ನವದೆಹಲಿ: ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ)ಗೆ ಏಷ್ಯಾ-ಪೆಸಿಫಿಕ್ ವಿಭಾಗದಿಂದ ಶಾಶ್ವತ ಅಲ್ಲದ ಸದಸ್ಯನಾಗಿ ಎರಡು ವರ್ಷಗಳ ಅವಧಿಗೆ ಬುಧವಾರ ರಾತ್ರಿ ಆಯ್ಕೆ ಮಾಡಲಾಯಿತು.
193 ಸದಸ್ಯರ ಸಾಮಾನ್ಯ ಸಭೆಯಲ್ಲಿ 184 ಮತಗಳನ್ನು ಗೆದ್ದ ನಂತರ ಯುಎನ್ಎಸ್ಸಿಯ ಶಾಶ್ವತ ಅಲ್ಲದ ಸದಸ್ಯರಲ್ಲೊಬ್ಬನಾಗಿ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾಯಿತರಾಗಲು ಕನಿಷ್ಠ 128 ಮತಗಳ ಅವಶ್ಯಕತೆ ಇದೆ. ಭಾರತ ಅತೀ ಹೆಚ್ಚು ಮತ ಪಡೆದುಕೊಂಡಿದೆ.
1950-1951, 1967-1968, 1972-1973, 1977-1978, 1984-1985, 1991-1992 ಮತ್ತು 2011-2012ರಲ್ಲಿ ಭಾರತ ಯುಎನ್ಎಸ್ಸಿಯ ಶಾಶ್ವತವಲ್ಲದ ಸದಸ್ಯನಾಗಿ ಏಳು ಬಾರಿ ಸೇವೆ ಸಲ್ಲಿಸಿದೆ.
“ನಮಗೆ ಅಗಾಧವಾದ ಬೆಂಬಲ ದೊರೆತಿದೆ ಮತ್ತು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಭಾರತದ ಮೇಲೆ ಅತೀವ ವಿಶ್ವಾಸವನ್ನು ಇಟ್ಟರು ಎಂಬುದಕ್ಕೆ ನಾವು ವಿನಮ್ರರಾಗಿದ್ದೇವೆ” ಎಂದು ಯುಎನ್ನ ಭಾರತೀಯ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ವಿಡಿಯೋ-ರೆಕಾರ್ಡ್ ಸಂದೇಶದಲ್ಲಿ ತಿಳಿಸಿದ್ದಾರೆ.
“ನಿರ್ಣಾಯಕ ಘಟ್ಟದಲ್ಲಿ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯನಾಗಿದೆ ಮತ್ತು ಕೋವಿಡ್ ನಂತರದ ವಿಶ್ವಕ್ಕೆ ಭಾರತವು ಸುಧಾರಿತ ಬಹುಪಕ್ಷೀಯ ವ್ಯವಸ್ಥೆಯ ನಾಯಕತ್ವ ಮತ್ತು ಹೊಸ ದೃಷ್ಟಿಕೋನವನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಅವರು ಹೇಳಿದರು.
ಏಷ್ಯಾ-ಪೆಸಿಫಿಕ್ ಗ್ರೂಪ್ (ಎಪಿಜಿ) ಯಲ್ಲಿ ಏಕೈಕ ಅಭ್ಯರ್ಥಿಯಾಗಿರುವುದರಿಂದ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜನವರಿ 2021 ರಿಂದ ಒಂದು ದಶಕದ ನಂತರ ಭಾರತ ಯುಎನ್ಎಸ್ಸಿಗೆ ಮರಳಿದೆ. ಭಾರತ ಯುಎನ್ಎಸ್ಸಿಯಲ್ಲಿ ಕೊನೆಯ ಬಾರಿಗೆ ಸೇವೆ ಸಲ್ಲಿಸಿದ್ದು 2011 ಮತ್ತು 2012 ರ ನಡುವೆ.
ಅಫ್ಘಾನಿಸ್ಥಾನವು ಭಾರತಕ್ಕೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟ ನಂತರ ಯುಎನ್ಎಸ್ಸಿಗೆ ಭಾರತದ ಚುನಾವಣೆಯನ್ನು 2019 ರ ಜೂನ್ನಲ್ಲಿ ಎಪಿಜಿ ಅನುಮೋದಿಸಿತು.
ನ್ಯೂಯಾರ್ಕ್ನ ಯುಎನ್ ಪ್ರಧಾನ ಕಚೇರಿಯಲ್ಲಿ ಈ ಚುನಾವಣೆ ನಡೆಯಿತು. ಭಾರತದೊಂದಿಗೆ, ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ಕೂಡ ಬುಧವಾರ ನಡೆದ ಯುಎನ್ಎಸ್ಸಿ ಚುನಾವಣೆಯಲ್ಲಿ ಜಯಗಳಿಸಿವೆ.
ಯುಎನ್ಎಸ್ಸಿ 15 ಸದಸ್ಯರನ್ನು ಹೊಂದಿದ್ದು, ಐದು ಶಾಶ್ವತ ಸದಸ್ಯರನ್ನು ಒಳಗೊಂಡಿದೆ. ಅದೆಂದರೆ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ರಷ್ಯಾ ಮತ್ತು ಚೀನಾ.
Member States elect India to the non-permanent seat of the Security Council for the term 2021-22 with overwhelming support.
India gets 184 out of the 192 valid votes polled. pic.twitter.com/Vd43CN41cY
— India at UN, NY (@IndiaUNNewYork) June 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.