ನವದೆಹಲಿ: ಭಾವಿಸಿದ್ದಕ್ಕಿಂತಲೂ ಶೀಘ್ರದಲ್ಲೇ ಭಾರತ ಅತ್ಯಂತ ಹೆಚ್ಚು ಜನಸಂಖ್ಯಾ ರಾಷ್ಟ್ರವಾಗಿ ಹೊರಹೊಮ್ಮಲಿದೆ, ಈ ಮೂಲಕ ಚೀನಾವನ್ನೂ ಅದು ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದರಿಂದ ತಿಳಿದು ಬಂದಿದೆ.
ಇದುವರೆಗೆ 2028ರಲ್ಲಿ ಭಾರತ ಚೀನಾವನ್ನು ಜನಸಂಖ್ಯೆಯಲ್ಲಿ ಹಿಂದಿಕ್ಕಬಹುದು ಎಂದು ಭಾವಿಸಲಾಗಿತ್ತು, ಆದರೆ 2022ರಲ್ಲೇ ಭಾರತ ಈ ವಿಶ್ವದ ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪ್ರಸ್ತುತ ಚೀನಾದ ಜನಸಂಖ್ಯೆ 1.38 ಬಿಲಿಯನ್, ಭಾರತದ್ದು 1.31 ಬಿಲಿಯನ್. ಆದರೆ ಇನ್ನು ಏಳು ವರ್ಷಗಳಲ್ಲಿ ಎರಡು ದೇಶಗಳ ಜನಸಂಖ್ಯೆ 1.4ಬಿಲಿಯನ್ ಗೆರೆ ಮುಟ್ಟಲಿದೆ. ಭಾರತದ ಜನಸಂಖ್ಯೆ 2030ರ ವೇಳೆಗೆ 1.5 ಬಿಲಿಯನ್ ಏರಿಕೆಯಾಗಲಿದೆ, 2050ರ ವೇಳೆಗೆ 1.7 ಬಿಲಿಯನ್ ಏರಿಕೆಯಾಗಲಿದೆ. ಆದರೆ ಚೀನಾದ ಜನಸಂಖ್ಯೆ 2030ರವರೆಗೆ ಸ್ಥಿರವಾಗಿ ನಿಲ್ಲಲಿದೆ. ಬಳಿಕ ನಿಧಾನವಾಗಿ ಇಳಿಯುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ವಿಶ್ವದ ಜನಸಂಖ್ಯೆ ಪ್ರಸ್ತುತ 7.3 ಬಿಲಿಯನ್ ಇದ್ದು, 2050ಕ್ಕೆ 9.7 ಬಿಲಿಯನ್ ಆಗಲಿದೆ, ಈ ಶತಮಾನದ ಅಂತ್ಯದಲ್ಲಿ 11.2 ಬಿಲಿಯನ್ ಆಗುವ ಸಾಧ್ಯತೆ ಇದೆ. ಇದರಲ್ಲಿ ಅರ್ಧದಷ್ಟು ಏರಿಕೆ ಭಾರತ, ನೈಜೀರಿಯಾ, ಪಾಕಿಸ್ಥಾನ, ಕೊಂಗೋ, ಇತಿಯೋಪಿಯಾ, ತಂಝನಿಯ, ಅಮೆರಿಕ, ಇಂಡೋನೇಷ್ಯಾ, ಉಗಾಂಡಗಳಲ್ಲಿ ಆಗಲಿದೆ.
ಜಗತ್ತಿನ 48 ದೇಶಗಳಲ್ಲಿ ಜನಸಂಖ್ಯೆ ಇಳಿಮುಖವಾಗಲಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಜನನ ಫಲವಂತಿಕೆ ಕಳೆದ ದಶಕಗಳಿಂದ ಇಳಿಮುಖವಾಗುತ್ತಿರುವುದು ಇದಕ್ಕೆ ಕಾರಣ. ಮಾನವನ ಜೀವಿತ ಅವಧಿಯೂ ಮುಂಬರುವ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.