ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತ 62,064 ಹೊಸ ಕೊರೋನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಚೇತರಿಕೆ ಪ್ರಕರಣಗಳು 15 ಲಕ್ಷ ದಾಟಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ದೇಶದಲ್ಲಿ ಒಂದೇ ದಿನ 1,007 ಹೊಸ ಸಾವುಗಳು ವರದಿಯಾಗಿವೆ ಮತ್ತು ಒಟ್ಟು ಸಾವುಗಳ ಸಂಖ್ಯೆ 44,386 ಕ್ಕೆ ತಲುಪಿದೆ.
6,34,945 ಸಕ್ರಿಯ ಪ್ರಕರಣಗಳು, 15,35,744 ಗುಣಮುಖ / ಬಿಡುಗಡೆ ಪ್ರಕರಣಗಳು ದೇಶದಲ್ಲಿದ್ದು, ಇದು ಒಟ್ಟು ಕೊರೋನಾ ಪ್ರಕರಣಗಳನ್ನು 22,15,075 ಕ್ಕೆ ಏರಿಸಿದೆ.
ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರದಲ್ಲಿ ಸಕ್ರಿಯ ಕೊರೋನಾವೈರಸ್ ಪ್ರಕರಣಗಳು ಈಗ 1,45,865 ಕ್ಕೆ ತಲುಪಿದೆ.
ಆಕ್ರಮಣಕಾರಿಯಾದ ಪರೀಕ್ಷೆ, ಪತ್ತೆ ಹಚ್ಚುವಿಕೆಯ ಪರಿಣಾಮವಾಗಿ ದೇಶದಲ್ಲಿ ಚೇತರಿಕಾ ಪ್ರಕರಣಗಳು 15 ಲಕ್ಷಕ್ಕೆ ತಲುಪಿದೆ ಎಂದು ಸಚಿವಾಲಯ ಅಭಿಪ್ರಾಯಿಸಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ ಆಗಸ್ಟ್ 9ರವರೆಗೆ ದೇಶದಲ್ಲಿ 4,77,023 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗೆ 2.45 ಕೋಟಿಗೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.