ನವದೆಹಲಿ: ಒಟ್ಟು ಜಾಗತಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 83 ಲಕ್ಷಕ್ಕೆ ತಲುಪಿದೆ, ಸಾವುಗಳ ಸಂಖ್ಯೆ 4,48,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಗುರುವಾರ ಬೆಳಿಗ್ಗೆ ವೇಳೆಗೆ, ಒಟ್ಟು ಪ್ರಕರಣಗಳ ಸಂಖ್ಯೆ 83,29,221 ಆಗಿದ್ದರೆ, ಸಾವುಗಳು 4,48,474 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತನ್ನ ಇತ್ತೀಚಿನ ಅಪ್ಡೇಟ್ನಲ್ಲಿ ಬಹಿರಂಗಪಡಿಸಿದೆ.
21,62,851 ಪ್ರಕರಣಗಳು ಮತ್ತು 1,17,713 ಸಾವುಗಳೊಂದಿಗೆ, ಯುಎಸ್ ವಿಶ್ವದ ಅತಿ ಹೆಚ್ಚು ಕೋವಿಡ್-19 ಸೋಂಕುಗಳು ಮತ್ತು ಸಾವುನೋವುಗಳನ್ನು ಕಂಡ ರಾಷ್ಟ್ರವಾಗಿ ಮುಂದುವರೆಯುತ್ತಿದೆ ಎಂದು ಸಿಎಸ್ಎಸ್ಇ ತಿಳಿಸಿದೆ.
ಪ್ರಕರಣಗಳ ವಿಷಯದಲ್ಲಿ, ಬ್ರೆಜಿಲ್ 9,55,377 ಸೋಂಕುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇದರ ನಂತರ ರಷ್ಯಾ 5,52,549, ಭಾರತ 3,54,065, ಯುಕೆ 3,00,717, ಸ್ಪೇನ್ 2,44,683, ಪೆರು 2,40,908, ಇಟಲಿ 2,37,828, ಚಿಲಿ 2, 20,628, ಇರಾನ್ 1,95,05, ಫ್ರಾನ್ಸ್ 1,94,80, ಜರ್ಮನಿ 1,88,60, ಟರ್ಕಿ 1,82,72, ಮೆಕ್ಸಿಕೊ 1,59,793, ಪಾಕಿಸ್ಥಾನ 1,54,760, ಸೌದಿ ಅರೇಬಿಯಾ 1,41,234 ಮತ್ತು ಕೆನಡಾ 1,01,491 ಪ್ರಕರಣಗಳನ್ನು ಹೊಂದಿದೆ ಎಂದು ಸಿಎಸ್ಎಸ್ಇ ಅಂಕಿಅಂಶಗಳು ತೋರಿಸಿದೆ.
46,510 COVID-19 ಸಾವುಗಳೊಂದಿಗೆ, ಬ್ರೆಜಿಲ್ ವಿಶ್ವದ ಎರಡನೇ ಅತಿ ಹೆಚ್ಚು ಸಾವುನೋವುಗಳನ್ನು ಕಂಡಿದೆ.
10,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ ಇತರ ದೇಶಗಳೆಂದರೆ ಯುಕೆ 42,238, ಇಟಲಿ 34,448, ಫ್ರಾನ್ಸ್ 29,578, ಸ್ಪೇನ್ 27,136, ಮೆಕ್ಸಿಕೊ 19,080 ಮತ್ತು ಭಾರತ 11,903.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.