ನರೇಂದ್ರ ಮೋದಿ ಅವರು ಭಾರತದ ಉನ್ನತ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾದ ನಂತರ, ಅವರ ಪ್ರತಿಯೊಂದು ನಡೆಯನ್ನೂ ಚೀನಾದ ತಜ್ಞರ ಬೆಟಾಲಿಯನ್ ಪರಿಶೀಲಿಸುತ್ತಿದೆ, ಮೋದಿ ತಲೆಯೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಟಾಸ್ಕ್ ಅನ್ನು ಈ ತಜ್ಞರಿಗೆ ನೀಡಲಾಗಿದೆ. ಸಬರಮತಿ ನದಿಯ ಶಾಂತಿಯುತ ಪರಿಸರದ ನಡುವೆ ಜೋಕಾಲಿ ಮೇಲೆ ಕ್ಸಿ ಜಿನ್ಪಿಂಗ್ ಕುಳಿತಾಗ ಕ್ಯಾಮೆರಾಗಳ ಕಣ್ಣು ಭಾರತ-ಚೀನಾ ಸಂಬಂಧಗಳಲ್ಲಿ ಮತ್ತೊಂದು ನಿರ್ಣಾಯಕ ಕ್ಷಣವನ್ನು ದಾಖಲಿಸುತ್ತಿತ್ತು. ಆದರೆ ಕ್ಸಿ ಜಿನ್ಪಿಂಗ್ ಮಾತ್ರ ಅವಕಾಶ ಬಂದಾಗ ಸ್ಪೋಟಿಸುವ ಯೋಜನೆಯನ್ನು ತಲೆಯೊಳಗೆಯೇ ಇಟ್ಟುಕೊಂಡಿದ್ದ.
1962ರಲ್ಲಿ ಎನ್ಇಎಫ್ಎ ಮತ್ತು ಲಡಾಖ್ನಲ್ಲಿ ನಡೆದ ಗಡಿ ಘರ್ಷಣೆಗೆ ಮುನ್ನುಡಿ ಬರೆಯುವುದಕ್ಕೂ ಮುನ್ನ , ಚೀನಾದ ನಿಯೋಗವು 1950ರ ದಶಕದ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಿತ್ತು. ಆಗ ಅಂಬಾಲದಲ್ಲಿ 4 ಮೌಂಟೇನ್ ಡಿವಿಶನ್ ಕಮಾಂಡರ್ ಆಗಿದ್ದ “ಬಿಜಿ” ಕೌಲ್ ಚೀನಾದ ನಿಯೋಗಕ್ಕೆ ಆತಿಥ್ಯ ವಹಿಸಿದ್ದರು ಮತ್ತು ಭೇಟಿಯ ಭಾಗವಾಗಿ, ಪಟಾಕಿಗಳೊಂದಿಗೆ ಇನ್ಫಾಂಟ್ರಿ ಅಟ್ಯಾಕ್ ಪ್ರದರ್ಶನವನ್ನು ಆಯೋಜಿಸಿದ್ದರು. ತರುವಾಯ, ಅಕ್ಟೋಬರ್ 1962ರಲ್ಲಿ ಚೀನಾ ಭಾರತದ ಮೇಲೆ ದಾಳಿ ನಡೆಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾಗ, ಮಾವೋ ಝೆಡಾಂಗ್ ಅಂಬಾಲಾದಲ್ಲಿ ಹಾಜರಿದ್ದ ಅಧಿಕಾರಿಗಳನ್ನು ತನ್ನ ಬಳಿ ಕರೆಯಿಸಿ ಕೌಲ್ ಅವರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಕೇಳಿ ಪಡೆದಕೊಂಡರು. ಆಗ ಲೆಫ್ಟಿನೆಂಟ್ ಜನರಲ್ ಅವರನ್ನು ಡೆ ಫ್ಯಾಕ್ಟೊ ಮುಖ್ಯಸ್ಥ ಎಂದು ಪರಿಗಣಿಸಲಾಗಿತ್ತು.
ಭಾರತೀಯರು ನೀಡಿದ ಪ್ರದರ್ಶನಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಚೀನಾ ಜನರಲ್ ಹಿರಿಯ ಕಮಾಂಡರ್ಗಳಿಗೆ ತಿಳಿಸಿದರು. ವಾಸ್ತವವಾಗಿ, ತುಂಬಾ ಪರಿಪೂರ್ಣವಾಗಿ ವಿವರಿಸಿದರು. ಕೌಲ್ ಮಾತ್ರವಲ್ಲ, ಭಾರತೀಯ ಸೇನೆಯ ಬಗ್ಗೆಯೂ ಸಹ ವಿವರಗಳನ್ನು ನೀಡಲಾಯಿತು. ಈ ವಿವರಗಳ ಆಧಾರದ ಮೇಲೆಯೇ ಚೀನಿಯರು ತಮ್ಮ ಕಾರ್ಯತಂತ್ರವನ್ನು ವಿಕಸನಗೊಳಿಸಿದರು. ಎದುರಾಳಿಯ ತಲೆಯೊಳಗೆ ಏನಿದೆ ಎಂಬುದನ್ನು ಅರಿತುಕೊಂಡ ನಂತರ ಅವರು ತಮ್ಮ ಯೋಜನೆಗಳನ್ನು ರೂಪಿಸಿದರು, ನಿರ್ದಿಷ್ಟ ಸಂದರ್ಭಗಳಲ್ಲಿ ಭಾರತೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ಅರಿತುಕೊಂಡು ಕಾರ್ಯತಂತ್ರ ರೂಪಿಸಿದರು. ಹೆಚ್ಚಿನ ಮಟ್ಟಿಗೆ, ಚೀನಾ ಸಫಲತೆ ಇದು ಕಾರಣವಾದವು.
ಚೀನಿಯರು ಪ್ರಧಾನಿ ಮೋದಿಯವರನ್ನು ಅಧ್ಯಯನ ಮಾಡಲು ಸಾಕಷ್ಟು ಸಮಯವನ್ನು ಕಳೆದಿರುವುದು ಮಾತ್ರವಲ್ಲ, ಭಾರತದ ಕಡೆಯ ಇತರ ಪ್ರಮುಖರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಡಾ.ಎಸ್. ಜೈಶಂಕರ್, ಅಜಿತ್ ದೋವಲ್ ಬಗ್ಗೆಯೂ ಅವರು ಅಧ್ಯಯನ ನಡೆಸಿದ್ದಾರೆ.
ಈ ವಿಷಯಗಳಲ್ಲಿ ಚೀನೀಯರು ಖರ್ಚು ಮಾಡಿದ ಗಣನೀಯ ಪ್ರಮಾಣದ ಸಮಯ ಮತ್ತು ಹಣವನ್ನು ಗಮನಿಸಿದರೆ, ಭಾರತೀಯ ವ್ಯವಸ್ಥೆಯನ್ನು ಭಯದ ಅಲೆಯ ಮೇಲೆ ದುರ್ಬಲಗೊಳಿಸಲು ಹೇಗೆ ಕಾರ್ಯತಂತ್ರ ರೂಪಿಸಬೇಕು ಎಂಬುದನ್ನು ಅನ್ವೇಷಿಸುವುದಕ್ಕೂ ಅವರು ಸಾಕಷ್ಟು ಸಮಯ ಮತ್ತು ಹಣವನ್ನು ವ್ಯಯಿಸಿದ್ದಾರೆ. ಸಿಕ್ಕಿಂನ ನಕು ಲಾ, ಪಂಗೊಂಗ್ ತ್ಸೊ ಮತ್ತು ಪೂರ್ವ ಲಡಾಖ್ನ ಗಾಲ್ವಾನ್ ನಲ್ಲಿನ 9 ಅಡಿ ಚಿನಾಮನ್ ಭೂಮಿಯನ್ನು ಕಸಿದುಕೊಳ್ಳುವ ಚಿತ್ರಣವು ಅವರ ಕೆಲಸವನ್ನು ಹೆಚ್ಚು ಸುಲಭಗೊಳಿಸಬಲ್ಲದು. 21 ನವೆಂಬರ್ 1962 ರಂದು ಚೀನಿಯರು ಕದನ ವಿರಾಮವನ್ನು ಘೋಷಿಸಿದ ನಂತರವೂ, ಎರಡು ಬೆಟಾಲಿಯನ್ಗಳನ್ನು ಕಾರ್ಯಾಚರಣೆಗೆ ವಹಿಸಿದ್ದರು, ಅವರ ಕೆಲಸವು ಹಿಮ್ಮೆಟ್ಟುವ ಎಲ್ಲ ಭಾರತೀಯ ಸೈನಿಕರನ್ನು ಬೇಟೆಯಾಡುವುದು ಮತ್ತು ಕೊಲ್ಲುವುದಾಗಿತ್ತು. ಶೀತದಿಂದ ದಿಗ್ಭ್ರಮೆಗೊಂಡವರು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದದ ಭಾರತೀಯ ಯೋಧರು ಅವರ ಟಾರ್ಗೆಟ್ ಆಗಿತ್ತು.
ಚೀನಿಯರ ಈ “ಭಯೋತ್ಪಾದಕ ದಳಗಳು” ಯಾವುದೇ ಕರುಣೆ ಅಥವಾ ಪಶ್ಚಾತ್ತಾಪವನ್ನು ತೋರಿಸದೆಯೇ ಗುಂಡು ಹಾರಿಸಿದವು ಮತ್ತು ಕೋಲ್ಡ್ ಬ್ಲಡ್ ಮೂಲಕ ಸಾಯಿಸಿದವು. ಯುದ್ಧ ಅಪರಾಧಕ್ಕೆ ಕಡಿಮೆಯಿಲ್ಲದಂತಹ ಸನ್ನಿವೇಶ ಅದು, ಲೆಫ್ಟಿನೆಂಟ್ ಕರ್ನಲ್ ಬ್ರಾಮ್ಹಾನಂದ್ ಅವಸ್ಥಿ ಮತ್ತು ಬ್ರಿಗೇಡಿಯರ್ ಹೋಶಿಯಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಸಹ ಹೊಂಚುಹಾಕಿ ಕೊಲ್ಲಲಾಯಿತು. ಚೀನಿ ಸೇನೆಯ ಈ ಕ್ರೂರತೆಯ ಉದ್ದೇಶವೆಂದರೆ ರ ಮನಸ್ಸಿನ ಮೇಲೆ ಶಾಶ್ವತವಾದ ಗಾಯವನ್ನು ಮಾಡಿ ಬಿಡುವುದು.
2020ರಲ್ಲಿ, ಪಿಎಲ್ಎ ಕಮಾಂಡರ್ಗಳು ಪ್ರವೇಶ ಮತ್ತು ತಂತ್ರಗಳ ಮಾರ್ಗಗಳನ್ನು ನೆಲದ ಮೇಲೆ ಅಳವಡಿಸಿಕೊಂಡರೆ, ಅವರ ಮನೋ ವಿಶ್ಲೇಷಕರು ಭಾರತೀಯ ಪ್ರಮುಖ ವ್ಯಕ್ತಿಗಳ ಮನಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಂಡಿದ್ದಾರೆ. ಭಯದ ಅಲೆಯನ್ನು ಸೃಷ್ಟಿಸುವುದು ಅವರ ಒಳ ಅಜೆಂಡಾ. ಭಾರತೀಯ ನಾಯಕತ್ವ ಮತ್ತು ಸೈನ್ಯವನ್ನು ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುವುದು, ಆ ಮೂಲಕ ತಪ್ಪುಗಳನ್ನು ಮಾಡುವಂತೆ ಮತ್ತು ಶರಣಾಗುವಂತೆ ಮಾಡುವುದು ಅವರ ಉದ್ದೇಶ.
ಲಡಾಖ್ನಿಂದ ಕಿಬಿಥುವರೆಗೆ ವಿಸ್ತರಿಸಿರುವ ಭಾರತೀಯ ಸೇನೆ ಮತ್ತು ವಾಯುಪಡೆಯು ಯಾವುದೇ ಚೀನಾದ ದುಷ್ಕೃತ್ಯವನ್ನು ತಡೆಗಟ್ಟಲು ಸಾಕಷ್ಟು ಸಮರ್ಥವಾಗಿವೆ. ಆದರೂ, ಏನು ನಡೆಯುತ್ತಿದೆ ಅಥವಾ ಏನಾಗುತ್ತಿದೆ ಎಂಬುದರ ಕುರಿತು ನಿಮಿಷದಿಂದ ನಿಮಿಷದ ವಿಶ್ಲೇಷಣೆಯನ್ನು ಮೈನಸ್ ಕಮಾಂಡರ್ಗಳಿಗೆ ನಿರ್ವಹಿಸಲು ಅನುಮತಿ ನೀಡುವುದು ಕಡ್ಡಾಯವಾಗಿದೆ. ಚೀನಾದ ಅತಿದೊಡ್ಡ ದುರ್ಬಲತೆಯು ಸಮುದ್ರ ಪಥಗಳಲ್ಲಿದೆ ಮತ್ತು ಬಹುಶಃ ನಾವು “ನೌಕಾಪಡೆ” ಯನ್ನು ನಿಯೋಜಿಸುವತ್ತ ಪ್ರಾರಂಭಿಸಬೇಕು, ವಿಶೇಷವಾಗಿ ದಕ್ಷಿಣ ಚೀನಾ ಸಮುದ್ರವು ಪ್ರಸ್ತುತ ನಿಜವಾದ ಕೇಂದ್ರಬಿಂದುವಾಗಿದೆ.
ಚೀನಾ ಈಗಾಗಲೇ ದುಸ್ಸಾಹಸಕ್ಕೆ ಕೈ ಹಾಕಿದೆ ಮತ್ತು ಈ ಸವಾಲನ್ನು ನಾವು ಎಲ್ಲಿ ಮತ್ತು ಹೇಗೆ ಎದುರಿಸಬೇಕು ಎಂದು ನಿರ್ಧರಿಸುವ ಸಮಯ ಬಂದಿದೆ. 1962 ರಲ್ಲಿ ಚೀನಿಯರನ್ನು ನಮಗೆ ಅನುಕೂಲಕರವಾದ ನೆಲಕ್ಕೆ ತಂದು ಹೋರಾಡುವಂತೆ ಮಾಡುವ ಬದಲು ಅವರನ್ನು ಕ್ರೆಸ್ಟ್ ಲೈನ್ಗಳಲ್ಲಿ ಹಿಡಿದಿಡಲು ಪ್ರಯತ್ನಿಸಿ ದೊಡ್ಡ ತಪ್ಪನ್ನು ಮಾಡಿದ್ದೇವೆ. ಪ್ರಸಿದ್ಧ ಥೋರಾಟ್ ಡಿಫೆನ್ಸಿವ್ ತತ್ವವನ್ನು ಗಾಳಿಗೆ ತೂರಲಾಯಿತು ಮತ್ತು ನಂತರ ಏನಾಯಿತು ಎಂಬುದನ್ನು ನಾವೆಲ್ಲ ನೋಡಿದೆವು. ಈ ಬಾರಿ ಆ ತಪ್ಪು ನಡೆಯದಂತೆ ನೋಡುವ ಜವಾಬ್ದಾರಿ ಚುನಾಯಿತ ಸರ್ಕಾರದ ಮೇಲಿದೆ. ರಾಷ್ಟ್ರವಾಗಿ ನಮಗೆ, ನಮ್ಮ ರಾಜಕೀಯ ದೃಷ್ಟಿಕೋನಗಳು ಏನೇ ಇದ್ದರೂ ಚುನಾಯಿತ ಸರ್ಕಾರದ ಹಿಂದೆ ದೃಢವಾಗಿ ನಿಲ್ಲುವ ಸಮಯ ಇದು. ಪಿಎಂ ಮೋದಿ ಅವರು ತಂಡವನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕಾಗಿದೆ.
ಮೂಲ ಲೇಖನ: ಶಿವ್ ಕುನಾಲ್ ವರ್ಮಾ
sundayguardianlive
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.