ನವದೆಹಲಿ: ಭಾರತೀಯ ಸೇನೆ 10 ಸಾವಿರ ಅಧಿಕಾರಿಗಳ ಕೊರತೆಯನ್ನು ಎದುರಿಸುತ್ತಿದೆ, ವಾಯುಸೇನೆ 1,800 ಅಧಿಕಾರಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿರುವ ಅವರು, ‘ಭೂಸೇನೆಯಲ್ಲಿ 2012ರಿಂದ ಒಟ್ಟು 644 ಅಧಿಕಾರಿಗಳು ಅವಧಿಗೂ ಮುನ್ನವೇ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ನೌಕಾಸೇನೆಯಲ್ಲಿ ಸೇನೆಯಲ್ಲಿ 343 ಅಧಿಕಾರಿಗಳು ಮತ್ತು ವಾಯುಸೇನೆಯಲ್ಲಿ 441 ಮಂದಿ ಅವಧಿಗೂ ಮುನ್ನ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ’ ಎಂದಿದ್ದಾರೆ.
ಕಠಿಣ ಆಯ್ಕೆಯ ಮಾನದಂಡಗಳು, ಕಠಿಣ ಸೇವಾ ಸ್ಥಿತಿಗಳು ಹೈಯರ್ ರ್ಯಾಂಕ್ ಪಡೆದುಕೊಳ್ಳಲು ಇರುವ ದೊಡ್ಡ ಸವಾಲುಗಳು. ಹೀಗಾಗಿ ಅಧಿಕಾರಿಗಳ ಮಟ್ಟದಲ್ಲಿ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೈದ್ಯಕೀಯ ವಿಭಾಗವನ್ನು ಹೊರತುಪಡಿಸಿ 6,642 ಇತರ ಅಧಿಕಾರಿಗಳ ಹುದ್ದೆಗಳು ಖಾಲಿ ಇದೆ. ನೌಕೆಯಲ್ಲಿ 1,779 ಅಧಿಕಾರಿಗಳ ಹುದ್ದೆ ಖಾಲಿ ಇದೆ.
ಪ್ರಸ್ತುತ ಭೂಸೇನೆಯಲ್ಲಿ 45 ಸಾವಿರ ಯೋಧರು ತರಬೇತಿ ಹಂತದಲ್ಲಿದ್ದಾರೆ.
ನೌಕಾಸೇನೆಯಲ್ಲಿ10,523 ಮತ್ತು ವಾಯಸೇನೆಯಲ್ಲಿ 11,979 ಯೋಧರು ತರಬೇತಿ ಪಡೆಯುತ್ತಿದ್ದಾರೆ. 2012ರಿಂದ ಸರ್ಕಾರ ತರಬೇತಿಗಾಗಿ 2, 409.3 ಕೋಟಿ ಖರ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.