ಸಾಧನೆಗೆ ವಯಸ್ಸಿನ ಮಿತಿ ಎಂಬುದು ಇರುವುದಿಲ್ಲ. ಈ ಮಾತಿಗೆ ಉದಾಹರಣೆ 9 ವರ್ಷದ ವಿದ್ಯುನ್ ಆರ್ ಹೆಬ್ಬಾರ್. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್ಲೈಫ್ ಫೋಟೋಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆಯಲ್ಲಿ ಈತ ಅಂತಿಮ ಸುತ್ತಿಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾನೆ.
ಬಾಲಕನ ತಂದೆ ಶೃಂಗೇರಿ ಮೂಲಕ ರವಿಪ್ರಕಾಶ್ ಎಸ್ಎಸ್ ಅವರು ಕೂಡ ಲಂಡನ್ನಿನ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಫ್ ದಿ ಇಯರ್ ಡಾಟ್ ಕಾಂ ನಡೆಸುವ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದವರಾಗಿದ್ದಾರೆ. ಇವರ ಮಗ ಕೂಡ ಈಗ ಅದ್ಭುತ ಛಾಯಾಗ್ರಾಹಕನಾಗಿ ಹೊರಹೊಮ್ಮುತ್ತಿದ್ದಾನೆ.
ಹತ್ತು ವರ್ಷದೊಳಗಿನ ವಿಭಾಗದಲ್ಲಿ 9 ವರ್ಷ ವಯಸ್ಸಿನ ವಿದ್ಯುನ್ ತೆಗೆದ ಫೋಟೋ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದೆ. ಎಳೆವಯಸ್ಸಿನ ವೈಲ್ಡ್ ಲೈಫ್ ಫೋಟೋಗ್ರಫಿಯ ಆಸ್ಕರ್ ಎಂದೇ ಕರೆಯಲಾಗುವ ಈ ಸ್ಪರ್ಧೆಯಲ್ಲಿ ಕೊನೆಗೆ ಸುತ್ತಿಗೆ ಆಯ್ಕೆಯಾಗಿರುವುದು ಒಂದು ಇತಿಹಾಸವೇ ಆಗಿದೆ. ಈ ಸ್ಪರ್ಧೆಯಲ್ಲಿ ಅಂತಿಮವಾಗಿ ಸ್ಪೇನಿನ ಬಾಲಕ ಪ್ರಶಸ್ತಿ ಗೆದ್ದುಕೊಂಡಿದ್ದಾನೆ. ಅಕ್ಟೋಬರ್ 14ರಂದು ವರ್ಚುವಲ್ ಸಮಾರಂಭ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗಿ. ಪ್ರತಿವರ್ ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಈ ಬಾರಿ ಕೊರೋನಾ ಕಾರಣ ವರ್ಚುವಲ್ ರೂಪದಲ್ಲಿ ಕಾರ್ಯಕ್ರಮ ನಡೆದಿದೆ.
ವಿದ್ಯುತ್ ಬೆಂಗಳೂರಿನ ಹುಳಿಮಾವಿನ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ತೆಗೆದ ಬಲೆ ಹೆಣೆಯುವ ಜೇಡರ ಛಾಯಾಚಿತ್ರ ತೀರ್ಪುಗಾರರ ಮನಗೆದ್ದಿದೆ.
ಅಪ್ಪನ ಬಳಿ ಇದ್ದ ಡಿಎಸ್ಎಲ್ ಆರ್ ಕ್ಯಾಮೆರಾ ವಿದ್ಯುನ್ಗೆ ಎಳವೆಯಿಂದಲೇ ಚಿರಪರಿಚಿತ. ಹೀಗಾಗಿ ಸಹಜ ಎಂಬಂತೆಯೇ ಚಿಕ್ಕಂದಿನಿಂದಲೇ ಫೋಟೋಗ್ರಾಫಿ ಬಗ್ಗೆ ಸಹಜ ಆಸಕ್ತಿ ಆತನಿಗೆ ಬೆಳೆದಿದೆ. ದೊಡ್ಡವನಾದ ಬಳಿಕ ಅಪ್ಪನಂತೆ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಥವಾ ಗಗನಯಾತ್ರಿಯಾಬೇಕು ಎಂಬುದು ವಿದ್ಯುನ್ ಕನಸು. ಇವರದ್ದು ಪರಿಸರ ಪ್ರೇಮಿ ಕುಟುಂಬವಾದ ಹಿನ್ನೆಲೆಯಲ್ಲಿ ಈತನಿಗೆ ಪ್ರಕೃತಿಯ ಸೊಬಗನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುವ ಹವ್ಯಾಸ ಮೊದಲಿನಿಂದಲೂ ಬೆಳೆದು ಬಂದಿದೆ.
ಕೇವಲ 9 ವರ್ಷ ವಯಸ್ಸಿನಲ್ಲಿ ಛಾಯಾಗ್ರಹಣದ ಮಾಹಿತಿಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭದ ಕಾರ್ಯವಲ್ಲ, ಇದನ್ನು ವಿದ್ಯುನ್ ಸಾಧಿಸಿ ತೋರಿಸಿದ್ದಾನೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.