ಇತ್ತೀಚಿನ ದಿನಗಳಲ್ಲಿ ಸನಾತನ ಧರ್ಮದ ಅಪಹಾಸ್ಯ ಮತ್ತು ಹಿಂದೂಗಳ ವಿರುದ್ಧ ತಲ್ಲಣಗೊಳಿಸುವಂತ ದ್ವೇಷದ ಭೀಕರ ವರದಿಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇತ್ತೀಚಿಗಷ್ಟೇ ಸುರ್ಲೀನ್ ಕೌರ್ ಎಂಬಾಕೆ ಹಿಂದೂಗಳ ಬಗ್ಗೆ ಅಶ್ಲೀಲ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ್ದಾರೆ (ಯೂಟ್ಯೂಬ್ ನಲ್ಲಿ ಲಭ್ಯವಿದೆ). ನಾವು ಇದನ್ನು ಗಂಭೀರವಾಗಿ ನೋಡಬೇಕು, ಏಕೆಂದರೆ ಇದು ಒಂದು ಪ್ರಕರಣವ, ಇಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ. ಕೆಲವರು ಹಿಂದೂ ಸಂಸ್ಕೃತಿಯ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡುತ್ತಿದ್ದಾರೆ ಮತ್ತು ತಮ್ಮನ್ನು ರಕ್ಷಿಸುವುದಕ್ಕಾಗಿ ತಮ್ಮ ವೃತ್ತಿಜೀವನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸುರ್ಲೀನ್ ಕೌರ್ ಪ್ರಕರಣ ಒಂದು ನಿದರ್ಶನ (ಸುರ್ಲೀನ್ ಕೌರ್ ಎಂಬಾಕೆ ವೃತ್ತಿಯಲ್ಲಿ stand-up comedian). ಇಂತಹವರ ಕ್ಷಮೆಯಾಚನೆಯು ಸಹಾನುಭೂತಿಯನ್ನು ಪಡೆಯಲು ಒಂದು ವ್ಯಾಕುಲತೆಯಾಗಿದೆಯೇ ಹೊರತು ಮನಃಪೂರ್ವಕ ಕ್ಷಮಾಪಣೆಯಂತೆ ಕಾಣುತ್ತಿಲ್ಲ.
ವ್ಯವಸ್ಥಿತವಾಗಿ ಹಿಂದೂಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೆ ನಡೆಯುತ್ತಿರುವ ಸೈದ್ಧಾಂತಿಕ ದಾಳಿಯನ್ನು ಸಾಮಾನ್ಯ ಎಂಬಂತೆ ಮಾಡಿರುವುದರ ಹಿಂದೆ ಕಾಣದ ಕೈಗಳ ಕುತಂತ್ರವಿದೆ ಎಂಬುದು ನಮ್ಮ ಸುತ್ತ ನಡೆಯುತ್ತಿರುವ ನಕಾರಾತ್ಮಕ ಬೆಳವಣಿಗೆಗಳಿಂದ ಸ್ಪಷ್ಟವಾಗಿ ಗ್ರಹಿಸಬಹುದಾಗಿದೆ.
ಹಿಂದೂ ಅಪಮಾನದ ಆಲೋಚನೆಗಳನ್ನು ವಾಕ್ ಸ್ವಾತಂತ್ರ್ಯ ಎಂದು ಕರೆಯುವಂತೆ ಮತ್ತು ಜಾತ್ಯತೀತತೆ ಎಂದು ಬಿಂಬಿಸುವಂತೆ ಮಾಡಲಾಗಿದೆ. ಪ್ರಜಾಪ್ರಭುತ್ವ ಎಂದರೆ ಮಿತಿಗಳಿಲ್ಲದೆ ಏನು ಬೇಕಾದರೂ ಮಾಡಬಹುದು ಎನ್ನುವ ರೀತಿಯಲ್ಲಿ ಕೆಲವು ವ್ಯಕ್ತಿಗಳು ಮತ್ತು ಗುಂಪುಗಳು ವರ್ತಿಸುತ್ತಿದ್ದಾರೆ.
ಭವ್ಯ ಹಿಂದೂ ನಾಗರಿಕತೆಯ ಅಸ್ತಿತ್ವಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿದ್ದರು, ಹಿಂದೂ ಇತಿಹಾಸವನ್ನು ವೈಭವೀಕರಿಸಬಾರದು ಅದು ಕೇವಲ ಕಥೆ ಮಾತ್ರ ಎನ್ನುವವರ ಬಗ್ಗೆ ಏನು ಹೇಳಬೇಕೋ !
ಹಿಂದೂ ನಾಗರೀಕತೆಯನ್ನು ನಾಶಮಾಡಲು ಹೊರಟಿರುವ ಈ ರೀತಿಯ ಪ್ರಯತ್ನಗಳನ್ನು ನೋಡಿದಾಗ, ಅಂತವರು ಹಿಂದೂಗಳ ನೋವಿಗೆ ಕುರುಡರಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ? ಅವರು ಉದ್ದೇಶಪೂರ್ವಕವಾಗಿ ನೋಯಿಸುತ್ತಿರುವುದೇಕೆ ಎಂದು ಆಶ್ಚರ್ಯಪಡಬೇಕೇ? ಯಾಕೆ ಹಿಂದೂಗಳ ಭಾವನೆಗಳಿಗೆ ಮಾತ್ರ ನೋವುಂಟು ಮಾಡುತ್ತಾರೆ ? ನೋವುಂಟು ಮಾಡಿ ಹಿಂದೂಗಳು ಮೌನವಾಗಿರಬೇಕು ಎನ್ನುತ್ತಾರೆ ಕೂಡ !
ಗೋಮಾತೆಯು ಸನಾತನ ಧರ್ಮದಲ್ಲಿ ತುಂಬಾ ಪವಿತ್ರ. ಹಿಂದೂಗಳ ಭಾವನೆಗಳನ್ನು ನೋಯಿಸಲೆಂದೇ, ಜಾತ್ಯತೀತ ಎಂದು ಕರೆಯಲ್ಪಡುವ ಕೆಲವು ನಕಲಿ ಧ್ವನಿಗಳು ಏಕೆ ತಮ್ಮ ಉಳಿವಿಗಾಗಿ ಬಲವಂತವಾಗಿ ಗೋಮಾತೆಯನ್ನೇ ಆಹಾರವನ್ನಾಗಿ ಬಯಸುತ್ತಾರೆ ? ಇತರ ಪ್ರಾಣಿಗಳಿಗೆ ಏನಾದರೂ ಸಂಭವಿಸಿದಾಗ ಕೆಲವರು ಪ್ರಾಣಿಗಳ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ ಹಾಗೂ ಕೆಲವು ಜನರು ತಮ್ಮನ್ನು ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತರಾಗಿ ತೋರಿಸಿಕೊಳ್ಳುತ್ತಾರೆ. ಆದರೆ ಇವರ ವರ್ತನೆಯ ಪ್ರಕಾರ ಗೋಮಾತೆಗೆ ಯಾವುದೇ ಹಕ್ಕುಗಳಿಲ್ಲವೇ ?
ಹಿಂದೂಗಳ ಮೇಲೆ ನಡೆಯುತ್ತಿರುವ ದ್ವೇಷ, ತಿರಸ್ಕಾರ ಮತ್ತು ಅಪಹಾಸ್ಯಗಳ ಹೊರತಾಗಿಯೂ, ಹಿಂದೂಗಳನ್ನೇ ತಪ್ಪಿತಸ್ಥರೆಂದು ಬಿಂಬಿಸುವಂತ ಸಿನಿಮಾಗಳನ್ನು ಸ್ಕ್ರಿಪ್ಟ್ ಮಾಡಲಾಗುತ್ತಿದೆ ಮತ್ತು ಪ್ರೇಕ್ಷಕರು ಅದನ್ನು ನೋಡಿ ನಗುತ್ತಾರೆ. ಇತರ ಧರ್ಮಿಯರು ಕೂಡಾ ಅಂತಹ ಟೀಕೆಗಳಿಗೆ ತೆರೆದುಕೊಳ್ಳುತ್ತಾರೆಯೇ ಅಥವಾ ಗೇಲಿ ಮಾಡಲು ಹಿಂದೂಗಳು ಮಾತ್ರ ಉಳಿದಿರುವ ಆಯ್ಕೆಯಾಗಿದ್ದಾರೆಯೇ ? P.K ಸಿನಿಮಾದಲ್ಲಿನ ಅಂಶವು ಹಿಂದೂಗಳ ಭಾವನೆಯನ್ನು ನೋಯಿಸಿತು. ಇಂತಹ ವಿಚಾರಗಳನ್ನು ಮನರಂಜನೆ ಎಂದು ಕರೆಯುವುದು ಸೂಕ್ತವೇ ?
ಯುವಕರು ಯಾವುದೇ ರಾಷ್ಟ್ರದ ಆರ್ಥಿಕ ಶಕ್ತಿಯ ಚಾಲನಾ ಶಕ್ತಿ. ಇಂತಹ ಯುವಕರಿಗೆ, ಹಿಂದೂಗಳನ್ನು ಅಣಕ ಮಾಡಿದ್ರೆ ಮಾತ್ರ ಸ್ವೀಕಾರಾರ್ಹ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅಂತಹ ದಾರಿತಪ್ಪಿದ ಜನಸಂಖ್ಯೆಯ ಭವಿಷ್ಯ ಏನಾಗಬಹುದು ? ಇಂತಹ ಘಟನೆಗಳ ವಿರುದ್ಧ ಎದ್ದೇಳುವ ಮತ್ತು ತಿರಸ್ಕರಿಸುವ ಧ್ವನಿಯನ್ನು ಏಕೆ ಬಹಿರಂಗವಾಗಿ ಯಾರೂ ಪ್ಪ್ರೋತ್ಸಾಹಿಸುವುದಿಲ್ಲ ?
ಅನೇಕ ಹಿಂದೂಗಳ ಕ್ರೂರ ಸಾವುಗಳು, ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ. ನಾವು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂಬುದನ್ನು ತಿಳಿಯಲೇ ಬೇಕು ! ಹೆಚ್ಚು ದುಃಖಕರ ಸಂಗತಿಯೇನೆಂದರೆ, ಇಂತಹ ಬೆಳವಣಿಗೆಗಳಿಂದಲೇ ಕೆಲ ಜನರು ಹಣ ಸಂಪಾದಿಸುತ್ತಿದ್ದಾರೆ ಮತ್ತು ತಮ್ಮ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
ಇದು ಖಂಡನೀಯ !
ನಮ್ಮ ಘನತೆಯ ಸವಾಲಿಗೆ ಹೋರಾಡಲು ನಾವು ಸಿದ್ಧರಾಗಿದ್ದೇವೆಯೇ ?
ಹಿಂದೂಗಳ ಭಾವನೆಗಳನ್ನು ನೋಯಿಸಲೆಂದೇ, ಜಾತ್ಯತೀತ ಎಂದು ಕರೆಯಲ್ಪಡುವ ಕೆಲವು ನಕಲಿ ಧ್ವನಿಗಳು, ಕಿಡಿಗೇಡಿತನದ ಮೂಲಕ ಆನಂದವನ್ನು ಪಡೆಯುತ್ತಿದ್ದಾರೆ. ವಿಧೇಯ ನಡವಳಿಕೆ ಮತ್ತು ಕೀಳರಿಮೆಯನ್ನು ಬ್ರಿಟಿಷ್ ಆಡಳಿತ ಮತ್ತು ಹೊರಗಿನ ಆಕ್ರಮಣದಿಂದ ತಾಯಿ ಭಾರತಾಂಬೆ ಮತ್ತು ಅವಳ ಮಕ್ಕಳ ಮೇಲೆ ಹೇರಲಾಯಿತು. ಇದರಿಂದಾಗಿ ನಾವು ದುರ್ಬಲರಾಗಬಹುದು ಮತ್ತು ನಮ್ಮ ಸಂಪತ್ತನ್ನು ನಮ್ಮಿಂದ ದೂರ ಮಾಡಬಹುದು ಎಂಬುದು ನಾವು ಬೀಳುವುದನ್ನು ನೋಡಲು ಬಯಸುವವರ ಲೆಕ್ಕಾಚಾರ. ಇದರೊಂದಿಗೆ, ನಾವು ವಿಭಜನೆಗೊಂಡಿದ್ದೇವೆ ಮತ್ತು ಪರಸ್ಪರ ವಿರುದ್ಧವಾಗಿ ಹೋರಾಡುತ್ತಿದ್ದೇವೆ. ಇದು ಮುಂದುವರಿದರೆ, ನಾವು ಅಸ್ತಿತ್ವದ ಬಿಕ್ಕಟ್ಟನ್ನು ಅನುಭವಿಸಬೇಕಾಗುತ್ತದೆ.
ನಾವು ನಮ್ಮ ಪ್ರಾದೇಶಿಕ ಗುರುತನ್ನು ಮೀರಿ ಸಾಮೂಹಿಕ ಹಿಂದೂ ಎಂಬ ಗುರುತಿನೊಂದಿಗೆ ಬೆಳೆಯುವುದು ಒಬ್ಬರ ಜವಾಬ್ದಾರಿ ಮಾತ್ರ ಅಲ್ಲ, ಎಲ್ಲರದ್ದೂ ಆಗಿದೆ. ಹಿಂದೂಗಳ ಸಂಸ್ಕೃತಿಯ ಬಗೆಗಿನ ಇಷ್ಟವಿಲ್ಲದಿರುವಿಕೆ ಮತ್ತು ತಿರಸ್ಕಾರದಂತ ಸವಾಲುಗಳನ್ನು ಎದುರಿಸಲು ಎಲ್ಲಾ ತರದ ವಿಭಿನ್ನ ಘಟಕಗಳ (“ಜಾತಿ/ಭೌಗೋಳಿಕ ಗಡಿ”) ಸಂಘಟಿತ ಹಿಂದೂ ಸಮಾಜವನ್ನು ರೂಪಿಸಲು ಒಗ್ಗೂಡಬೇಕು. ಡಾಕ್ಟರ್ ಜೀ ಮತ್ತು ವೀರ ಸಾವರ್ಕರ್ ಅವರಂತೆ ಅನೇಕ ಹಿರಿಯರು ಪ್ರಾದೇಶಿಕ ಗುರುತಿಗಾಗಿ ಹೋರಾಡಲಿಲ್ಲ, ಬದಲಿಗೆ ಸಾಮೂಹಿಕವಾಗಿ ಒಟ್ಟಿಗೆ ನಿಂತರು. ಅವರು ತಮ್ಮ ಜೀವನವನ್ನು ಮಾತೃಭೂಮಿಯ ಉದ್ದೇಶಕ್ಕಾಗಿ ಮುಡಿಪಾಗಿಟ್ಟರು ಮತ್ತು ಅವರ ಅನುಕರಣೀಯ ಜೀವನದ ಮೂಲಕ ನಮಗೆ ದಾರಿ ತೋರಿಸಿದರು. ನಾವು ಪ್ರಾದೇಶಿಕ ಗುರುತನ್ನು ಮೀರಿ ಸಾಮೂಹಿಕ ಹಿಂದು ಗುರುತಿನೊಂದಿಗೆ ಬೆಳೆಯಲು ಇದು ಸೂಕ್ತ ಸಮಯ, ಅಲ್ಲವೇ ?
✍️ ಕೊಚ್ಚಿ ಅನಿಂದಿತ್ ಗೌಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.