ನವದೆಹಲಿ: 14 ಹೆಲಿಕಾಫ್ಟರ್ಗಳೂ ಸೇರಿದಂತೆ 2012ರಿಂದ ದೇಶದ ರಕ್ಷಣಾ ವಲಯದ ಒಟ್ಟು 39 ರಕ್ಷಣಾ ಏರ್ಕ್ರಾಫ್ಟ್ಗಳು ಪತನಗೊಂಡಿದೆ. ಇದರಲ್ಲಿ ಒಟ್ಟು 36 ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಏರ್ಕ್ರಾಫ್ಟ್ಗಳ ಪತನದಿಂದ 36 ರಕ್ಷಣಾ ಸಿಬ್ಬಂದಿಗಳು ಮೃತರಾಗಿದ್ದಾರೆ. ಆದರೆ ಯಾವುದೇ ನಾಗರಿಕರು ಮೃತರಾಗಿಲ್ಲ. ಆದರೆ ಸುಮಾರು 4,43,800 ರೂಪಾಯಿ ನಾಗರಿಕ ಆಸ್ತಿಗಳಿಗೆ ನಷ್ಟವುಂಟಾಗಿದೆ.
ಆದರೆ ಕಳೆದ ನಾಲ್ಕು ದಶಕಗಳಲ್ಲಿ ಏರ್ಕ್ರಾಫ್ಟ್ ಪತನಗಳ ಸಂಖ್ಯೆ ಕಡಿಮೆಯಾಗಿದೆ. 1970ರಲ್ಲಿ ಒಟ್ಟು 29 ಪತನಗಳಾಗಿದ್ದವು, 2001-10ರವರೆಗೆ ವರ್ಷಕ್ಕೆ 17 ಪತನಗಳು ಸಂಭವಿಸಿವೆ. ಕಳೆದ ಮೂರು ವರ್ಷದಲ್ಲಿ 39 ಪತನಗಳಾಗಿವೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
ಪ್ರತಿ ಏರ್ಕ್ರಾಫ್ಟ್ ಪತನದ ಬಗ್ಗೆ ಕೋರ್ಟ್ ಆಫ್ ಎನ್ಕ್ವ್ಯಾರಿಯಲ್ಲಿ ಸೂಕ್ತ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.