ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿ ಶೀಘ್ರದಲ್ಲೇ ದೇಶೀಯ ವಾಹಕದ ಅಂತಾರಾಷ್ಟ್ರೀಯ ವಾಯು ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ದೇಗುಲ ನಗರಿ ವಾರಣಾಸಿಯಿಂದ ಹಾರಿಸಲು ಏರ್ ಇಂಡಿಯಾ ನಿರ್ಧರಿಸಿದೆ.
ಆಗಸ್ಟ್ 17ರಂದು ನಾಗರಿಕ ವಿಮಾನ ಯಾನ ಸಚಿವ ಮಹೇಶ್ ಶರ್ಮಾ ಉಪಸ್ಥಿತಿಯಲ್ಲಿ ವಾರಣಾಸಿಯಿಂದ ಶಾರ್ಜಾಗೆ ಮೊದಲು ಏರ್ ಇಂಡಿಯಾ ವಿಮಾನವನ್ನು ಹಾರಿಸಲಾಗುತ್ತದೆ. ಬಳಿಕ ಇನ್ನಷ್ಟು ಕಡೆಗಳಿಗೆ ಇಲ್ಲಿಂದ ವಿಮಾನಗಳನ್ನು ಹಾರಿಸುವ ಯೋಜನೆಯಿದ್ದು, ಆ ಬಗೆಗಿನ ಪ್ರಕ್ರಿಯೆಗಳು ನಡೆಯುತ್ತಿವೆ.
ಇತ್ತೀಚಿಗಷ್ಟೇ ಸರ್ಕಾರ ಈಶಾನ್ಯ, ಲಡಾಖ್, ಅಂಡಮಾನ್, ನಿಕೋಬಾರ್ಗಳಿಂದ ಅಮೆರಿಕ, ಯುರೋಪ್, ನೈರುತ್ಯ ಏಷ್ಯಾ ಸೇರಿದಂತೆ 50 ಗಲ್ಫ್ ದೇಶಗಳಿಗೆ ವಿಮಾನ ಹಾರಾಟ ಆರಂಭಿಸಿದೆ. ಇದೀಗ ವಾರಣಾಸಿ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕವನ್ನು ಸಾಧಿಸುವ ಹಾದಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.