ನ್ಯೂಯಾರ್ಕ್: ಕೊರೋನಾ ಸಂಕಷ್ಟ ಜಗತ್ತಿನ ದೊಡ್ಡಣ್ಣನನ್ನೂ ಹೈರಾಣಾಗುವಂತೆ ಮಾಡಿದೆ. ಇಂತಹ ಜಟಿಲ ಸಂದರ್ಭದಲ್ಲಿ ಕೊರೋನಾ ಹಾಟ್ ಸ್ಪಾಟ್ ಎನಿಸಿರುವ ನ್ಯೂಯಾರ್ಕ್ನಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ಭಾರತೀಯ ಮೂಲದ ವೈದ್ಯರೊಬ್ಬರನ್ನು ಆರೋಗ್ಯ ಆಯುಕ್ತರನ್ನಾಗಿ ನೇಮಿಸಿ ಗೌರವ ಸಮರ್ಪಿಸಲಾಗಿದೆ.
ಬಾಲ್ಯದಿಂದಲೇ ಅಮೆರಿಕದಲ್ಲಿ ವಾಸವಿರುವ ಡಾ. ದೇವ್ ಎ. ಚೋಕ್ಸಿ (39) ಅವರನ್ನು ನ್ಯೂಯಾರ್ಕ್ ನಗರದ ನೂತನ ಆರೋಗ್ಯ ಆಯುಕ್ತರನ್ನಾಗಿ ನೇಮಿಸಿ ನಗರದ ಮೇಯರ್ ಬ್ಲಾಸಿಯೋ ಅವರು ಆದೇಶ ಹೊರಡಿಸಿದ್ದಾರೆ.
ಕೊರೋನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ, ಅದನ್ನು ನಿಯಂತ್ರಣ ಮಾಡಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ, ನಿಯಂತ್ರಣೋಪಾಯಗಳೇನು ಮುಂತಾದ ವಿಚಾರಗಳ ಕುರಿತ ನಗರದ ಆರೋಗ್ಯ ವ್ಯವಸ್ಥೆಗೆ ಪೂರಕವಾದ ಅಗತ್ಯ ಮಾರ್ಗದರ್ಶನ ನೀಡಿದ ಸಲುವಾಗಿ, ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ, ಅವರಿಗೆ ಗೌರವ ಸಲ್ಲಿಸಲಾಗಿದೆ.
ಒಬಾಮಾ ಆಡಳಿತಾವಧಿಯಲ್ಲಿ ಡಾ. ಚೋಕ್ಸಿ ಅವರು ಶ್ವೇತ ಭವನದ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.