ನವದೆಹಲಿ: ಬೀದಿ ವ್ಯಾಪಾರಿಗಳಿಗೆ ಅವರ ಮನೆ ಬಾಗಿಲಿಗೆಯೇ ಸಣ್ಣ ಸಾಲ ಸೌಲಭ್ಯವನ್ನು ತಲುಪಿಸುವ ಸಲುವಾಗಿ SVANidhi (PM Street vendor’s Aatmanirbhar nidhi) ಆ್ಯಪ್ಗೆ ದೆಹಲಿಯಲ್ಲಿ ಚಾಲನೆಯನ್ನು ನೀಡಲಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗ ಶಂಕರ್ ಮಿಶ್ರಾ ಅವರು ಈ ಆ್ಯಪ್ಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, PM SVANidhi ಮೊಬೈಲ್ ಆ್ಯಪ್ ಸಾಲ ಸಂಸ್ಥೆಗಳಿಗೆ ಮತ್ತು ಅದರ ಫೀಲ್ಡ್ ಸಿಬ್ಬಂದಿಗಳಿಗೆ ಬೀದಿಬದಿ ವ್ಯಾಪಾರಿಗಳಿಂದ ಸಾಲ ಅರ್ಜಿಯನ್ನು ಪಡೆಯಲು ಮತ್ತು ಪ್ರಕ್ರಿಯೆ ನಡೆಸಲು ಡಿಜಿಟಲ್ ಇಂಟರ್ಫೇಸ್ ಅನ್ನು ಒದಗಿಸುವ ಉದ್ದೇಶವನ್ನು ಒಳಗೊಂಡಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಈ ಆ್ಯಪ್ ಉತ್ತೇಜನವನ್ನು ನೀಡಲಿದೆ ಮತ್ತು ಫೀಲ್ಡ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಹೆಚ್ಚು ಜನರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
ಈ ಮೊಬೈಲ್ ಆ್ಯಪ್ ಬೀದಿಬದಿ ವ್ಯಾಪಾರಿಗಳಿಗೆ ಸಣ್ಣ ಸಾಲ ಸೌಲಭ್ಯಗಳನ್ನು ಪಡೆಯಲು ಕಾಗದರಹಿತ ಡಿಜಿಟಲ್ ಪ್ರವೇಶ ಪಡೆಯುವಂತೆ ಮಾಡಲಿದೆ, ಕಾರ್ಯ ತಾಂತ್ರಿಕವಾಗಿ ಯೋಜನೆ ಅನುಷ್ಠಾನಗೊಳಿಸಲು ಸಹಾಯ ಮಾಡಲಿದೆ ಎಂದಿದ್ದಾರೆ.
ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಆ್ಯಪ್ ಅನ್ನು ಸಾಲ ಸಂಸ್ಥೆಗಳು ಮತ್ತು ಅವರ ಫೀಲ್ಡ್ ಸಿಬ್ಬಂದಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಜುಲೈ 2ರಿಂದ ಪಿಎಂ SVANidhi ಅಡಿಯಲ್ಲಿ ಶಾಲಾ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ವಿವಿಧ ರಾಜ್ಯಗಳ 1,54000 ಬೀದಿಬದಿ ವ್ಯಾಪಾರಿಗಳು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ 48000 ಬೀದಿಬದಿ ವ್ಯಾಪಾರಿಗಳಿಗೆ ಈಗಾಗಲೇ ಸಾಲವನ್ನು ಮಂಜೂರು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.