ಸಂಸತ್ತು ಮೂರು ಕಾರ್ಮಿಕ ಮಸೂದೆಗಳನ್ನು ಅಂಗೀಕರಿಸಿದೆ. ಕಾರ್ಮಿಕರ ಹಿತಾಸಕ್ತಿಯ ದೃಷ್ಟಿಯಿಂದ ಈ ಮಸೂದೆಗಳು ಅತ್ಯಂತ ಮಹತ್ವದ್ದಾಗಿದ್ದು, ಗೇಮ್ ಚೇಂಜರ್ ಆಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಮಸೂದೆ ದೇಶದಲ್ಲಿ 50 ಕೋಟಿಗೂ ಹೆಚ್ಚು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಲಿದೆ ಮತ್ತು ಕಾರ್ಮಿಕ ಸುಧಾರಣೆಗಳಲ್ಲಿ ಮಹತ್ವದ ಬದಲಾವಣೆ ತರಲಿವೆ. ಇದು ಸ್ವ- ಉದ್ಯೋಗ ಕ್ಷೇತ್ರದಲ್ಲಿರುವವರಿಗೂ ಸಹ ಸಾಮಾಜಿಕ ಭದ್ರತೆಯ ಬಾಗಿಲುಗಳನ್ನು ತೆರೆಯುತ್ತದೆ ಎಂದು ಅಭಿಪ್ರಾಯಿಸಲಾಗಿದೆ.
1.ಕೈಗಾರಿಕಾ ಸಂಬಂಧಗಳ ಸಂಹಿತೆ, 2020 2. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಪರಿಸ್ಥಿತಿಗಳ ಸಂಹಿತೆ, 2020 ಮತ್ತು 3. ಸಾಮಾಜಿಕ ಭದ್ರತಾ ಸಂಹಿತೆ, 2020. ಈ ಮಸೂದೆಗಳು ಕಳೆದ 73 ವರ್ಷಗಳಿಂದ ಮಾಡಲಾಗದ ಹಾಗೂ ದೇಶದಲ್ಲಿ ಹೆಚ್ಚು ಅಗತ್ಯವಿದ್ದ ಕಾರ್ಮಿಕ ಕಲ್ಯಾಣ ಸುಧಾರಣೆಗಳನ್ನು ತರುವಲ್ಲಿ ಸರ್ಕಾರದ ಬದ್ಧತೆಯನ್ನು ಪುನರುಚ್ಛರಿಸಿದೆ. ಕಳೆದ 6 ವರ್ಷಗಳಲ್ಲಿ, ಎಲ್ಲಾ ಪಾಲುದಾರರೊಂದಿಗೆ ಅಂದರೆ ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರು, ರಾಜ್ಯ ಸರ್ಕಾರಗಳು ಮತ್ತು ಕಾರ್ಮಿಕ ವಲಯದ ತಜ್ಞರೊಂದಿಗೆ ಹಲವು ಸಮಾಲೋಚನೆಗಳನ್ನು ನಡೆಸಿಯೇ ಮಸೂದೆ ತರಲಾಗಿದೆ ಎಂದು ಸರ್ಕಾರ ಹೇಳಿದೆ.
ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವದ ಸರ್ಕಾರವು 2014 ರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳನ್ನು ಈಡೇರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ‘ಶ್ರಮೇವ ಜಯತೆ’ ಮತ್ತು ‘ಸತ್ಯಮೇವ ಜಯತೆ’ಗಳಿಗೆ ಸಮಾನ ಪ್ರಾಮುಖ್ಯತೆ ನೀಡಿದೆ. ಸದ್ಯದ ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭ ಸೇರಿದಂತೆ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಇತರ ಕಲ್ಯಾಣ ಕ್ರಮಗಳನ್ನು ಒದಗಿಸಲು ದಣಿವರಿಯದೆ ಕಾರ್ಯನಿರ್ವಹಿಸುತ್ತಿದೆ. ಮೋದಿಯವರ ನೇತೃತ್ವದಲ್ಲಿ ಆಡಳಿತವು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ. ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿದ್ದು, ಪ್ರಧಾನ ಮಂತ್ರಿ ಪ್ರೊತ್ಸಾಹನ್ ರೊಜ್ಗಾಜ್ಗಾರ್ ಯೋಜನೆಯಡಿ ಮಹಿಳೆಯರಿಗೆ ಗಣಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಿರುವುದು ಮುಂತಾದ ಅನೇಕ ಕಲ್ಯಾಣ ಕ್ರಮಗಳು ಇದಕ್ಕೆ ಸಾಕ್ಷಿ.
ಮಸೂದೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ಅವರು, ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಸೂದೆಗಳು ದೇಶದ ಸಮಗ್ರ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ ಎಂದು ಹೇಳಿದರು. ತಮಗಾಗಿ ಇರುವ ಅನೇಕ ಕಾನೂನುಗಳಿಂದಾಗಿ ಕಾರ್ಮಿಕರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ, ಇದು ಕಾರ್ಯವಿಧಾನದ ಸಂಕೀರ್ಣತೆಗಳನ್ನು ಒಳಗೊಂಡಿದೆ ಮತ್ತು ವಿವಿಧ ಕಲ್ಯಾಣ ಮತ್ತು ಸುರಕ್ಷತಾ ನಿಬಂಧನೆಗಳ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು. 29 ಕಾರ್ಮಿಕ ಕಾನೂನುಗಳನ್ನು ಸರಳ, ಪಾರದರ್ಶಕವಾದ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ, ವೇತನ ಸಂಹಿತೆಯನ್ನು ಈಗಾಗಲೇ ಸಂಸತ್ತು ಅಂಗೀಕರಿಸಿದೆ ಮತ್ತು ಇದು ಈಗಾಗಲೇ ಕಾನೂನಾಗಿದೆ. ಎಲ್ಲಾ ಕಾರ್ಮಿಕ ಕಾನೂನುಗಳನ್ನು (29) ನಾಲ್ಕು ಕಾರ್ಮಿಕ ಸಂಹಿತೆ ಗಳಾಗಿ ಒಂದುಗೂಡಿಸಲಾಗಿದೆ ಎಂದಿದ್ದಾರೆ.
ಕಾರ್ಮಿಕ ಸಂಹಿತೆಗಳ ಪ್ರಯೋಜನಗಳನ್ನು ಸಚಿವರು ಕೆಳಗಿನಂತೆ ವಿವರಿಸಿದರು:
*ವಲಸೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯವಾಣಿಯ ಕಡ್ಡಾಯ ಸೌಲಭ್ಯ.
*ವಲಸೆ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸಂಗ್ರಹ.
*240 ದಿನಗಳ ಬದಲು 180 ದಿನಗಳವರೆಗೆ ಕೆಲಸ ಮಾಡಿದ ನಂತರ ಕೆಲಸ ಮಾಡಿದ ಪ್ರತಿ 20 ದಿನಗಳಿಗೊಮ್ಮೆ ಒಂದು ದಿನದ ರಜೆ ಸಂಗ್ರಹಿಸಲು ಅವಕಾಶವಿದೆ.
*ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನತೆ: ಮಹಿಳೆಯರಿಗೆ ಪ್ರತಿಯೊಂದು ವಲಯದಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ ನೀಡಬೇಕಾಗಿರುತ್ತದೆ, ಆದರೆ ಉದ್ಯೋಗದಾತರು ಅವರ ಭದ್ರತೆಯ ವ್ಯವಸ್ಥೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮೊದಲು ಮಹಿಳೆಯರ ಒಪ್ಪಿಗೆಯನ್ನು ಪಡೆಯಬೇಕು.
*ಕೆಲಸದ ಸ್ಥಳದಲ್ಲಿ ಅಪಘಾತದಿಂದಾಗಿ ಕೆಲಸಗಾರನ ಸಾವು ಸಂಭವಿಸಿದಾಗ ಅಥವಾ ಕಾರ್ಮಿಕ ಗಾಯಗೊಂಡರೆ, ದಂಡದ ಕನಿಷ್ಠ ಶೇ.50 ಪಾಲನ್ನು ನೀಡಲಾಗುತ್ತದೆ. ಈ ಮೊತ್ತವು ನೌಕರರ ಪರಿಹಾರದ ಜೊತೆಗೆ ಇರುತ್ತದೆ.
*“ಸಾಮಾಜಿಕ ಭದ್ರತಾ ನಿಧಿ”ಯು ಜಿಐಜಿ ಮತ್ತು ಪ್ಲಾಟ್ಫಾರ್ಮ್ ಕೆಲಸಗಾರರೊಂದಿಗೆ 40 ಕೋಟಿ ಅಸಂಘಟಿತ ಕಾರ್ಮಿಕರನ್ನು ಸಾರ್ವತ್ರಿಕ ಸಾಮಾಜಿಕ ಭದ್ರತೆ ವ್ಯಾಪ್ತಿಗೆ ತರಲು ಸಹಾಯ ಮಾಡುತ್ತದೆ
*ಪುರುಷ ಕಾರ್ಮಿಕರಿಗೆ ಸಮಾನವಾಗಿ ಮಹಿಳಾ ಕಾರ್ಮಿಕರಿಗೆ ವೇತನ.
*ವೃತ್ತಿಪರ ಸುರಕ್ಷತೆ ಮತ್ತು ಆರೋಗ್ಯ ಸಂಹಿತೆಯು ಈಗ ಐಟಿ ಮತ್ತು ಸೇವಾ ವಲಯದ ಕಾರ್ಮಿಕರನ್ನು ಒಳಗೊಳ್ಳಬಹುದು.
*ಮುಷ್ಕರಕ್ಕೆ 14 ದಿನಗಳ ಸೂಚನೆ ನೀಡಬೇಕು. ಇದರಿಂದ ಈ ಅವಧಿಯಲ್ಲಿ ಸೌಹಾರ್ದಯುತ ಪರಿಹಾರವು ಹೊರಬರಬಹುದು.
“ವಿಳಂಬ ನ್ಯಾಯ, ನ್ಯಾಯವನ್ನು ನಿರಾಕರಿಸಿದಂತೆ” ಎಂಬುದನ್ನು ತಪ್ಪಿಸಲು ಕಾರ್ಮಿಕ ನ್ಯಾಯಮಂಡಳಿಗಳು ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಉತ್ತಮ ಕಾರ್ಯವಿಧಾನದ ಪ್ರಸ್ತಾವನೆ.
ಹಲವಾರು ವರ್ಷಗಳಿಂದ ಬದಲಾಗುತ್ತಿರುವ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕ ಕಾನೂನುಗಳ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ರೂಪಿಸಲಾಗಿದೆ. ಇದರಿಂದಾಗಿ ದೇಶವು ಬೆಳವಣಿಗೆಯ ಪಥದಲ್ಲಿ ವೇಗವಾಗಿ ಸಾಗುತ್ತದೆ ಎಂದು ಗಂಗ್ವಾರ್ ಒತ್ತಿ ಹೇಳಿದ್ದಾರೆ. ಇವುಗಳೊಂದಿಗೆ ದೇಶದಲ್ಲಿ ಶಾಂತಿಯುತ ಮತ್ತು ಸಾಮರಸ್ಯದ ಕೈಗಾರಿಕಾ ಸಂಬಂಧಗಳನ್ನು ಉತ್ತೇಜಿಸಲಾಗುವುದು. ಇದು ಉದ್ಯಮ, ಉದ್ಯೋಗ, ಆದಾಯ, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ. ದೇಶದ ಈ ಮಹತ್ವದ ಸುಧಾರಣೆಗಳು ವಿದೇಶಿ ನೇರ ಹೂಡಿಕೆ ಮತ್ತು ಉದ್ಯಮಿಗಳಿಂದ ದೇಶೀಯ ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡುತ್ತವೆ. ದೇಶದಲ್ಲಿ ‘ಇನ್ಸ್ಪೆಕ್ಟರ್ ರಾಜ್’ಅನ್ನು ಕೊನೆಗೊಂಡು ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರುತ್ತದೆ. ಭಾರತವು ವಿಶ್ವದ ನೆಚ್ಚಿನ ಹೂಡಿಕೆಯ ತಾಣವಾಗಲಿದೆ” ಎಂದೂ ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.