ಬ್ರಿಟಿಷರು ಅಧಿಕಾರವನ್ನು ಭಾರತದ ನಾಯಕತ್ವಕ್ಕೆ ವರ್ಗಾವಣೆ ಮಾಡುವ ಮುನ್ನಾದಿನದಂದು, ಭಾರತವು ಭಾರತ ಮತ್ತು ಪಾಕಿಸ್ಥಾನವಾಗಿ ವಿಭಜನೆಗೊಂಡಿತು.ಮುಸ್ಲಿಂ ಅಥವಾ ಮುಸ್ಲಿಮೇತರ ಬಹುಮತದ ಆಧಾರದ ಮೇಲೆ ಪ್ರಾಂತ್ಯಗಳನ್ನು ಹಂಚಿಕೆ ಮಾಡಲಾಯಿತು. ಎರಡು ಪ್ರಾಂತ್ಯಗಳಾದ ಪಂಜಾಬ್ ಮತ್ತು ಬಂಗಾಳವನ್ನು ಕೂಡ ಇದೇ ಆಧಾರದ ಮೇಲೆ ವಿಭಜಿಸಲಾಗಿದೆ.
ಪಂಜಾಬ್ನಲ್ಲಿ, ಸಿಖ್ಖರು ಮತ್ತು ಹಿಂದೂಗಳು ಭಾರತದಲ್ಲಿ ಉಳಿಯಬೇಕೆಂಬ ಬಲವಾದ ಆಸೆ ಪ್ರಾಂತ್ಯದ ವಿಭಜನೆಗೆ ಕಾರಣವಾಯಿತು, ಆದರೆ ಬಂಗಾಳದಲ್ಲಿ, ಬಂಗಾಳಿ ಹಿಂದೂಗಳು ಭಾರತದ ವಿಭಜನೆಯನ್ನು ಲೆಕ್ಕಿಸದೆಯೇ ಬಂಗಾಳ ವಿಭಜನೆಗಾಗಿ ಒತ್ತಾಯಿಸಿದರು. ತೀವ್ರವಾದ ಪ್ರಚಾರ ಮತ್ತು ಎಲ್ಲಾ ಕಡೆಯ ಬೆಂಬಲದ ಪರಿಣಾಮವಾಗಿ ಬಂಗಾಳದ ಮುಸ್ಲಿಮೇತರ ಬಹುಸಂಖ್ಯಾತ ಜಿಲ್ಲೆಗಳ ಶಾಸಕರು 58-21ರ ಮತಗಳ ಮೂಲಕ ಪಶ್ಚಿಮ ಬಂಗಾಳದ ರಚನೆಯ ಪರವಾಗಿ 1947 ರ ಜೂನ್ 20ರಂದು ಮತ ಚಲಾಯಿಸಿದರು . ಪೂರ್ವ ಪಂಜಾಬ್ ಅನ್ನು ತರುವಾಯ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಮರು-ಸಂಘಟಿಸಲಾಗಿದ್ದರೆ, ಪಶ್ಚಿಮ ಬಂಗಾಳವು ಇತರ ರಾಜ್ಯಗಳ ಭೂಪ್ರದೇಶಗಳ ಸಂಯೋಜನೆಯಿಂದ ಬಲಗೊಂಡಿದೆ. ಇಂದಿಗೂ ಪಶ್ಚಿಮಬಂಗಾಳ ಒಂದು ವಿಶೇಷ ರಾಜ್ಯ. ಭಾರತದ ವಿಭಜನೆಯ ಸಮಯದಲ್ಲಿ ರಚಿಸಲ್ಪಟ್ಟ ರಾಜ್ಯವಾಗಿ ಮತ್ತು ಅದರ ರಚನೆಯಲ್ಲಿ ವಿಶಿಷ್ಟ ಇತಿಹಾಸವನ್ನು ನೀಡಿದ ಭಾರತೀಯ ಒಕ್ಕೂಟದ ಏಕೈಕ ಘಟಕ ಪಶ್ಚಿಮ ಬಂಗಾಳ. ಭಾರತದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಭಿನ್ನವಾಗಿ ಪಶ್ಚಿಮ ಬಂಗಾಳವು ವಿಶೇಷ ರಾಜ್ಯವಾಗಿದೆ.
ಪಶ್ಚಿಮ ಬಂಗಾಳವು ಕೇವಲ ಭೂಪ್ರದೇಶ ಅಥವಾ ಭೂದೃಶ್ಯ ಮಾತ್ರವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಪಶ್ಚಿಮ ಬಂಗಾಳವು ಒಂದು ಪರಿಕಲ್ಪನೆಯಾಗಿದೆ. ರಾಜ್ಯದ ಸೃಷ್ಟಿಕರ್ತರು ಇದನ್ನು ಬಂಗಾಳಿ ಹಿಂದೂ ಜನರ ತಾಯ್ನಾಡು ಎಂದು ಭಾವಿಸಿದರು, ಅಲ್ಲಿ ಬಂಗಾಳಿ ಹಿಂದೂಗಳು ಸ್ವಾತಂತ್ರ್ಯ, ಗೌರವ ಮತ್ತು ಘನತೆಯಿಂದ ಬದುಕಬಲ್ಲರು ಎಂದು ಭಾವಿಸಿದರು. ಅಲ್ಲಿ ಅವರು ತಮ್ಮ ಧರ್ಮವನ್ನು ಆಚರಿಸಬಹುದು, ಅವರ ಭಾಷೆಯನ್ನು ಅಭಿವೃದ್ಧಿಪಡಿಸಬಹುದು ಮತ್ತು ಅವರ ಸಂಸ್ಕೃತಿಯನ್ನು ಮುಕ್ತವಾಗಿ ಮುಂದುವರಿಸಬಹುದು ಎಂದು ನಂಬಿದರು. ಇತಿಹಾಸಕಾರ ಸರ್ ಜದುನಾಥ್ ಸರ್ಕಾರ್, ಪಶ್ಚಿಮ ಬಂಗಾಳವನ್ನು ಬಂಗಾಳಿ ಹಿಂದೂಗಳ ತಾಯ್ನಾಡು ಎಂದು ಪರಿಕಲ್ಪನೆ ರೂಪಸಿದರು. ಯಹೂದಿ ಜನರ ತಾಯ್ನಾಡಾದ ಇಸ್ರೇಲ್ ಮಾದರಿಯಲ್ಲಿ ಇದು ಬಂಗಾಳಿ ಹಿಂದೂಗಳ ತಾಯ್ನಾಡು ಎಂಬ ಪರಿಕಲ್ಪನೆ ಅವರಲ್ಲಿತ್ತು. ಪಶ್ಚಿಮ ಬಂಗಾಳದ ಸ್ಥಳೀಯ ಬಂಗಾಳಿ ಹಿಂದೂಗಳು ಪಾಕಿಸ್ಥಾನದಿಂದ ಬಂದ ನಿರಾಶ್ರಿತ ಬಂಗಾಳಿ ಹಿಂದೂಗಳನ್ನು ತಮ್ಮೊಳಗೆ ಸೇರಿಸಿಕೊಳ್ಳಬೇಕು ಮತ್ತು ಯಾವುದೇ ಪರಸ್ಪರ ದ್ವೇಷದಿಂದ ದೂರವಿರಬೇಕು ಎಂದು ಅವರು ಕರೆ ನೀಡಿದ್ದರು. ಮಧ್ಯಕಾಲೀನ ಅಜ್ಞಾನ ಮತ್ತು ಬಳಕೆಯಲ್ಲಿಲ್ಲದ ಪ್ರಜಾಪ್ರಭುತ್ವದ ಧರ್ಮಾಂಧತೆಯ ಮರುಭೂಮಿಯಲ್ಲಿ ನಾಗರಿಕತೆಯ ಓಯಸಿಸ್ ಚಿಮ್ಮಿಸಿದ ಭವಿಷ್ಯದ ಇಸ್ರೇಲ್ ಆಗಿ ಪಶ್ಚಿಮ ಬಂಗಾಳವನ್ನು ಅಭಿವೃದ್ಧಿಪಡಿಸಲು ಅವರು ಬಂಗಾಳಿ ಹಿಂದೂ ನಾಯಕತ್ವಕ್ಕೆ ಕರೆ ನೀಡಿದ್ದರು.
ಪಶ್ಚಿಮ ಬಂಗಾಳವನ್ನು ಬಂಗಾಳಿ ಹಿಂದೂ ಜನರ ತಾಯ್ನಾಡು ಎಂಬ ಪರಿಕಲ್ಪನೆಯು ಎಡಪಂಥೀಯರು ಅಧಿಕಾರಕ್ಕೆ ಏರುವುದರೊಂದಿಗೆ ಕುಸಿಯಲು ಪ್ರಾರಂಭಿಸಿತು. ಪಶ್ಚಿಮ ಬಂಗಾಳ ಪಾಕಿಸ್ಥಾನದ ಭಾಗವಾಗಬೇಕೆಂದು ಬಯಸಿದ್ದ ಎಡಪಂಥೀಯರು ಪಶ್ಚಿಮಬಂಗಾಳವನ್ನು ಬಂಗಾಳಿ ಹಿಂದೂಗಳ ತಾಯ್ನಾಡು ಎಂದು ನಂಬಲಿಲ್ಲ. ಪಶ್ಚಿಮ ಬಂಗಾಳವನ್ನು ಎಡಪಂಥೀಯ ಭದ್ರಕೋಟೆಯನ್ನಾಗಿಸಲು ಹವಣಿಸಿ ಹಿಂದೂಗಳನ್ನು ಕಡೆಗಣಿಸಿದರು. ಎಡಪಂಥೀಯರಿಗೆ ಬಂಗಾಳಿ ಹಿಂದೂಗಳು ಅಥವಾ ಅವರ ತಾಯ್ನಾಡಿನ ಬಗ್ಗೆ ಕಾಳಜಿ ವಹಿಸುವ ಯಾವ ಇರಾದೆಯೂ ಇರಲಿಲ್ಲ, ಇದು ಬಾಹ್ಯ ಶಕ್ತಿಗಳಿಗೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಹುರುಪಿನಿಂದ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಟ್ಟಿತು. ಹೀಗಾಗಿಯೇ ಪಶ್ಚಿಮ ಬಂಗಾಳದ ಕಲ್ಪನೆಯನ್ನು ಉಲ್ಲಂಘಿಸಲಾಗಿದೆ ಮತ್ತು ದೀರ್ಘಕಾಲದವರೆಗೆ ಉಲ್ಲಂಘಿಸಲು ಅವಕಾಶ ನೀಡಲಾಗಿದೆ. ವಿದೇಶಿಗರು ಪಶ್ಚಿಮ ಬಂಗಾಳದ ಭೂಪ್ರದೇಶದಲ್ಲಿ ಯಾವುದೇ ಕೆಲಸವನ್ನು ಮಾಡಬಹುದು ಮತ್ತು ನಿರ್ಭಯದಿಂದ ಅಪರಾಧ ಎಸಗಿ ಪಾರಾಗಬಹುದು ಎಂಬ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ.
ಬಂಗಾಳಿ ಹಿಂದೂಗಳ ತಾಯ್ನಾಡಿನಲ್ಲಿ ಅಕ್ರಮ ವಲಸೆ ಹೆಚ್ಚಾಗಿದೆ. ಬಾಂಗ್ಲಾದೇಶದ ಮುಸ್ಲಿಮರು, ನೇಪಾಳಿಗಳು ಮತ್ತು ರೋಹಿಂಗ್ಯಾಗಳು ಶಾಶ್ವತ ವಸಾಹತುಗಳನ್ನು ಇಲ್ಲಿ ಸ್ಥಾಪಿಸಿದ್ದಾರೆ ಮತ್ತು ಬಂಗಾಳಿ ಅಸ್ಮಿತೆಯ ಉಲ್ಲಂಘನೆಯ ಕೃತ್ಯ ಪ್ರಾರಂಭಿಸಿದ್ದಾರೆ. ಬಾಂಗ್ಲಾದೇಶದ ಮುಸ್ಲಿಮರ ಅಕ್ರಮ ವಲಸೆ ಪಶ್ಚಿಮ ಬಂಗಾಳದ ಜನಸಂಖ್ಯಾ ರಚನೆಯನ್ನು ಇನ್ನಿಲ್ಲದಂತೆ ಬದಲಾಯಿಸಿದೆ, ಡಾರ್ಜಿಲಿಂಗ್ ಜಿಲ್ಲೆಗೆ ನೇಪಾಳಿ ವಲಸೆ ಅಲ್ಲಿನ ಶಾಂತಿ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಿದೆ. ರೋಹಿಂಗ್ಯಾಗಳ ಅಕ್ರಮ ವಲಸೆ ಭದ್ರತಾ ಬೆದರಿಕೆಯನ್ನುಂಟುಮಾಡುತ್ತಿದೆ. ಇದನ್ನು ಇನ್ನು ಮುಂದೆ ಭಾರತೀಯ ಒಕ್ಕೂಟವು ಬದಲಾಯಿಸಲು ಸಾಧ್ಯವಾಗದ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ. ಅಕ್ರಮ ವಲಸೆಯ ಹೊರತಾಗಿ, ಪಶ್ಚಿಮ ಬಂಗಾಳವನ್ನು ಭಯೋತ್ಪಾದಕ, ದೇಶದ್ರೋಹಿ ಮತ್ತು ಅಪರಾಧ ಚಟುವಟಿಕೆಗಳಿಗೆ ಸುರಕ್ಷಿತ ತಾಣವಾಗಿ ಬದಲಾಯಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಜಾಮಿಯತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ ಸಂಘಟನೆಯ ಹಲವಾರು ಕೋಶಗಳು ಸಕ್ರಿಯವಾಗಿವೆ, ಖಾಗ್ರಾಘ್ ಸ್ಫೋಟದ ನಂತರ ಅವರ ಮುಖ ಬೆಳಕಿಗೆ ಬಂದಿತು. ಮುಜೀಬುರ್ ರಹಮಾನ್ ಹತ್ಯೆಯಲ್ಲಿ ಭಾಗಿಯಾಗಿ ಬಾಂಗ್ಲಾದೇಶದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಅಬ್ದುಲ್ ಮಜೇದ್ ಅವರಂತಹ ಅಪರಾಧಿಗಳು ಪಶ್ಚಿಮ ಬಂಗಾಳವನ್ನು ಸುರಕ್ಷಿತ ಅಡಗುತಾಣವಾಗಿ ಮಾಡಿಕೊಂಡಿದ್ದರು. ದರೋಡೆ, ಜಾನುವಾರು ಕಳ್ಳಸಾಗಾಣೆ ಮತ್ತು ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆಗಳಲ್ಲಿ ಭಾಗಿಯಾಗಿರುವ ಬಾಂಗ್ಲಾದೇಶದ ಅಪರಾಧಿಗಳಿಗೆ ಬಾಂಗ್ಲಾ ರಾಜ್ಯವು ಅವರ ಎರಡನೇ ಮನೆಯಾಗಿದೆ.
ಪಶ್ಚಿಮ ಬಂಗಾಳವನ್ನು ಬಂಗಾಳಿ ಹಿಂದೂ ತಾಯ್ನಾಡು ಎಂಬ ಕಲ್ಪನೆಯನ್ನು ತೊಲಗಿಸಿದ್ದು ಕೇವಲ ಅಪರಾಧಿಗಳು ಮಾತ್ರವಲ್ಲ. ಸಾಮಾನ್ಯ ಬಂಗಾಳಿಗಳೂ ಈ ತಪ್ಪನ್ನು ಎಸಗಿದ್ದಾರೆ. ಶಿಕ್ಷಣ ಅಥವಾ ಚಿಕಿತ್ಸೆಗಾಗಿ ವೀಸಾದ ಮೇಲೆ ರಾಜ್ಯಕ್ಕೆ ಬರುವ ಸಾಮಾನ್ಯ ಬಾಂಗ್ಲಾದೇಶಿ ಜನರು ಕೂಡ ಪಶ್ಚಿಮಬಂಗಾಳದ ಕಾನೂನನ್ನು ಕಡೆಗಣಿಸಿ ಅಪರಾಧ ಎಸಗಿದ್ದಾರೆ. ಬಾಂಗ್ಲಾದೇಶದ ನಟನೊಬ್ಬ ಬಂಗಾಳದ ರಾಜಕೀಯ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾನೆ ಎಂದಾದರೆ ಅಲ್ಲಿನ ಪರಿಸ್ಥಿಯನ್ನು ಊಹಿಸಿಕೊಳ್ಳಿ. ಬಂಗಾಳಿ ಹಿಂದೂ ನಿರಾಶ್ರಿತರು ತಮ್ಮ ಭರವಸೆಯ ತಾಯ್ನಾಡಿನಲ್ಲಿ ನೆಲೆಸಲು ಭಾರತೀಯ ಪೌರತ್ವವನ್ನು ಪಡೆಯಲು ಅವಕಾಶ ನೀಡುವ ಉದ್ದೇಶಿತ ಮಸೂದೆಯನ್ನು ವಿರೋಧಿಸಿ ಬಾಂಗ್ಲಾದೇಶದ ವಿದ್ಯಾರ್ಥಿಗಳು ಮತ್ತು ಬಾಂಗ್ಲಾದೇಶದ ಪ್ರವಾಸಿಗರು ಬೀದಿಗಿಳಿಯುತ್ತಾರೆ. ರಾಜ್ಯದಿಂದ ಪ್ರಸಾರವಾದ ಭಾರತೀಯ ರಿಯಾಲಿಟಿ ಟಿವಿ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ಸ್ಪರ್ಧಿಯೊಬ್ಬ ಭಾರತದ ರಾಷ್ಟ್ರ ಕವಿ ಮತ್ತು ಶ್ರೇಷ್ಠ ಬಂಗಾಳಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸುತ್ತಾನೆ. ಟರ್ಕಿಯೊಬ್ಬ ಪಶ್ಚಿಮಬಂಗಾಳಕ್ಕೆ ಬಂದು ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಾನೆ.
ಈ ಎಲ್ಲಾ ಸನ್ನಿವೇಶಗಳನ್ನು ಸ್ವಲ್ಪಮಟ್ಟಿಗೆ ಸೂಚ್ಯವಾಗಿ ಅಂಗೀಕರಿಸಬಹುದಾದರೂ, ಇದು ಕೇವಲ ಭದ್ರತಾ ಕ್ರಮಗಳೊಂದಿಗೆ ವ್ಯವಹರಿಸಬಹುದಾದ ರಾಷ್ಟ್ರೀಯ ಭದ್ರತಾ ಸಮಸ್ಯೆಯಲ್ಲ. ದೇವಾಲಯದಲ್ಲಿನ ಪವಿತ್ರ ಕ್ರಿಯೆಗಳನ್ನು ಗೇಟ್ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಪರಿಹರಿಸಲಾಗುವುದಿಲ್ಲ. ಭಕ್ತರೊಳಗಿನ ನಂಬಿಕೆಯನ್ನು ಪುನಃಸ್ಥಾಪಿಸಲು ಗರ್ಭಗೃಹವನ್ನು ಶುದ್ಧೀಕರಿಸಬೇಕಾಗುತ್ತದೆ. ಅಂತೆಯೇ, ಬಂಗಾಳಿ ಹಿಂದೂಗಳಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಲು ಬಂಗಾಳವನ್ನು ಅಧಿಕೃತವಾಗಿ ಬಂಗಾಳಿ ಹಿಂದೂ ತಾಯ್ನಾಡು ಎಂದು ಘೋಷಿಸಬೇಕಾಗಿದೆ. ಅದು ಸಾಧ್ಯವಾಗದೇ ಹೋದರೆ, ಎಷ್ಟೇ ಪ್ರಯತ್ನಪಟ್ಟರೂ ಸೋಲು ಕಾಣುಬೇಕಾಗುತ್ತದೆ.
ಕೃಪೆ: tfipost.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.