ಇಟಾನಗರ್: ಅರುಣಾಚಲ ಪ್ರದೇಶದಲ್ಲಿನ ಬಹುತೇಕ ಮಾದಕ ವ್ಯಸನಿ ಮಹಿಳೆಯರು ತಮ್ಮ ಪತಿಯರಿಂದಲೇ ಮಾದಕ ದ್ರವ್ಯ ಸೇವನೆಯ ಚಟ ಹತ್ತಿಸಿಕೊಂಡಿದ್ದಾರೆ ಎಂದು ನೂತನ ಅಧ್ಯಯನದಿಂದ ತಿಳಿದು ಬಂದಿದೆ.
ಈ ಈಶಾನ್ಯ ಭಾಗದ ಶೇ.2.1ರಷ್ಟು ಮಹಿಳೆಯರು ಅಫೀಮ್ ಸೇವಕರಾಗಿದ್ದಾರೆ, ಇವರಲ್ಲಿ ಬಹುತೇಕರು ಮದುವೆಯ ಬಳಿಕ ತಮ್ಮ ಪತಿಯರಿಂದಲೇ ಓಪಿಮ್ ಸೇವನೆಯನ್ನು ಕಲಿತುಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ. ಸಮೀಕ್ಷೆಗೊಳಪಟ್ಟ 100ಮಹಿಳೆಯರಲ್ಲಿ ಶೇ.6.4ರಷ್ಟು ಮಂದಿ ಕನಿಷ್ಠ ಒಂದು ಬಾರಿಯಾದರೂ ಅಫೀಮ್ ಸೇವಿಸಿದ್ದಾರೆ.
ಮಣಿಪುರದಲ್ಲಿ ಶೇ.28.2, ಮಿಜೋರಾಂನಲ್ಲಿ ಶೇ.17.4ರಷ್ಟು, ನಾಗಾಲ್ಯಾಂಡ್ನಲ್ಲಿ ಶೇ.14.9ರಷ್ಟು, ಮೇಘಾಲಯದಲ್ಲಿ ಶೇ.12.1ರಷ್ಟು, ಅಸ್ಸಾಂನಲ್ಲಿ ಶೇ.10.2ರಷ್ಟು, ಸಿಕ್ಕಿಂನಲ್ಲಿ ಶೇ.9.8ರಷ್ಟು ಮಂದಿ ಮಾದಕ ವ್ಯಸನಿಗಳಾಗಿದ್ದಾರೆ.
ಈಶಾನ್ಯ ಭಾಗದ 8 ರಾಜ್ಯಗಳ ಮಾದಕ ವ್ಯಸನಿ ಮಹಿಳೆಯರ ಬಗ್ಗೆ ಕೈಗೊಂಡ ಮೊತ್ತ ಮೊದಲ ಸಮಗ್ರ ಸಮೀಕ್ಷೆ ಇದಾಗಿದೆ. ’ವುಮನ್ಸ್ ಹು ಯುಸ್ ಡ್ರಗ್ಸ್ ಇನ್ ನಾರ್ಥ್ ಈಸ್ಟ್ ಇಂಡಿಯಾ’ ಎಂಬ ಹೆಸರಿನಲ್ಲಿ ಈ ಅಧ್ಯಯನ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.