ನವದೆಹಲಿ: ಆರ್ಥಿಕ ಚೇತರಿಕೆಯ ಆರಂಭಿಕ ಸೂಚನೆಗಳು ಸಿಗಲಾರಂಭಿಸಿದೆ. 2020 ರ ಅಕ್ಟೋಬರ್ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು 1.05 ಲಕ್ಷ ಕೋಟಿ ರೂ.ಗಳಾಗಿದೆ. FY 21 ರಲ್ಲಿ ಮಾಸಿಕ ಆದಾಯವು 1 ಲಕ್ಷ ಕೋಟಿ ರೂ. ದಾಟಿರುವುದು ಇದೇ ಮೊದಲು.
ಈ ತಿಂಗಳ ಜಿಎಸ್ಟಿ ಆದಾಯ ಸಂಗ್ರಹ 1,05,155 ಕೋಟಿ ರೂ.ಗಳಾಗಿದ್ದು, ಇದು 2019 ರ ಅಕ್ಟೋಬರ್ಗಿಂತ 10 ಶೇಕಡಾ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
2020 ರ ಅಕ್ಟೋಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ 1,05,155 ಕೋಟಿ ರೂ. ಇದರಲ್ಲಿ ಸಿಜಿಎಸ್ಟಿ 19,193 ಕೋಟಿ ರೂ., ಎಸ್ಜಿಎಸ್ಟಿ 25,411 ಕೋಟಿ ರೂ., ಐಜಿಎಸ್ಟಿ 52,540 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 23,375 ಕೋಟಿ ರೂ.) ಮತ್ತು ಸೆಸ್ 8,011 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ 932 ಕೋಟಿ ರೂ. ಸೇರಿದಂತೆ).
Rs 1,05,155 crore of gross GST revenue collected in the month of October 2020.
Read more ➡️ https://t.co/Q51KvtEqiL pic.twitter.com/PhpaoJuccD
— Ministry of Finance (@FinMinIndia) November 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.