗಳು ಸಮಾಜಕ್ಕೆ ದೊರಕಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಮಾತನಾಡಿ ,ಯುವಕ ಮಂಡಲದ ಸಮಾಜಮುಖಿ ಕಾರ್ಯಕ್ಕೆ ಪ್ರೊತ್ಸಾಹ ಅಗತ್ಯ,ಯುವ ಸಮುದಾಯ ಏಕಭಾವ ಮನಸ್ಸಿನಿಂದ ಸಂಘಟಿತರಾಗಿ ಮುಂದುವರಿದಾಗ ಏಳಿಗೆ ಸಾಧ್ಯ,ಇವರಿಂದ ಸಂಸ್ಕೃತಿ,ಸಂಸ್ಕಾರ ಉಳಿಯಲು ಸಾಧ್ಯ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ “ಶ್ರವಣ ಕೀರ್ತಿ”ಪ್ರಶಸ್ತಿಯನ್ನು ಕಾವು ನನ್ಯ ತುಡರ್ ಯುವಕ ಮಂಡಲಕ್ಕೆ ,ತಾಲೂಕು ಮಟ್ಟದ ಅತ್ಯುತ್ತಮ ಯುವ ಪ್ರಶಸ್ತಿ “ಶ್ರವಣ ದೀಪ”ವನ್ನು ಕಬಕ ಮಹಾದೇವಿ ಯುವಕ ಮಂಡಲದ ಸದಸ್ಯ ಹರೀಶ್ ರವರಿಗೆ ದ.ಕ.ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಕಾವು ನನ್ಯ ತುಡರ್ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ಬಲ್ಯಾಯ,ಕಬಕ ಮಹಾದೇವಿ ಯುವಕ ಮಂಡಲದ ಸದಸ್ಯ ಹರೀಶ್ ಅನಿಸಿಕೆ ವ್ಯಕ್ತಪಡಿಸಿ ಸಂಘಟಿತ ಕಾರ್ಯಕ್ಕೆ ಪ್ರಶಸ್ತಿ ದೊರೆತಿದ್ದು ಇದು ಎಲ್ಲಾ ಸದಸ್ಯರ ಶ್ರಮಕ್ಕೆ ಸಿಕ್ಕ ಪ್ರಶಸ್ತಿ ಎಂದರು.ಸುರೇಶ್ ರೈ ಸೂಡಿಮುಳ್ಳು ,ಮಹೇಶ್ ಕೆ.ಸವಣೂರು ,ಜಗದೀಶ್ ಇಡ್ಯಾಡಿ ,ಪುಷ್ಪರಾಜ್ ಆರೆಲ್ತಡಿ ,ಸಂತೋಷ್ ಕಾಯರ್ಗ ಅತಿಥಿಗಳನ್ನು ಗೌರವಿಸಿದರು.
ಯುವಸಪ್ತಾಹ ಕಾರ್ಯಕ್ರಮಕ್ಕೆ ಸಹಕರಿಸಿದ ಶ್ರೀ.ಕ್ಷೇ.ಧ.ಗ್ರಾ.ಯೋ ಸವಣೂರು ವಲಯದ ಪರವಾಗಿ ಜಗದೀಶ್ ಇಡ್ಯಾಡಿ, ,ಓಂಕಾರ ಸೇವಾ ಸಮಿತಿ ಆರೆಲ್ತಡಿಯ ಪರವಾಗಿ ಅಧ್ಯಕ್ಷ ಪ್ರವೀಣ್ ,ಗೋಕುಲಂ ಸವಣೂರುನ ಪರವಾಗಿ ಸಂಚಾಲಕ ಎ.ಆರ್.ಚಂದ್ರ, ,ಎಸ್.ಜೆ.ಸಿ ಸವಣೂರುನ ಪರವಾಗಿ ರಘು ಬೇರಿಕೆ, ,ಹಿಂದೂ ಜಾಗರಣಾ ವೇದಿಕೆ ಸವಣೂರುನ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ,ಜೆಸಿಐ ಸವಣೂರು ಘಟಕದ ಪರವಾಗಿ ಅಧ್ಯಕ್ಷ ಶಶಿಕುಮಾರ್ ಬಿ.ಎನ್,ಉಪಾಧ್ಯಕ್ಷ ವಸಂತ ವೀರಮಂಗಳ,ಕಾರ್ಯದರ್ಶಿ ದಯಾನಂದ ರನ್ನು ಯುವಕ ಮಂಡಲದ ವತಿಯಿಂದ ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ದಯಾನಂದ ಮೆದು ಸ್ವಾಗತಿಸಿ ,ಕಾರ್ಯದರ್ಶಿ ಯತೀಶ್ ಕುಮಾರ್ ಕೆ.ಎಂ ವರದಿ ವಾಚಿಸಿದರು,ಮಾಜಿ ಕಾರ್ಯದರ್ಶಿ ಸಚಿನ್ ಸವಣೂರು ವಂದಿಸಿದರು.ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರ್ವಹಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಸಂತಿ ತಾರನಾಥ್ ಸವಣೂರು ನೇತೃತ್ವದಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ಮತ್ತು ನಮ್ಮ ಕಲಾವಿದೆರ್ ನೆಲ್ಯಾಡಿ ತಂಡದಿಂದ ಒವುಲಾ ಪನಿಯರಾಪುಜಿ ಮಾತ ದೇವೆರ್ನಾ ತುಳು ನಾಟಕ ಪ್ರದರ್ಶನಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.