ವಾಷಿಂಗ್ಟನ್ ಡಿಸಿ: ಭಾರತಕ್ಕೆ ಅವಕಾಶವಿದೆ ಮತ್ತು ಚೀನಾದಿಂದ ಕಿತ್ತು ಅದು ಜಾಗತಿಕ ಪೂರೈಕೆ ಸರಪಳಿಗಳನ್ನು ಆಕರ್ಷಿಸಬಲ್ಲದು . ಈ ಮೂಲಕ ಚೀನಾದ ಕಂಪನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಲ್ಲದು. ಭಾರತ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದಾದ್ಯಂತ ಅನೇಕ ರಾಷ್ಟ್ರಗಳ ವಿಶ್ವಾಸವನ್ನು ಗಳಿಸಿದೆ” ಎಂದು ಅಮೆರಿಕಾ ಕಾರ್ಯದರ್ಶಿ ಮೈಕ್ ಪೊಂಪಿಯೋ ತಿಳಿಸಿದ್ದಾರೆ.
ಯುಎಸ್ ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಆಯೋಜಿಸಿದ್ದ ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಮಾತನಾಡಿದ ಸಂದರ್ಭ ಅವರು ಈ ಮಾತುಗಳನ್ನು ಆಡಿದ್ದಾರೆ.
“ಭಾರತ ಮತ್ತು ಯುಎಸ್ ಉತ್ತಮ ಪ್ರಜಾಪ್ರಭುತ್ವಗಳು ಮತ್ತು ಉತ್ತಮ ಸ್ನೇಹಿತರು ಮತ್ತು ಅಂತಹ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ, ಏಕೆಂದರೆ ಚೀನಾದ ಕಮ್ಯುನಿಸ್ಟ್ ಪಕ್ಷವು ಒಡ್ಡುತ್ತಿರುವ ಸವಾಲುಗಳನ್ನು ಈ ಎರಡೂ ದೇಶಗಳು ಚೆನ್ನಾಗಿ ಅರ್ಥ ಮಾಡಿಕೊಂಡಿವೆ. ಭಾರತವು ಅಮೆರಿಕಾದ ಕೆಲವು ವಿಶ್ವಾಸಾರ್ಹ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದ ಜೊತೆ ನಿಯಮಿತು ಚರ್ಚೆ, ಸಂವಾದದಲ್ಲಿ ನಾವು ತೊಡಗಿದ್ದೇವೆ” ಎಂದಿದ್ದಾರೆ.
ಮೈಕ್ ಪೊಂಪಿಯೊ ಭಾರತವನ್ನು ಪ್ರಮುಖ ಪಾಲುದಾರ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯ ಪ್ರಮುಖ ಆಧಾರಸ್ತಂಭ ಎಂದು ಬಣ್ಣಿಸಿದರು. ಟಿಕ್ಟಾಕ್ ಸೇರಿದಂತೆ 59 ಚೀನೀ ಆ್ಯಪ್ಗಳನ್ನು ನಿಷೇಧಿಸಿದ್ದಕ್ಕಾಗಿ ಭಾರತವನ್ನು ಅವರು ಶ್ಲಾಘಿಸಿದರು.
.@SecPompeo U.S. Secretary of State at the #IndiaIdeasSummit 🇺🇸🇮🇳
"We're the oldest and most prosperous democracies in the world, and It's important that democracies like ours work together. India is a rising U.S. defense and security partner in the Indo-Pacific." @StateDept pic.twitter.com/ekyrXZEqqL
— U.S.-India Business Council (@USIBC) July 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.