ಶಹಜಹಾನ್ಪುರ: ಶಹಜಹಾನ್ಪುರ ಜಿಲ್ಲೆಯ ಗಂಗಾ ಎಕ್ಸ್ಪ್ರೆಸ್ವೇಯಲ್ಲಿರುವ ದೇಶದ ಮೊದಲ ಎಕ್ಸ್ಪ್ರೆಸ್ವೇ ಏರ್ಸ್ಟ್ರಿಪ್ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಫೈಟರ್ ಜೆಟ್ಗಳನ್ನು ಒಳಗೊಂಡು ರಾತ್ರಿಯ ಯುದ್ಧ ಕವಾಯತುಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಸಂಜೆ 7 ರಿಂದ ರಾತ್ರಿ 10 ಗಂಟೆಯ ನಡುವೆ ನಡೆದ ಈ ಕವಾಯತುದಲ್ಲಿ, ರಫೇಲ್, ಸುಖೋಯ್, ಜಾಗ್ವಾರ್ ಮತ್ತು ಮಿರಾಜ್-2000 ಫೈಟರ್ ಜೆಟ್ಗಳು ಜಲಾಲಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿರು ಗ್ರಾಮದ ಬಳಿಯ 3.5 ಕಿಲೋಮೀಟರ್ ವಾಯುನೆಲೆಯಲ್ಲಿ ಟಚ್-ಅಂಡ್-ಗೋ ಲ್ಯಾಂಡಿಂಗ್ ಮತ್ತು ಯುದ್ಧ ಕಾರ್ಯಾಚರಣೆಗಳನ್ನು ನಡೆಸಿವೆ.
ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಈ ಬಗ್ಗೆ ಮಾಹಿತಿ ನೀಡಿದ್ದು, “ರಾತ್ರಿಯ ಕಾರ್ಯಾಚರಣೆಯ ವ್ಯಾಯಾಮದ ಭಾಗವಾಗಿ ಬಹು ಯುದ್ಧ ವಿಮಾನಗಳು ಯಶಸ್ವಿ ಹಾರಾಟ ನಡೆಸಿದವು. ಈ ಕವಾಯತು ನಿಖರವಾದ ಲ್ಯಾಂಡಿಂಗ್ಗಳು, ಸಂಘಟಿತ ಟೇಕ್-ಆಫ್ಗಳು ಮತ್ತು ರಫೇಲ್, ಸುಖೋಯ್, ಜಾಗ್ವಾರ್, ಮಿರಾಜ್-2000 ಮತ್ತು ಎಂ-32 ನಂತಹ ಜೆಟ್ಗಳ ಯುದ್ಧತಂತ್ರದ ಕಾರ್ಯಾಚರಣೆಗಳನ್ನು ಒಳಗೊಂಡಿತ್ತು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.