ನವದೆಹಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಸುಮಾರು ಎರಡು ತಿಂಗಳ ನಂತರ ದೇಶದ ಸಕ್ರಿಯ ಪ್ರಕರಣ ಮೊದಲ ಬಾರಿಗೆ ಏಳು ಲಕ್ಷಕ್ಕಿಂತ ಕಡಿಮೆಯಾಗಿದೆ. ಇಂದು ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳು 6 ಲಕ್ಷ 95 ಸಾವಿರ 509 ಆಗಿದ್ದು, ಇದು ಒಟ್ಟು ವರದಿಯಾದ ಪ್ರಕರಣಗಳಲ್ಲಿ ಕೇವಲ 8.96% ರಷ್ಟು ಆಗಿದೆ.
ಸ್ಥಿರವಾದ ಕುಸಿತ ಮತ್ತು ಕಡಿಮೆ ಮರಣ ಪ್ರಮಾಣದೊಂದಿಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳು ಚೇತರಿಸಿಕೊಳ್ಳುತ್ತಿರುವುದರಿಂದ ಸಾಂಕ್ರಾಮಿಕದ ವಿಷಯದಲ್ಲಿ ಹೊಸ ಭರವಸೆ ಮೂಡಿದೆ. ಕಡಿಮೆಯಾಗುತ್ತಿರುವ ಸಕ್ರಿಯ ಪ್ರಕರಣಗಳು ಆಶಾವಾದ ಮೂಡಿಸಿವೆ. ಭಾರತ ಹೆಚ್ಚಿನ ಸಂಖ್ಯೆಯ ಚೇತರಿಕೆಗಳನ್ನು ವರದಿ ಮಾಡುತ್ತಿದೆ.
ಚೇತರಿಸಿಕೊಂಡ ಒಟ್ಟು ಪ್ರಕರಣಗಳು ಸುಮಾರು 70 ಲಕ್ಷಗಳು ಮತ್ತು ಸಕ್ರಿಯ ಪ್ರಕರಣಗಳು ಮತ್ತು ಚೇತರಿಸಿಕೊಂಡ ಪ್ರಕರಣಗಳ ನಡುವಿನ ವ್ಯತ್ಯಾಸವೂ ಸ್ಥಿರವಾಗಿ ಹೆಚ್ಚುತ್ತಿದೆ. ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳಿಗಿಂತ ಸುಮಾರು 10 ಪಟ್ಟು ಹೆಚ್ಚು.
ಕಳೆದ 24 ಗಂಟೆಗಳಲ್ಲಿ ಸುಮಾರು 74 ಸಾವಿರ ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಆದರೆ ಅದೇ ಸಮಯದಲ್ಲಿ ವರದಿಯಾದ ಹೊಸ ದೃಢಪಡಿಸಿದ ಪ್ರಕರಣಗಳು ಸುಮಾರು 54 ಸಾವಿರಗಳಾಗಿವೆ. ರಾಷ್ಟ್ರೀಯ ಚೇತರಿಕೆ ಪ್ರಮಾಣವು 89.53%ಗೆ ತಲುಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.