ಲಂಡನ್: ಸೆಲ್ಫಿ ಹುಚ್ಚು ಜನರನ್ನು ಎಷ್ಟು ಆಕ್ರಮಿಸಿಕೊಂಡಿದೆ ಎಂದರೆ, ಒಂದು ಸೆಲ್ಫಿಗಾಗಿ ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆಯುತ್ತಿವೆ.
ಲಂಡನ್ನಿನ ಸಾನ್ ಡಿಯಾಗೋದಲ್ಲಿನ ವ್ಯಕ್ತಿಯೊಬ್ಬ ಭಯಾನಕ ಹಾವು ಎಂದೇ ಕರೆಯಲ್ಪಡುವ ಕೊಳಕು ಮಂಡಲದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ.
ಫಾಸ್ಲರ್ ಎಂಬ ಯುವಕ ಈ ಹಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಅದರ ಹತ್ತಿರಕ್ಕೆ ಹೋಗಿದ್ದಾನೆ. ತಕ್ಷಣವೇ ಅದು ಆತನನ್ನು ಕಚ್ಚಿಬಿಟ್ಟಿದೆ. ಇದರಿಂದ ಭಾರೀ ಪ್ರಮಾಣದ ವಿಷ ಆತನ ದೇಹದೊಳಗೆ ಸೇರಿಕೊಂಡಿದೆ. ಆತನ ಸಂಪೂರ್ಣ ದೇಹ ಸ್ವಾಧೀನವನ್ನೇ ಕಳೆದುಕೊಂಡಿತ್ತು.
ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಚಿಕಿತ್ಸೆ ತಗುಲಿದ ವೆಚ್ಚ ಬರೋಬ್ಬರಿ 153,161 ಡಾಲರ್ ಅಂದರೆ 99 ಲಕ್ಷ ರೂಪಾಯಿ. ಆದರೂ ಇನ್ನೂ ಈತ ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗಿಲ್ಲ. ಹಲವು ಅಂಗಗಳು ಕೊಳೆತಿವೆ.
ಕೇವಲ ಒಂದು ಸೆಲ್ಫಿಗಾಗಿ ಈತ ಸುಂದರ ಬದುಕನ್ನೇ ಹಾಳು ಮಾಡಿಕೊಂಡಿದ್ದಾನೆ. ಸೆಲ್ಫಿ ಕ್ರೇಜ್ಗಾಗಿ ಅಪಾಯವನ್ನು ಎದುರಿಸಲು ಮುಂದಾಗುವವರಿಗೆ ಈ ಘಟನೆಯೊಂದು ಪಾಠವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.