ನವದೆಹಲಿ: ಭಾರತದ ದೈನಂದಿನ ಪಿಪಿಇ ಕಿಟ್ಗಳ ಉತ್ಪಾದನೆಯ ಸಾಮರ್ಥ್ಯ ದಿನಕ್ಕೆ ಐದು ಲಕ್ಷ ಯೂನಿಟ್ಗಳಿಗೆ ಏರಿಕೆಯಾಗಿದೆ, ಒಟ್ಟು ಪಿಪಿಟಿ ಕಿಟ್ ತಯಾರಕರ ಸಂಖ್ಯೆ 110 ಕ್ಕೆ ಏರಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ಸಕಾರಾತ್ಮಕ ಬೆಳವಣಿಗೆಯನ್ನು ಹಂಚಿಕೊಂಡ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು, “ಸಾಕಷ್ಟು ಸಂಖ್ಯೆಯ ಪಿಪಿಇಗಳು ನಮಗೆ ಸಿಗುತ್ತಿಲ್ಲ ಎಂದು ದೂರು ನೀಡುತ್ತಿದ್ದ ರಾಜ್ಯಗಳು, ಈಗ ಪಿಪಿಇಗಳನ್ನು ಕಳುಹಿಸುವ ಬಗ್ಗೆ ಮಾತನಾಡುತ್ತಿವೆ. ಅವುಗಳನ್ನು ಇಡಲು ಸ್ಥಳವಿಲ್ಲದ ಸನ್ನಿವೇಶ ನಿರ್ಮಾಣವಾಗಿದೆ” ಎಂದಿದ್ದಾರೆ.
ರಾಷ್ಟ್ರವು ಈವರೆಗೆ ಸುಮಾರು ಏಳು ಕೋಟಿ ಕೋವಿಡ್-19 ಪರೀಕ್ಷೆಗಳನ್ನು ನಡೆಸಿದೆ ಮತ್ತು ಚೇತರಿಕೆಯ ಪ್ರಮಾಣವು ಸುಧಾರಣೆಯಾಗುತ್ತಿದೆ ಎಂದ ಅವರು, ರಾಷ್ಟ್ರೀಯ ಚೇತರಿಕೆ ದರವು ಈಗ ಶೇಕಡಾ 82 ಕ್ಕೆ ಏರಿದೆ, ಆದರೆ ಸಾವಿನ ಪ್ರಮಾಣವು ಶೇಕಡಾ 1.6 ಕ್ಕೆ ಇಳಿದಿದೆ ಎಂದು ಒತ್ತಿ ಹೇಳಿದರು.
“ಇಂದು ನಮ್ಮಲ್ಲಿ 1823 ಲ್ಯಾಬ್ಗಳಿವೆ. ನಾವು ಇದುವರೆಗೆ 7 ಕೋಟಿ ಪರೀಕ್ಷೆಗಳನ್ನು ನಡೆಸಿದ್ದೇವೆ ಮತ್ತು ಕಳೆದ ಕೆಲವು ದಿನಗಳಿಂದ ದಿನಕ್ಕೆ 13-15 ಲಕ್ಷ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಭಾರತದಲ್ಲಿ ಲಸಿಕೆಗಳು ಪ್ರಯೋಗದ ಆರಂಭಿಕ ಹಂತಗಳಲ್ಲಿವೆ” ಎಂದಿದ್ದಾರೆ.
ಡಾ.ಹರ್ಷವರ್ಧನ್ ಅವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್) 79 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡುತ್ತಾ ಈ ಬೆಳವಣಿಗೆಗಳನ್ನು ಹಂಚಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.