ಗಾಂಧಿನಗರ: ಕಳೆದ ಶನಿವಾರವಷ್ಟೇ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ಗುಜರಾತ್ನ ಕೇವಾಡಿಯಾದ ಸೀ ಪ್ಲೇನ್ಗೆ ಸಾಕಷ್ಟು ಬೆಂಬಲ ದೊರೆತಿದೆ.
ಒಂದೇ ದಿನದಲ್ಲಿ ಬರೋಬ್ಬರಿ 3000 ಸೀ ಪ್ಲೇನ್ ಟಿಕೆಟ್ಗಳು ಬುಕ್ಕಿಂಗ್ ಆಗುವ ಮೂಲಕ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ. ಈ ವಿಮಾನ ಸೇವೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದು ಮಾತ್ರವಲ್ಲದೆ, ಮೊದಲ ಗ್ರಾಹಕರೂ ಅವರೇ ಆಗಿದ್ದರು ಎಂದು ಸಂಸ್ಥೆ ತಿಳಿಸಿದೆ.
ಈ ಸಂಬಂಧ ಮಾಹಿತಿ ನೀಡಿರುವ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಅಜಯ್ ಸಿಂಗ್, ಮುಂದಿನ ದಿನಗಳಲ್ಲಿ ಗುಜರಾತ್ನ ಬೇರೆ ಬೇರೆ ಪ್ರದೇಶಗಳಿಂದ ಏಕತಾ ಪ್ರತಿಮೆಗೆ ಸೀ ಪ್ಲೇನ್ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ಪ್ರಾರಂಭ ಮಾಡಲಾಗಿರುವ ಸೀ ಪ್ಲೇನ್ ದರ ಉಡಾನ್ ಯೋಜನೆಯಡಿಯಲ್ಲಿ 30% ದಷ್ಟು ಸೀಟುಗಳಿಗೆ 1500 ಮತ್ತು ಉಳಿದಂತೆ 5000 ದವರೆಗೆ ದರ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದು ದೇಶದ ಮೊದಲ ಸೀ ಪ್ಲೇನ್ ಆಗಿದೆ. ಅಹಮದಾಬಾದ್ನಿಂದ ಏಕತಾ ಪ್ರತಿಮೆಗೆ 40 ನಿಮಿಷಗಳಲ್ಲಿ ಇದರ ಮೂಲಕ ತಲುಪಲು ಸಾಧ್ಯವಿದೆ. ರಸ್ತೆ ಮುಖಾಂತರ ತೆರಳುವುದಾದರೆ 5 ತಾಸುಗಳ ಪ್ರಯಾಣವಾಗಿದ್ದು, ಈ ಸಮಯವನ್ನು ಸೀ ಪ್ಲೇನ್ ಕಡಿಮೆ ಮಾಡಲಿದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.