ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ‘ಪೋಷಣ್ ಮಾಸಿಕ’ವನ್ನು ಉತ್ತೇಜಿಸುವ ಸಲುವಾಗಿ ಸಾಮಾಜಿಕ ಜಾಲತಾಣ ಅಭಿಯಾನವನ್ನು ಆರಂಭಿಸಿದ್ದಾರೆ. ಸಮೃದ್ಧ ರಾಷ್ಟ್ರವನ್ನು ನಿರ್ಮಾಣ ಮಾಡಲು ಸಮರ್ಪಕ ಪೌಷ್ಟಿಕತೆಯ ಮಹತ್ವವನ್ನು ಒತ್ತಿ ಹೇಳಿದ ಮೋದಿ, ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣಕ್ಕಾಗಿ ಕೈಜೋಡಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ, “ಸಮೃದ್ಧ ರಾಷ್ಟ್ರದ ನಿರ್ಮಾಣಕ್ಕಾಗಿ ಸಮರ್ಪಕವಾದ ಪೌಷ್ಟಿಕತೆ ಅತ್ಯಂತ ಅವಶ್ಯಕ. ಪೋಷಣ್ ಮಾಸಿಕ 2020 ಇಂದಿನಿಂದ ಆರಂಭವಾಗುತ್ತದೆ. ದೇಶದ ಮೂಲೆ ಮೂಲೆಯ ಜನರನ್ನು ತಲುಪುವ ಮತ್ತು ಅಪೌಷ್ಟಿಕತೆಯ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸೋಣ. ಇದರಿಂದ ನಮ್ಮ ನಾರಿ ಶಕ್ತಿ ಮತ್ತು ಯುವಶಕ್ತಿಗೆ ಸಹಾಯವಾಗಲಿದೆ” ಎಂದಿದ್ದಾರೆ.
ಪೋಷಣ್ ಮಾಸಿಕವನ್ನು ಆರಂಭ ಮಾಡಿದ ಪ್ರಧಾನಿ, ಮೈ ಗವರ್ಮೆಂಟ್ ವೆಬ್ಸೈಟ್ನಲ್ಲಿ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಹಂಚುವಂತೆ ಜನರಿಗೆ ಮನವಿ ಮಾಡಿದ್ದಾರೆ.
“ಪೋಷಣೆಗಾಗಿ ಸ್ಥಳೀಯವಾಗೋಣ. ನಮ್ಮ ದೇಶವು ಹಲವು ಬಗೆಯ ಆರೋಗ್ಯದ ಖಾದ್ಯಗಳಿಗೆ ತವರಾಗಿದೆ, ಅದು ಪೌಷ್ಟಿಕ ಸಮೃದ್ಧ ಗುಣಗಳನ್ನು ಹೊಂದಿದೆ. ಇವುಗಳ ಬಗ್ಗೆ ವಿಶೇಷವಾಗಿ ಮೈ ಗವರ್ಮೆಂಟ್ ಇಂಡಿಯಾ ವೆಬ್ಸೈಟ್ನಲ್ಲಿ ಹಂಚಿಕೊಳ್ಳಿ. ನಿಮ್ಮ ಕುಟುಂಬ ಕೂಡ ಪೌಷ್ಟಿಕಾಂಶಯುಕ್ತ ಮತ್ತು ಆರೋಗ್ಯ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲಿ” ಎಂದಿದ್ದಾರೆ.
ಶಾ ಅವರು ಕೂಡ ಸರಣಿ ಟ್ವೀಟ್ಗಳನ್ನು ಮಾಡಿ, ಮಕ್ಕಳಲ್ಲಿ ಸಮಗ್ರ ಪೌಷ್ಟಿಕಾಂಶವನ್ನು ಉತ್ತೇಜಿಸಲು ದೇಶದಾದ್ಯಂತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
Let’s be #Local4Poshan!
Our nation is home to dozens of healthy dishes, which have high nutrition value. Share them on a specially created space on @mygovindia. May your family recipe contribute to a nutritious as well as healthy India. #POSHANMaah2020 https://t.co/svVCymanwo
— Narendra Modi (@narendramodi) September 7, 2020
Proper nutrition is vital to build a prosperous nation. #POSHANMaah2020 starts today. Let us undertake efforts to reach out to people across the length and breadth of India and spread awareness on eradicating malnutrition. This will help our Nari Shakti and Yuva Shakti. pic.twitter.com/mpPEuaT210
— Narendra Modi (@narendramodi) September 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.