ಬೆಂಗಳೂರು: ಕೊರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಅತ್ಯವಶ್ಯಕ ಎನಿಸಿರುವ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಪಾಡದೇ ಅಸಡ್ಡೆ ತೋರುವುದು ಇತ್ಯಾದಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಸಾರ್ವಜನಿಕರಿಂದ ಬಿಬಿಎಂಪಿ ದಂಡ ವಸೂಲಿ ಮಾಡುತ್ತಿದೆ. ಈ ಮೂಲಕ ಜನರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದೆ.
ಶುಕ್ರವಾರ ಕೊರೋನಾ ನಿಯಂತ್ರಣ ಕ್ರಮಗಳ ಪಾಲನೆ ಮಾಡದೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಂಡ 1,189 ಜನರಿಂದ ಸುಮಾರು 2.28 ಲಕ್ಷ ರೂಪಾಯಿ ದಂಡಗಳನ್ನು ವಸೂಲಿ ಮಾಡಲಾಗಿದೆ. ಬಿಬಿಎಂಪಿ ಮಾರ್ಷಲ್ಗಳು ಮತ್ತು ಅಧಿಕಾರಿಗಳ ಜಂಟಿ ಆಶ್ರಯದಲ್ಲಿ ಈ ದಂಡ ವಸೂಲಾತಿ ನಡೆಯುತ್ತಿದ್ದು, ಮಾಸ್ಕ್ ಧರಿಸದೆ ಬೀದಿಗಿಳಿದ 1,040 ಸಾರ್ವಜನಿಕರಿಂದ ತಲಾ 200 ರೂ. ಗಳಂತೆ ದಂಡ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಬೇಜವಾಬ್ದಾರಿ ತೋರಿದ 49 ಜನರಿಂದಲೂ ದಂಡ ವಸೂಲಿ ಮಾಡಿದ್ದು, ಕೇವಲ ಒಂದೇ ದಿನದಲ್ಲಿ 2.28 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.
ಕೋರಮಂಗಲ ವ್ಯಾಪ್ತಿಯ ಹೊಟೇಲ್, ರೆಸ್ಟೋರೆಂಟ್ಗಳ ಮೇಲೆಯೂ ದಾಳಿ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ನಡೆಸದ ನಾಲ್ಕು ಸಂಸ್ಥೆಗಳಿಗೆ ದಂಡ ವಿಧಿಸಿದೆ. ಅವುಗಳಿಂದ ಒಟ್ಟು 52000 ರೂ.ಗಳ ದಂಡದ ಮೊತ್ತವನ್ನು ಪಡೆದುಕೊಳ್ಳಲಾಗಿದೆ ಎಂದು ಬಿಬಿಎಂಪಿಯ ವಿಶೇಷ ಕಮಿಷನರ್ ಡಿ.ರಣದೀಪ್ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.